ಕೊಲೆ ಆರೋಪಿಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪೊದೆಗೆ ಎಸೆದರು

Monday, October 2nd, 2023
ಕೊಲೆ ಆರೋಪಿಯನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದು ಪೊದೆಗೆ ಎಸೆದರು

ಕಾಸರಗೋಡು : ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಪ್ರಕರಣದ ಆರೋಪಿಯೋರ್ವನ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಶಾಂತಿ ಪಳ್ಳದ ಅಬ್ದುಲ್ ರಶೀದ್ (38) ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಕುಂಬಳೆ ಸಮೀಪದ ಪೊದೆಯೊಂದರಲ್ಲಿ ಇಂದು ಬೆಳಿಗ್ಗೆ ಅಬ್ದುಲ್ ರಶೀದ್ ಮೃತ ದೇಹ ಪತ್ತೆಯಾಗಿದೆ. ಈತ ಮಧೂರು ಪಟ್ಲದ ಶಾನ್ ವಾಜ್ ( 24) ಕೊಲೆ ಪ್ರಕರಣದ ಆರೋಪಿ. ಸೋಮವಾರ ಬೆಳಿಗ್ಗೆ ಮೈದಾನಕ್ಕೆ ಆಟವಾಡಲು ಬಂದಿದ್ದ ಮಕ್ಕಳು ಮೈದಾನದಲ್ಲಿ ರಕ್ತದ ಕಲೆಗಳನ್ನು […]

ಕುಂಬಳೆಯ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟ ಮತ್ತೋರ್ವನ ಬಂಧನ

Monday, September 27th, 2021
Vishal Rathod

ಕಾಸರಗೋಡು : ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಕುಂಬಳೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಿಜಾಪುರದ ಮೂಲದ ವಿಶಾಲ್ ರಾಥೋಡ್ (22) ಎಂದು ಗುರುತಿಸಲಾಗಿದೆ. ಕುಂಬಳೆಯ ಸ್ನೇಹಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ವಿಶಾಲ್ ನನ್ನು ಬಂಧಿಸಲಾಗಿದೆ. ಸೆ. 17ರಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸ್ನೇಹಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಿಂದ ಲಭಿಸಿದ್ದ ಪತ್ರದಲ್ಲಿ ಇಬ್ಬರ ಮೊಬೈಲ್ ನಂಬ್ರ ಹಾಗೂ ಹೆಸರು ಬರೆದಿಡಲಾಗಿತ್ತು. ಇದನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಕುಂಬಳೆ ಠಾಣಾ ಪೊಲೀಸರು […]

ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕುಂಬಳೆಯ ಮನೆಯಲ್ಲಿ ಆತ್ಮಹತ್ಯೆ

Saturday, September 18th, 2021
sneha

ಮಂಜೇಶ್ವರ :  ಮಂಗಳೂರಿನ ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ವೀರ ವಿಠಲ ಕ್ಷೇತ್ರ ಸಮೀಪದ ಚಂದ್ರಹಾಸ ಎಂಬವರ ಪುತ್ರಿ ಸ್ನೇಹಾ (17) ಆತ್ಮಹತ್ಯೆ ಮಾಡಿಕೊಂಡವಳು. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದ ಸ್ನೇಹಾ ಕೆಲ ಸಮಯದ ಬಳಿಕ ಕೋಣೆಯೊಳಗೆ ತೆರಳಿದ್ದು, ರಾತ್ರಿ ಸುಮಾರು 7 ಗಂಟೆ ಕಳೆದರೂ ಕೋಣೆಯಿಂದ ಹೊರ ಬರದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಬಾಗಿಲು ಬಡಿದರೂ ತೆರೆಯಲಿಲ್ಲ. ಕೊನೆಗೆ […]

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಮಧ್ಯವರ್ತಿಯಾಗಿದ್ದ ಮಹಿಳೆಯ ಬಂಧನ

Wednesday, August 26th, 2020
Sunitha

ಕಾಸರಗೋಡು : ಮಹಿಳೆ ಯೊಬ್ಬಳು  ಮಧ್ಯವರ್ತಿ ಯಾಗಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಯುವಕರಿಬ್ಬರಿಗೆ ಸಹಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಕುಂಬ್ಳೆ ಪೊಲೀಸರು ಬಂಧಿಸಿದ್ದಾರೆ. ಕಟ್ಟದಂಗಡಿ ಪೆರಿಯಡ್ಕದ ಕಾಲನಿಯ ಸುನಿತಾ (30) ಬಂಧಿತಳು. ಘಟನೆ ಕುಂಬಳೆಯಿಂದ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಂಬಳೆಯಲ್ಲಿ ಉತ್ಸವ ನೋಡಲೆಂದು 2018 ರ ಡಿಸಂಬರ್ 18 ರಂದು ರಾತ್ರಿ ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದು, ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಾತ್ರಿ ಓರ್ವ […]

