ಮೀನು ಹಿಡಿಯಲು ಹೋದ ಯುವಕ ಹೆಣವಾಗಿ ಪತ್ತೆ

Friday, July 3rd, 2020
prakash Naik

ಉಪ್ಪಿನಂಗಡಿ  : ಕುಮಾರಧಾರ ನದಿಯಲ್ಲಿ ಮೀನು ಹಿಡಿಯಲು ಹೋದ ಯುವಕ ನೀರಿನಲ್ಲಿ ಮುಳುಗಿ ನಾಪತ್ತೆಗಿದ್ದು, ಮೃತದೇಹ ಸ್ವಲ್ಪ ದೂರದಲ್ಲಿ ನದಿಯಲ್ಲಿಶುಕ್ರವಾರ  ಮಧ್ಯಾಹ್ನ ಪತ್ತೆಯಾಗಿದೆ. ಕಡಬ ತಾಲೂಕಿನ ಎಡಮಂಗಲದ ದೊಳ್ತಿಲ ಎಂಬಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಗುರುವಾರ ತಡರಾತ್ರಿ ನಡೆದಿತ್ತು. ನಾಪತ್ತೆಯಾದ ಯುವಕನನ್ನು ದೊಳ್ತಿಲ ರಾಮಣ್ಣ ನಾಯ್ಕ್ ಅವರ ಪುತ್ರ ಪ್ರಕಾಶ್ 26(ವ) ಎಂದು ಗುರುತಿಸಲಾಗಿದ್ದು, ಪ್ರಕಾಶ್ ಹಾಗೂ ತನ್ನ ಸ್ನೇಹಿತರಿಬ್ಬರ ಜೊತೆ ಮೀನು ಹಿಡಿಯಲು ಬಿಟ್ಟಿದ್ದ ಬಲೆಯನ್ನು ಈಜಿ ತರುತ್ತಿರುವಾಗ […]

ಕುಮಾರಧಾರ ನದಿಯಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆಯ ಪತಿಯ ಶವ

Monday, March 30th, 2020
Kulkunda

ಸುಬ್ರಹ್ಮಣ್ಯ : ಕುಮಾರಧಾರ ನದಿಯಲ್ಲಿ ಶವವೊಂದು  ಸೋಮವಾರ ತೇಲುತ್ತಿರುವುದು ಕಂಡುಬಂದಿದ್ದು ಈ ಕುರಿತಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರನ್ನು ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆಯ ಪತಿ ಬಾಬು ಕುಲ್ಕುಂದ ಎಂದು ಗುರುತಿಸಲಾಗಿದೆ. ಸ್ಥಳ್ಕಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಶವವನ್ನು ಮೇಲಕ್ಕೆ ಎತ್ತಿದ್ದು ಮೃತರು ಗ್ರಾ.ಪಂ. ಸದಸ್ಯೆಯ ಪತಿ ಬಾಬು ಕುಲ್ಕುಂದ ಎಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಎರಡು ದಿನಗಳ ಹಿಂದೆಯೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಜಾರಿ ನದಿಗೆ ಬಿದ್ದು ಮೃತಪಟ್ಟಿರಬಹುದು […]

ಕಡಬ : ಕುಮಾರಧಾರ ನದಿಯಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆ

Friday, February 28th, 2020
kumaradhara

ಕಡಬ : ಸ್ನಾನಕ್ಕೆಂದು ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಮಾರಧಾರ ನದಿಯಲ್ಲಿ ಗುರುವಾರದಂದು ನಡೆದಿದೆ. ಮೃತಪಟ್ಟ ಯುವಕನನ್ನು ಕೊಯಿಲ ಗ್ರಾಮದ ಜನತಾ ಕಾಲೋನಿ ನಿವಾಸಿ ಯೂಸುಫ್ ಎಂಬವರ ಪುತ್ರ ಅರ್ಫಾಝ್ (22) ಎಂದು ಗುರುತಿಸಲಾಗಿದೆ. ಅರ್ಫಾಝ್ ಗುರುವಾರದಂದು ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗಿಳಿದಿದ್ದು, ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ವಿಚಾರ ತಿಳಿದ ಕಡಬ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯ ಮುಳುಗು ತಜ್ಞರ ಸಹಕಾರದೊಂದಿಗೆ ನದಿಯಲ್ಲಿ ಶೋಧ […]

