ಮೆಸ್ಕಾಂ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

Wednesday, March 16th, 2022
ACB

ಮಂಗಳೂರು  : ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ದಯಾಸುಂದರ್ ಅವರ ಮಂಗಳೂರಿನ ಮಲ್ಲಿಕಟ್ಟೆ ಬಳಿಯ ಮನೆ ಮತ್ತು ಕುಲಶೇಖರ ಕಚೇರಿ ಮೇಲೆ ದಾಳಿ ನಡೆದಿದೆ. ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕಿಂತ ಅಧಿಕ ಸಂಪತ್ತು ಹೊಂದಿರುವ ಆರೋಪದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ

ಮರವೂರು ಡ್ಯಾಂ ಬಳಿ ಈಜಾಡಲು ತೆರಳಿದ್ದ ಇಂಜಿನಿಯರ್ ನೀರಿನಲ್ಲಿ ಮುಳುಗಿ ಸಾವು

Tuesday, March 17th, 2020
prashanth-shetty

ಮಂಗಳೂರು: ಸ್ನೇಹಿತರ ಜೊತೆಗೂಡಿ ಈಜಾಡಲು ತೆರಳಿದ ವ್ಯಕ್ತಿಯೊಬ್ಬರು ಮುಳುಗಿ ಮೃತಪಟ್ಟ ಘಟನೆ ಮರವೂರು ಡ್ಯಾಂ ಬಳಿ ಮಂಗಳವಾರ ನಡೆದಿದೆ. ಮೃತರನ್ನು ಕಾವೂರು ಬೊಲ್ಪುಗುಡ್ಡೆ ನಿವಾಸಿ ಪ್ರಶಾಂತ್ ಶೆಟ್ಟಿ (44) ಎಂದು ಗುರುತಿಸಲಾಗಿದೆ. ಮೃತರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು , ಮಂಗಳಾ ಈಜು ಕೊಳದಲ್ಲಿ ಈಜಲು ತೆರಳುತ್ತಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈಜು ಕೊಳ ಮುಚ್ಚಿರುವುದರಿಂದ ಸ್ಥಳೀಯ ಕೆಲ ಯುವಕರೊಂದಿಗೆ ಮರವೂರು ಡ್ಯಾಂ ಬಳಿಯ ಹಳ್ಳದಲ್ಲಿ ಈಜಾಡಲು ತೆರಳಿದ್ದ ವೇಳೆ ಮುಳುಗಿ ಮೃತಪಟ್ಟಿದ್ದಾರೆ. ಇವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರಿದ್ದಾರೆ. […]

ವೈದ್ಯರು, ಇಂಜಿನಿಯರ್ ಮಾತ್ರ ದೇಶದ ಆಸ್ತಿಯಲ್ಲ : ಡಾ. ವಿನಯಕುಮಾರ್ ಹೆಗ್ಡೆ

Monday, September 18th, 2017
Bunts seminar

ಮಂಗಳೂರು : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಎದುರಿಸುವ ತರಬೇತಿ ಕೇಂದ್ರ ಮಂಗಳೂರಿನಲ್ಲಿಯೂ ಆರಂಭಗೊಳ್ಳಲಿದೆ. ನವದೆಹಲಿಯ ಚಾಣಕ್ಯ ಅಕಾಡೆಮಿ ಹಾಗೂ ಬಂಟರ ಯಾನೆ ನಾಡವರ ಸಂಘದ ಸಹಯೋಗದಲ್ಲಿ ಯುವಜನತೆಗೆ ಸುವರ್ಣವಕಾಶ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಸ್ಥಾಪಕ ಎ.ಕೆ. ಮಿಶ್ರ ಅವರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ‘ಯಶಸ್ಸಿನ ಕಲೆ’ ಕುರಿತ ವಿಚಾರಸಂಕಿರಣ ನಗರದ ಪುರಭವನದಲ್ಲಿ ನಡೆಯಿತು. ಅವಿಭಜಿತ ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳಿಗೆ ಅ.8ರಂದು ಮಂಗಳೂರಿನಲ್ಲಿ ನಡೆಯುವ ಅರ್ಹತಾ ಪರೀಕ್ಷೆಯಲ್ಲಿ […]