ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯ ನಿಧನ

Tuesday, August 27th, 2019
AKsubbayya

ಬೆಂಗಳೂರು : ರಾಜ್ಯದ ಹಿರಿಯ ರಾಜಕಾರಣಿ ಎ ಕೆ ಸುಬ್ಬಯ್ಯ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ರಾಜ್ಯ ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿದ್ದ ಎ ಕೆ ಸುಬ್ಬಯ್ಯ ಅವರು ನಂತರ ಬಿಜೆಪಿ ತೊರೆದಿದ್ದರು. ಕೊಡಗಿನವರಾದ ಅಜ್ಜಿಕುಟ್ಟಿರ ಕರಿಯಪ್ಪ ಸುಬ್ಬಯ್ಯ ತನ್ನ ರಾಜಕೀಯದ ಅರಂಭದ ದಿನಗಳಲ್ಲಿ ಫೈರ್‌ ಬ್ರ್ಯಾಂಡ್‌ ರಾಜಕಾರಣಿ ಎಂದು ಹೆಸರಾಗಿದ್ದರು. ಅಂದಿನ ಕಾಲದಲ್ಲಿ ಎ.ಬಿ. ವಾಜಪೇಯಿ ಅಂದರೆ ಅಖಿಲ ಭಾರತ ವಾಜಪೇಯಿ, ಎ.ಕೆ. ಸುಬ್ಬಯ್ಯ ಅಂದರೆ ಅಖಿಲ ಕರ್ನಾಟಕ ಸುಬ್ಬಯ್ಯ ಅಂತ ಜನಪ್ರಿಯರಾಗಿದ್ದರು. ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿದ್ದ […]

ನಿಮ್ಮನ್ನು ನೋಡುತ್ತಿದೆ ಕ್ಯಾಮರಾ… ಎಲ್ಲೆಂದರಲ್ಲಿ ಕಸ ಹಾಕುವ ಮುನ್ನ ಹುಷಾರ್‌!

Thursday, January 18th, 2018
Mangaluru

ಮಂಗಳೂರು: ಎಲ್ಲೆಂದರಲ್ಲಿ ಕಸ ಹಾಕಬೇಡಿ ಎಂದು ಸ್ಥಳೀಯಾಡಳಿತ ಅದೆಷ್ಟೇ ಹೇಳಿದರೂ ರಸ್ತೆಯಲ್ಲೇ ಕಸ ಎಸೆದು ಹೋಗುವವರಿಗೇನೂ ಕಮ್ಮಿಯಿಲ್ಲ. ಹೀಗೆ ಹೆದ್ದಾರಿ ಪಕ್ಕ ಕಸ ಎಸೆದು ಮಾಯವಾಗುವ `ಬುದ್ಧಿವಂತರನ್ನು’ ಪ್ರಜ್ಞಾವಂತರನ್ನಾಗಿಸಲು ಮಾಣಿ ಗ್ರಾಪಂ ಸಿಸಿ ಕ್ಯಾಮರಾ ಅಳವಡಿಸಿ ಕಾಯುವ ವಿನೂತನ ಯೋಜನೆ ರೂಪಿಸಿ ಪಣ ತೊಟ್ಟಿದೆ. ಸದಾ ಒಂದಿಲ್ಲೊಂದು ದಿನ ಕಾಣಿಸುವ ಕಸದ ರಾಶಿಗೆ ಮುಕ್ತಿ ದೊರಕಿಸಲು ಮೊದಲ ಹೆಜ್ಜೆಯಾಗಿ ಸಿಸಿ ಕ್ಯಾಮರಾ ಅಳವಡಿಸುವ ನಿರ್ಧಾರಕ್ಕೆ ಗ್ರಾಮ ಪಂಚಾಯತ್ ಬಂದಿದೆ. ಇದು ಸ್ವಚ್ಛ ಭಾರತದೆಡೆಗೆ ಮೊದಲ ಹೆಜ್ಜೆ ಎಂದು […]

ನಗರೋತ್ಥಾನ ಕಾಮಗಾರಿ: ತ್ವರಿತಗೊಳಿಸಲು ಸಚಿವರ ಸೂಚನೆ

Tuesday, March 10th, 2015
dc meeting

ಮಂಗಳೂರು : ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ನಗರೋತ್ಥಾನ ಯೋಜನೆ-2ರಡಿ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಮತತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಯೋಜನೆಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಕಾಮಗಾರಿಯ ನಿಗದಿತ ಕಾಲಾವಧಿ ಮುಗಿದಿದ್ದರೂ, ಹಲವು ಕಾಮಗಾರಿಗಳು ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಅವರು […]

ಬೆಲೆ ವಿಮೆ ವ್ಯಾಪ್ತಿಗೆ ಅಡಿಕೆ: ಪ್ರಸ್ತಾವನೆಗೆ ಡಿಸಿ ಸೂಚನೆ

Friday, May 30th, 2014
DC Mangalore

ಮಂಗಳೂರು : ಅಡಿಕೆ ಬೆಲೆಯನ್ನು ತೋಟಗಾರಿಕೆ ಇಲಾಖೆಯ ಮೂಲಕ ಬೆಳೆ ವಿಮೆ ವ್ಯಾಪ್ತಿಗೆ ತರುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಶುಕ್ರವಾರ ತಮ್ಮ ಕಚೇರಿಯಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮುಂಗಾರು 2014ರ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತಿದ್ದರು. ಅಡಿಕೆ ಅಲ್ಲದೆ, ಕಾಳುಮೆಣಸು, ಕೋಕಾ, ಅನಾನಸು, ಗೇರು ಕೃಷಿಯನ್ನು ಬೆಳೆ ವಿಮಾ ವ್ಯಾಪ್ತಿಗೆ ತರಲು ಪ್ರಸ್ತಾವನೆ ಸಿದ್ಧಪಡಿಸುವಂತೆ ಅವರು ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ದಕ್ಷಿಣ […]

ನಾಳೆಯಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ: ರೈ

Friday, February 28th, 2014
Ramanda-Rai

ಬಂಟ್ವಾಳ: ಮಾ. 1ರಿಂದ ಎಂಡೋ ಸಂತ್ರಸ್ತರ ಪುನರ್ ಸಮೀಕ್ಷೆ ನಡೆಸಲಾಗುವುದು. ಅರ್ಹ ಎಂಡೋ ಸಂತ್ರಸ್ತರನ್ನು ಪತ್ತೆ ಹಚ್ಚಿ ಅವರಿಗೂ ಸರ್ಕಾರದ ಸೌಲಭ್ಯ ಒದಗಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಇಲಾಖೆ ಇದರ ಆಶ್ರಯದಲ್ಲಿ ಗುರುವಾರ ಮಂಚಿಯ ಲಯನ್ಸ್ ಮಂದಿರದಲ್ಲಿ ನಡೆದ ಎಂಡೋ ಸಂತ್ರಸ್ತರ ಮಿತವೇತನದ (ಸ್ಟೈಫಂಡ್) ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಎಂಡೋ ಸಂತ್ರಸ್ತರಿಗೆ ಆದೇಶ ಪತ್ರ ವಿತರಿಸಿ […]