‘ಸುಬ್ರಹ್ಮಣ್ಯ ಕ್ಷೇತ್ರದ ತ್ಯಾಜ್ಯ ಕುಮಾರಧಾರ ನದಿಗೆ, ಕ್ರಮ ಕೈಗೊಳ್ಳದಿದ್ದರೆ ಹೋರಾಟ’

Thursday, June 6th, 2019
kss-college

ಮಂಗಳೂರು : ಸುಬ್ರಹ್ಮಣ್ಯ ಕ್ಷೇತ್ರದ ಕೆ.ಎಸ್‌.ಎಸ್ ಕಾಲೇಜಿನ ಬಳಿ ಕ್ಷೇತ್ರದ ತ್ಯಾಜ್ಯ ನೀರು ಸಂಸ್ಕರಣೆಗೆ ಶುದ್ಧೀಕರಣ ಘಟಕ ನಿರ್ಮಾಣವಾಗಿದ್ದರೂ, ಕೊಳಚೆ ನೀರು ಮಾತ್ರ ಕುಮಾರಧಾರ ನದಿಗೆ ಹರಿದು ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನ ತರಲಾಗಿದ್ದು, ಇದೀಗ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗುತ್ತಿದೆ. ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರದ ಎದುರು ಹೋರಾಟ ನಡೆಸಲಾಗುವುದು ಎಂದು ನೀತಿ ತಂಡ ಹೇಳಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್, ಈ ಬಗ್ಗೆ ಇಂದು ಜಿಲ್ಲಾಧಿಕಾರಿಗೆ […]

ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಮೃತ್ಯು

Thursday, December 14th, 2017
kumaradara

ಸುಬ್ರಹ್ಮಣ್ಯ: ಸ್ನೇಹಿತರೊಂದಿಗೆ ಮೋಜು ಮಾಡಲೆಂದು ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮುಂಗುಳಿಪಾದೆ ಎಂಬಲ್ಲಿನ ಕುಮಾರಧಾರ ನದಿ ತಟಕ್ಕೆ ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಗಣೇಶ ಎಂಬವರ ಪುತ್ರ ಜಯಪ್ರಕಾಶ್ (19) ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರಾದ ಮಿಥುನ್, ಸತೀಶ್, ಗುರುಪ್ರಸಾದ್, ಪ್ರವೀಣ್, ಅನಿಲ್ ಕುಮಾರ್ ಅವರೊಂದಿಗೆ ಮೋಜು ಮಾಡಲೆಂದು ಬುಧವಾರ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಮಧ್ಯಾಹ್ನ ಹೊಳೆ ಬದಿಯಲ್ಲಿ ಊಟ ಮಾಡಿದ ನಂತರ ಸ್ನಾನಕ್ಕಿಳಿದಿದ್ದ ಜಯಪ್ರಕಾಶ್ […]

ಚಾರ್ವಾಕ ಗ್ರಾಮದ ಗುಜ್ಜರ್ಮೆ ಬಳಿಯ ಕುಮಾರಧಾರ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ ಇಬ್ಬರು ನೀರುಪಾಲು

