ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಛೇರಿ ಒಳಗೆ ರೈತರ ಪ್ರತಿಭಟನೆ

Saturday, January 4th, 2020
udupi

ಉಡುಪಿ : ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರು ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಛೇರಿ ಬಳಿ ಉಡುಪಿ ಜಿಲ್ಲಾ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿತ್ತು. ಪ್ರತಿಭಟನೆ ನಡೆಸುತಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಜಗದೀಶ್ ಆಗಮಿಸಿದರೂ ಅಹವಾಲು ಆಲಿಸದೆ ಇರುವುದರಿಂದ ಆಕ್ರೋಶಗೊಂಡ ರೈತರು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿದರು. ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಛೇರಿ ಆವರಣದೊಳಗೆ ನುಗ್ಗಿದರು. ಆವರಣದೊಳಗೆ ನುಗ್ಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ದಿಕ್ಕಾರ […]

ಜೈಪುರ : ಗುಜರಾತಿ ಶೈಲಿಯ ನೃತ್ಯ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು

Tuesday, October 8th, 2019
jaipur

ಜೈಪುರ : ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ ಮೌಂಟ್ ಅಬುದಲ್ಲಿ ನಡೆದಿದೆ. ಜಗದೀಶ್ ಮೃತಪಟ್ಟ ವ್ಯಕ್ತಿ. ಜಗದೀಶ್ ಮೂಲತಃ ಗುಜರಾತ್‍ನ ಸುರತ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ಐವರು ದಂಪತಿ ಜೊತೆ ವೀಕೆಂಡ್ ಕಳೆಯಲು ರಾಜಸ್ಥಾನದ ಮೌಂಟ್ ಅಬುಗೆ ತೆರಳಿದ್ದರು. ಇಲ್ಲಿ ಅವರು ಗರ್ಬಾ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಈ ವೀಕೆಂಡ್ ಕಳೆಯಲು ನಾವು ಸುರತ್‍ನಿಂದ ಮೌಂಟ್ ಅಬುಗೆ ಬಂದಿದ್ದೇವು. ಭಾನುವಾರ ನಾವು ಹೊರಗೆ ಸುತ್ತಾಡಿ […]

ಮಂಗಳೂರು : ಮತದಾರರ ಪಟ್ಟಿ ಪರಿಶೀಲನೆ; ಡಿಸಿ ಸಿಂಧೂ ಬಿ. ರೂಪೇಶ್‌

Wednesday, September 18th, 2019
sindhu

ಮಂಗಳೂರು : ಮತದಾರರ ಪಟ್ಟಿಯ ದೋಷಗಳನ್ನು ಸರಿಪಡಿಸಲು ಮತದಾರರ ಪಟ್ಟಿ ಪರಿಶೀಲನೆಯನ್ನು ಸೆ.1ರಿಂದ ಅ.15ರ ವರೆಗೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾವಣ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಶೀಲನೆ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮನೆಗಳಿಗೆ ಬಿಎಲ್‌ಒಗಳು ಸೆ.1ರಿಂದ 30ರ ವರೆಗೆ ಭೇಟಿ ನೀಡಲಿದ್ದಾರೆ. ನಾಗರಿಕರು ಅಗತ್ಯ ಯಾವುದಾದರೂ ಒಂದು ದಾಖಲೆ ನೀಡಿ ತಿದ್ದುಪಡಿ ಇದ್ದಲ್ಲಿ ಪರಿಶೀಲಿಸಬಹುದು. ಬಿಎಲ್‌ಒಗಳು ಆ್ಯಪ್‌ ಮೂಲಕ […]

ರಾಜ್ಯಮಟ್ಟದ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ

Saturday, August 31st, 2019
udupi

ಉಡುಪಿ : ಜಿಲ್ಲೆಯಲ್ಲಿ ಮೀನುಗಾರಿಕೆ ಹಾಗೂ ಬಂದರು ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ವಿಳಂಬವಾಗಿದ್ದು, ಈ ಬಗ್ಗೆ ರಾಜ್ಯಮಟ್ಟದ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕಾ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊಡೇರಿಯಲ್ಲಿ 33 ಕೋಟಿ ರೂ ವೆಚ್ಚದ ಬ್ರೇಕ್ ವಾಟರ್ ಕಾಮಗಾರಿ ಜನವರಿ […]

ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Saturday, November 24th, 2018
kadaba

ಕಡಬ: ಟ್ಯಾಂಕರ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಡಬದ ನೆಲ್ಯಾಡಿ ಗ್ರಾಮದ ಆರ್ಲದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಲಾರಿಯು ಮಗುಚಿ ಬಿದ್ದಿದೆ. ಕೊನಾಲು ಗ್ರಾಮದ ಕಡೆಂಬಿಲ ನಿವಾಸಿ ಅಣ್ಣಿ ಪೂಜಾರಿ ಎಂಬುವರ ಪುತ್ರ ಜಗದೀಶ್ (44) ಮೃತರು. ಜಗದೀಶ್ ಬೈಕ್ನಲ್ಲಿ ನೆಲ್ಯಾಡಿಯಿಂದ ಮನೆಗೆ ಹೋಗುತ್ತಿದ್ದಾಗ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಟ್ಯಾಂಕರ್ ಬೈಕ್ಗೆ ಗುದ್ದಿದೆ. ಪರಿಣಾಮ ಜಗದೀಶ್ ಅವರ ದೇಹ ಛಿದ್ರಗೊಂಡು ಅವರು ಸ್ಥಳದಲ್ಲೇ […]

ಬಿಎಂಪಿಯ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್​ ಅಧಿಕಾರಿಗಳು ಎಸಿಬಿ ಬಲೆಗೆ

Tuesday, October 23rd, 2018
asb-arrest

ಬೆಂಗಳೂರು: ಮತ್ತೆ ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚೆನ್ನಮನ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಬಿಬಿಎಂಪಿಯ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್ಗಳಾದ ಜಗದೀಶ್ ಮತ್ತು ಜೈ ಕುಮಾರ್ ಎಸಿಬಿ ಬಲೆಗೆ ಬಿದ್ದವರು. ಈ ಇಬ್ಬರು ಹೆಲ್ತ್ ಇನ್ಸ್‌ಪೆಕ್ಟರ್ಗಳು ಹೋಟೆಲೊಂದರ ಲೈಸನ್ಸ್ ನವೀಕರಣಕ್ಕೆ ಅದರ ಮಾಲೀಕರಿಂದ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇಬ್ಬರು ಅಧಿಕಾರಿಗಳ ಡ್ರಾನಲ್ಲಿ ದಾಖಲೆಯಿಲ್ಲದ 4 ಲಕ್ಷ ನಗದು ಪತ್ತೆಯಾಗಿದ್ದು, ಇಬ್ಬರು ಅಧಿಕಾರಿಗಳನ್ನ […]

16 ಮೊಬೈಲ್​ನ್ನು ಎಗರಿಸಿದ್ದ ಆರೋಪಿ ಪೊಲೀಸರ ವಶಕ್ಕೆ..!

Monday, August 13th, 2018
arrested

ಮಂಗಳೂರು: ಬೆಂಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ‌ಪುತ್ತೂರಿಗೆ ಕಳುಹಿಸಲಾದ ಪಾರ್ಸಲ್ಅನ್ನು ತಲುಪಿಸದೆ 16 ಮೊಬೈಲ್ನ್ನು ಎಗರಿಸಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ತಡಸ ಗ್ರಾಮದ ರವಿ ಎಂಬುವನು ಬೆಂಗಳೂರಿನಿಂದ ಪುತ್ತೂರುಗೆ ತಲುಪಿಸಬೇಕಾಗಿದ್ದ ಮೊಬೈಲ್ ಪಾರ್ಸಲ್ಗೆ ಕನ್ನ ಹಾಕಿ ಇದೀಗ ಬಂಧಿತನಾಗಿದ್ದಾನೆ. ಈತ ಬೆಂಗಳೂರಿನ ಜಯದೀಪ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಪಾರ್ಸಲ್ಅನ್ನು ಅವರ ಪುತ್ತೂರು ಪ್ರತಿನಿಧಿಗೆ ತಲುಪಿಸಬೇಕಿತ್ತು. ಆದರೆ ಅದನ್ನು ಸಂಬಂಧಪಟ್ಟವರಿಗೆ ತಲುಪಿಸದೆ, 4 ಪಾರ್ಸಲ್ನಲ್ಲಿದ್ದ 2.66 ಲಕ್ಷ ಮೌಲ್ಯದ ಒಟ್ಟು […]