ಸಾವಿರಾರು ಮತ್ಸ್ಯಗಳ ಮಾರಣ ಹೋಮ: ಅಕಾರಣವಾಗಿ ಮೃತಪಟ್ಟ ಮೀನುಗಳು

Saturday, August 13th, 2016
Fishes

ಕುಂಬಳೆ: ಮೀನುಸಾಕಾಣೆ ಕೇಂದ್ರವೊಂದರಲ್ಲಿ ಸಾವಿರಾರು ಮೀನುಗಳು ಆಶ್ಚರ್ಯಕರ ರೀತಿಯಲ್ಲಿ ಶುಕ್ರವಾರ ಮೃತಪಟ್ಟಿದ್ದು ಕಾರಣಗಳು ಸ್ಪಷ್ಟಗೊಂಡಿಲ್ಲ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದ್ದು ಪರಿಸರದಲ್ಲಿ ವ್ಯಾಪಕ ಭಯಕ್ಕೂ ಕಾರಣವಾಗಿದೆ. ಕುಂಬಳೆ ಸಮೀಪದ ನಾಯ್ಕಾಪು ಮುಜುಂಗಾವು ರಸ್ತೆಯಲ್ಲಿ ಕಳೆದ 20 ತಿಂಗಳುಗಳಿಂದ ಮತ್ಸ್ಯೋಧ್ಯಮ ನಡೆಸುತ್ತಿರುವ ಖಾಸಗೀ ವ್ಯಕ್ತಿಗಳ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ 2 ಸಾವಿರದಷ್ಟು ಮೀನುಗಳು ಸತ್ತು ಬಿದ್ದ ಘಟನೆ ನಡೆದಿದೆ.ಇಲ್ಲಿಯ ಮಧುಸೂಧನ ಹಾಗೂ ಪುರುಷೋತ್ತಮ ಎಂಬವರು ಜೊತೆಯಾಗಿ ಹಲವು ಕಾಲಗಳಿಂದ ತಮ್ಮ ಖಾಸಗೀ ಜಮೀನಿನಲ್ಲಿ ಮೀನುಗಳನ್ನು ಸಾಕುತ್ತಿದ್ದು ಉತ್ತಮ ವ್ಯವಹಾರಗಳು ನಡೆಯುತ್ತಿದ್ದವು. […]

ಕುಂಬಳೆ ಬ್ಲಾಕ್ ಮಟ್ಟದ ಕಾಲ್ನಡೆ ಜಾಥಾ

Monday, August 8th, 2016
Kalnade-jaatha

ಪೆರ್ಲ: ಡಿವೈಎಫ್‌ಐ ವತಿಯಿಂದ ಕಾಸರಗೋಡಿನಲ್ಲಿ ಆ.15 ನಡೆಯುವ ಯುವ ಸಾಗರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಕುಂಬಳೆ ಬ್ಲಾಕ್ ಮಟ್ಟದ ಕಾಲ್ನಡೆ ಜಾಥಾವನ್ನು ಪೆರ್ಲದಿಂದ ಪ್ರಾರಂಭಿಸಲಾಯಿತು. ಡಿವೈಎಫ್‌ಐ ಎಣ್ಮಕಜೆ ವಿಲೇಜ್ ಕಾರ್ಯದರ್ಶಿ ಮಣಿಕಂಠನ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಿವ್‌ಜಿ ವೆಳ್ಳಿಕೋತ್ ಜಾಥಾ ನಾಯಕ ಕೆ.ಸಬೀರ್ ಅವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಬ್ಲಾಕ್ ಕಾರ್ಯದರ್ಶಿ ನಾಸಿರುದ್ದೀನ್, ಸಿ.ಎ.ಸುಬೈರ್, ವಿಠಲ ರೈ, ಅವಿನಾಶ್ ಸಿ.ಎಚ್, ಮಂಜುನಾಥ ಪಿ.ಕೆ, ಸಚಿತಾ ರೈ, ವಿನೋದ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.