ಮಗಳನ್ನು ತಂದೆಯೇ ಮಚ್ಚಿನಿಂದ ಕೊಚ್ಚಿ ಬರ್ಬರ ಹತ್ಯೆ

Saturday, June 19th, 2021
gayatri

ಮೈಸೂರು: ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದ ತನ್ನ ತಂದೆಗೆ ಊಟ ಕೊಂಡುಹೋಗಿದ್ದ ಮಗಳನ್ನು ತಂದೆಯೇ  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ. ಗಾಯತ್ರಿ (19) ಕೊಲೆಯಾದ ಯುವತಿ. ತಂದೆ ಜಯರಾಂನಿಂದಲೇ ಮರ್ಯಾದೆ ಹತ್ಯೆಯಾಗಿದೆ. ಮಗಳು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದು, ಇದರಿಂದ ಸಮಾಜದಲ್ಲಿ ತಲೆತಗ್ಗಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆನ್ನಲಾಗಿದೆ. ಈ ವಿಷಯವಾಗಿ ಒಂದು ತಿಂಗಳಿನಿಂದ ಮನೆಯಲ್ಲಿ ಪೋಷಕರು ಮತ್ತು ಯುವತಿಯ ನಡುವೆ ಗಲಾಟೆ ನಡೆಯುತ್ತಿತ್ತು. ಈಕೆ ಪಟ್ಟಣದ ಉಪ್ಪಾರಗೇರಿ ಬಡಾವಣೆಯ ಯುವಕನನ್ನು […]

ಮುಂಗಾರು ಹಂಗಾಮು ಆರಂಭ, ಕೃಷಿ ಚಟುವಟಿಕೆಗೆ ಅಗತ್ಯ ಕ್ರಮ

Monday, May 31st, 2021
Gadaga-DC

ಗದಗ : ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಶೇಕಡಾವಾರು ಪ್ರಮಾಣ ಇಳಿಮುಖವಾಗುತ್ತಿದೆ. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಕೊರೋನಾ ಮಾರ್ಗಸೂಚಿಗಳು ಅಡ್ಡಿಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ತಿಳಿಸಿದರು. ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಹಂಗಾಮು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿದ್ದು ಕೃಷಿ ಚಟುವಟಿಕೆಗೆ ಅಗತ್ಯವಿರುವ […]

ವಿದ್ಯುತ್‌ ಕಡಿತ: ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ ಕೊರತೆ

Thursday, November 24th, 2016
Curent

ಮಂಗಳೂರು: ಈ ಬಾರಿ ಮುಂಗಾರು ಕೈಕೊಟ್ಟಿದೆ. ಚಳಿಗಾಲದ ಹೆಸರೇ ಇಲ್ಲದಂತೆ ಬೇಸಗೆ ಸಮೀಪಿಸುತ್ತಿದೆ. ಇದರೊಂದಿಗೆ ವಿದ್ಯುತ್‌ ಕಡಿತದ ಬಿಸಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ತಟ್ಟಲಾರಂಬಿಸಿದ್ದು, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಿಗೆ ವಿದ್ಯುತ್‌ ಕೊರತೆ ಕಾಡುತ್ತಿದೆ. ಮೆಸ್ಕಾಂ ತಿಳಿಸುವ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗ ಅಧಿಕೃತ ಲೋಡ್‌ಶೆಡ್ಡಿಂಗ್‌ ಜಾರಿಯಲ್ಲಿಲ್ಲ. ಆದರೆ, ಅನಧಿಕೃತವಾಗಿ ವಿದ್ಯುತ್‌ ಕಡಿತ ಮಾತ್ರ ಸಾಮಾನ್ಯವಾಗಿದೆ. ಈಗ ಇದ್ದ ವಿದ್ಯುತ್‌ ಅರೆಘಳಿಗೆಯಲ್ಲಿಯೇ ಮಾಯವಾಗುತ್ತಿದೆ. ಮತ್ತೆ ಯಾವ ಸಮಯಕ್ಕೆ ಬರುತ್ತದೆ ಎಂಬುದು ಇಲ್ಲಿ ಯಕ್ಷಪ್ರಶ್ನೆ. ಮಂಗಳೂರು ತಾಲೂಕಿಗೆ […]