ಚದುರಂಗ ಪಂದ್ಯಾವಳಿ 2018: ಪ್ರಸಿದ್ಧಿ ಭಟ್ ಮತ್ತು ಜಗದೀಶ್ ವಿಜೇತರು

Wednesday, August 8th, 2018
chess

ಮೈಸೂರು  : ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಹಾಗು ಬಾಲಕಿಯರ 17 ವರ್ಷದ ಒಳಗಿನವರ ಚದುರಂಗ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜಗದೀಶ್ ಪಿ ಹಾಗು ಮೈಸೂರಿನ ಪ್ರಸಿದ್ಧಿ ಭಟ್ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೈಸೂರು ಚೆಸ್ ಸೆಂಟರ್ ಹಾಗು ಯುನೈಟೆಡ್‍ ಕರ್ನಾಟಕ ಚೆಸ್ ಸಂಸ್ಥೆಯ ಸಹಯೋಗದೊಂದಿಗೆ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ರಾಘವೇಂದ್ರ ಮಟದಲ್ಲಿ ಆಗಷ್ಟ್ 3 ರಿಂದ 5ರವರೆಗೆ ನಡೆಸಲಾಗಿತ್ತು. ಬಾಲಕರ ವಿಭಾಗದಲ್ಲಿ ಪುತ್ತೂರಿನ ಶ್ರೀಕೃಷ್ಣ  ಪ್ರಣಾಮ ಎರಡನೇ ಸ್ಥಾನ ಗಳಿಸಿದರೆ ಹುಬ್ಬಳ್ಳಿಯ ಶ್ರಿಯಾ ರೇವಂಕರ್ ಬಾಲಕಿಯರ ವಿಭಾಗದಲ್ಲಿ ರನ್ನರ್ […]

ಯುವತಿಯ ನಗ್ನ ಫೋಟೋ ವೈರಲ್..ಮೂವರ ಆರೋಪಿಗಳ ಬಂಧನ!

Saturday, July 14th, 2018
arrested

ಮಂಗಳೂರು: ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆ  ನಗ್ನ ಫೋಟೋ ತೆಗೆಸಿ ಕೊಂಡು ವೈರಲ್ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ. ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು. ಸಂದೇಶ್ ಮೊದಲು ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಆಕೆಯ ಜೊತೆಗೆ ಸಲಿಗೆ ಹೆಚ್ಚಿಸಿಕೊಂಡಿದ್ದನಂತೆ. ನಂತರ ಆಕೆಯನ್ನ ಪುಸಲಾಯಿಸಿ ನಗ್ನ ಚಿತ್ರಗಳನ್ನು ಪಡೆದು ತನ್ನ ಸ್ನೇಹಿತರಾದ ಜಗದೀಶ್ ಮತ್ತು ನವೀನ್ ಜೊತೆ ಶೇರ್ ಮಾಡಿದ್ದಲ್ಲದೇ ಸಾಮಾಜಿಕ ಜಾಲತಾಣಕ್ಕೂ ಅಪ್ಲೋಡ್ ಮಾಡಿದ್ದ ಎಂಬ ಆರೋಪ […]

ಮೂಡಬಿದ್ರೆಯಲ್ಲಿ ಹಳೆ ನಿಷ್ಠಾವಂತ ಅಮರನಾಥ್ ಶೆಟ್ಟಿಗೆ ಜೆಡಿಎಸ್ ಟಿಕೆಟ್

Saturday, April 21st, 2018
amaranath

ಮಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಹಳೆ ನಿಷ್ಠಾವಂತ ಮುಖಂಡ ಅಮರನಾಥ್ ಶೆಟ್ಟಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಈ ಮೂಲಕ ಮುಲ್ಕಿ – ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರಬಲ ಸ್ಪರ್ಧೆ ನೀಡಲು ತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆಗೆ ವೇದಿಗೆ ಸಿದ್ದವಾಗಿದೆ. ಮೂಲ್ಕಿ ಮೂಡಬಿದ್ರೆ ಕ್ಷೇತ್ರ ದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಲ್ಕಿಯ ಉದ್ಯಮಿ ಜೀವನ್ ಶೆಟ್ಟಿ ಅವರನ್ನು ಕಣಕ್ಕಿಳಿಸಲು ನಿನ್ನೆ ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದರು. ಆದರೆ […]