Friday, December 16th, 2016
Kumaradhara

ಪುತ್ತೂರು: ಬುಡೇರಿಯ ದೈವಸ್ಥಾನದ ನೇಮಕ್ಕೆ ನದಿ ದಾಟುತ್ತಿದ್ದಾಗ ಚಾರ್ವಾಕ ಗ್ರಾಮದ ಗುಜ್ಜರ್ಮೆ ಬಳಿಯ ಕುಮಾರಧಾರ ನದಿಯಲ್ಲಿ ತೆಪ್ಪ ದುರಂತ ಸಂಭವಿಸಿ ಇಬ್ಬರು ನೀರುಪಾಲಾಗಿದ್ದಾರೆ. ಕಿಂಞಂಣ್ಣ ಗೌಡ(60) ಗಣೇಶ್ (63) ನೀರು ಪಾಲಾದವರು ಎನ್ನಲಾಗಿದೆ. ನೀರುಪಾಲಾದವರಿಗಾಗಿ ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.

ಚಿಲ್ಲರೆ ವಿವಾದ ನದಿಗೆ ಹಾರಿದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ

Monday, September 26th, 2016
devadas

ಸುಬ್ರಹ್ಮಣ್ಯ: ಬಸ್‌ನಲ್ಲಿ ಪ್ರಯಾಣಿಸುತಿದ್ದ ಯುವತಿಯೊಬ್ಬಳು ಚಿಲ್ಲರೆ ಹಣ ವಿಚಾರವಾಗಿ ಬಸ್ ಕಂಡಕ್ಟರ್ ಜತೆ ನಡೆಸಿದ ವಿವಾದಕ್ಕೆ ಸಂಬಂದಿಸಿ ಮನನೊಂದ ಬಸ್ ಕಂಡಕ್ಟರ್ ಚಲಿಸುತಿದ್ದ ಬಸ್‌ನಿಂದ ನದಿಗೆ ಹಾರಿದ ಘಟನೆ ರವಿವಾರ ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ಸಂಭವಿಸಿದೆ. ಕುಮಾರಧಾರ ನದಿನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಮಂಗಳೂರಿನ ಗುರುಪುರ ಕೈಕಂಬ ದೇವದಾಸ್(41) ಆಗಿದ್ದಾರೆ. ಮಂಗಳೂರು ಸಾರಿಗೆ ಸಂಸ್ಥೆಯ ಒಂದನೆ ಘಟಕಕ್ಕೆ ಸೇರಿದ ಬಸ್‌ನಲ್ಲಿ ದೇವದಾಸ್ ನಿರ್ವಾಹಕ ಕರ್ತವ್ಯದಲ್ಲಿದ್ದ. ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 6.30 ಕ್ಕೆ ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ […]

ತಮಿಳುನಾಡು ಚೆನೈ ಮಹಾ ನೆರೆಯ ಬಗ್ಗೆ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ

Monday, December 7th, 2015
Prarthane

ಮಂಗಳೂರು : ಚೆನೈ ಮಹಾ ನೆರೆಯ ದುರಂತದ ಸಂತ್ರಸ್ತರ ಕ್ಷೇಮಕ್ಕಾಗಿ ಹಾಗೂ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ತಿಕ ಸೋಮವಾರವಾದ ತಾ. ಡಿ.7ಶ್ರೀ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಗಳು, ಪ್ರಧಾನ ಅರ್ಚಕರಾದ ರಾಮಚಂದ್ರ ಅಡಿಗರು ಮಹಾರುದ್ರಾಭಿಷೇಕ ನೆರವೇರಿಸಿದರು. ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮಾರ್ಗದರ್ಶನದಲ್ಲಿ ಜರಗಿದ ಈ ಪ್ರಾರ್ಥನೆಯ ಸಂದರ್ಭದಲ್ಲಿ ದೇಳದ ಆಡಳಿತ ಕಾರ‍್ಯನಿರ್ವಾಹಣಾಧಿಕಾರಿ ನಿಂಗಯ್ಯ, ಆಡಳಿತಾಧಿಕಾರಿ ಶ್ರೀನಿವಾಸ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜು ಮೊಗವೀರ, ಕೃಷ್ಣ ಜನ್ಮೋತ್ಸವ […]