ಕದ್ರಿ ಉದ್ಯಾನವನ ಮತ್ತು ಜಿಂಕೆ ಉದ್ಯಾನವನ – ವಾಯುವಿಹಾರಕ್ಕೆ ಅವಕಾಶ

Saturday, May 23rd, 2020
Kadri Park

ಮಂಗಳೂರು: ಕೋವಿಡ್-19 ಲಾಕ್‍ಡೌನ್‍ನಿಂದ ಕದ್ರಿ ಉದ್ಯಾನವನ ಮತ್ತು ಜಿಂಕೆ ಉದ್ಯಾನವನಕ್ಕೆ ಸಾರ್ವಜನಿಕ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಸರ್ಕಾರದ ಆದೇಶದನ್ವಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಕದ್ರಿ ಉದ್ಯಾನವನವನ್ನು ಮೇ 20 ರಿಂದ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ಹಾಗೂ ಸಂಜೆ 4 ಗಂಟೆಯಿಂದ 7 ಗಂಟೆವರೆಗೆ ವಾಯುವಿಹಾರ(walking)ಕ್ಕೆ ಮಾತ್ರ ಅವಕಾಶವನ್ನು ಕಲ್ಪಿಸಲಾಗಿದೆ. ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು ಇವರ […]

ಜನವರಿ 3ರಿಂದ ಮಂಗಳೂರಿನಲ್ಲಿ ಕರಾವಳಿ ಉತ್ಸವವು ನಡೆಯಲಿದೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Tuesday, December 17th, 2019
karavali-utsava

ಮಂಗಳೂರು : 2019-20ನೇ ಸಾಲಿನ ಕರಾವಳಿ ಉತ್ಸವವು ಜನವರಿ 3ರಿಂದ ಮಂಗಳೂರಿನಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಕರಾವಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಮಂಗಳಾ ಕ್ರೀಡಾಂಗಣ ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನಾಡಿನ ಸಂಸ್ಕೃತಿ, ಕಲೆ, ಜನಪದ, ಕ್ರೀಡೆಯ ಅತ್ಯುನ್ನತ ಪ್ರದರ್ಶನ ಈ ಕರಾವಳಿ ಉತ್ಸವದಲ್ಲಿ ಪ್ರತಿಬಿಂಬಿತವಾಗಬೇಕು. ಈ ನಿಟ್ಟಿನಲ್ಲಿ ಉತ್ಸವದ ಎಲ್ಲಾ ಉಪಸಮಿತಿಗಳು […]

ಕದ್ರಿ ಉದ್ಯಾನವನ ದಲ್ಲಿ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Saturday, January 26th, 2019
Pala pushpa

ಮಂಗಳೂರು : ಮಂಗಳೂರಿನಲ್ಲಿ ಕದ್ರಿ ಉದ್ಯಾನವನ ದಲ್ಲಿ ಜನವರಿ 26 ರಿಂದ ಮೂರು ದಿನಗಳ ಕಾಲ ನಡೆಯಲಿರುವ  ಫಲಪುಷ್ಪ ಪ್ರದರ್ಶನವನ್ನು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಯು ಟಿ ಖಾದರ್  ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನವು ಜಿಲ್ಲೆಯ ಉದ್ದಗಲಕ್ಕೂ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನದಿ, ಸಮುದ್ರವು ಪ್ರವಾಸಿಗರ ತಾಣವಾಗಿಸುವ ಅಗತ್ಯವಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಉದ್ಯೋಗಾವಕಾಶಗಳೂ ದೊರಕಲಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಉಸ್ತುವಾರಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ. ಮಂಗಳೂರಿನ ಕದ್ರಿ ಉದ್ಯಾನವನ ದಲ್ಲಿ ದಕ್ಷಿಣ ಕನ್ನಡ […]

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಸಮಾರೋಪ

Wednesday, February 1st, 2017
palapushpa

ಮಂಗಳೂರು :  ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವು ಜ. 26 ರಿಂದ 29 ರವರೆಗೆ ಸುಗಮವಾಗಿ ನಡೆಯಿತು. ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ, ವಾರ್ತಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಆಯುಷ್ ಇಲಾಖೆ, ವಿವಿಧ ಯಂತ್ರೋಪಕರಣ ಕಂಪನಿಯ ಡೀಲರ್‍ಗಳು, ಹಾಗೂ ವಿವಿಧ ಸ್ತ್ರೀ ಶಕ್ತಿ ಸಂಘಟಣೆಯ ಮಳಿಗೆಗಳು ಮೆರಗು ನೀಡಿದವು. ಡಚ್ ಗುಲಾಬಿ ಹಾಗೂ ಇತರೆ ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ “ತುಳುನಾಡು ರಾಣಿ ಅಬ್ಬಕ್ಕ”ನ ಪ್ರತಿಮೆ ಹಾಗೂ ಡೈರಿ ಡೇ ಐಸ್‍ಕ್ರಿಮ್ […]