‘ಕೊರೋನಾ ದಂತಹ ಆಪತ್ಕಾಲದಲ್ಲಿ ‘ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ರಾತ್ರಿ 12 ಗಂಟೆಗೆ ಹೇಗೆ ಮಾಡಬೇಕು ?

Tuesday, August 11th, 2020
krishnanshtami

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ. ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ […]

ಮಂಗಳೂರು : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ, ತರಕಾರಿಗಳಿಗೆ ಬೆಲೆ ಏರಿಕೆ

Friday, August 23rd, 2019
flower

ಮಂಗಳೂರು : ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ, ಹಣ್ಣು-ತರಕಾರಿ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗಿದ್ದು, ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ ಜೋರಾಗಿತ್ತು. ಹಬ್ಬದ ತಯಾರಿ ಬಿರುಸಾಗಿದ್ದು, ಹೂ, ಹಣ್ಣು ವ್ಯಾಪಾರಸ್ಥರು ಬಿಡುವಿಲ್ಲದ ವ್ಯಾಪಾರದಲ್ಲಿ ತೊಡಗಿದ್ದಾರೆ. ಹಾಸನ, ತುಮಕೂರು, ಹಾವೇರಿ, ಬೆಂಗಳೂರು ಸೇರಿದಂತೆ ಹಲವೆಡೆಯಿಂದ 150ಕ್ಕೂ ಅಧಿಕ ಹೂವಿನ ವ್ಯಾಪಾರಿಗಳು ಆಗಮಿಸಿದ್ದಾರೆ. ಮಾರುಕಟ್ಟೆಯಲ್ಲಿ ಸೇವಂತಿಗೆ, ಜೀನಿಯಾ, ಕಾಕಡ, ಗುಲಾಬಿ, ಮಲ್ಲಿಗೆಗೆ ಬೇಡಿಕೆ ಹೆಚ್ಚಾಗಿದ್ದು, ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.    

ನಾಡಿನೆಲ್ಲೆಡೆ ಜನ್ಮಾಷ್ಟಮಿ ಸಂಭ್ರಮ

Thursday, August 25th, 2016
Krishna-vesha

ಕಾಸರಗೋಡು: ಶ್ರೀಕೃಷ್ಣನ ತತ್ವಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಇಂದಿನ ಜೀವನಕ್ಕೆ ಅಳವಡಿಸಿಕೊಳ್ಳುವ ಅಗತ್ಯವಿದೆಯೆಂದು ಅರುಣ್ ಇಂಜಿನಿಯರ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ಕೋಟೆಕಣಿ ರಾಮನಾಥ ಸಾಂಸ್ಕೃತಿಕ ಪ್ರತಿಷ್ಠಾನದ ವಠಾರದಲ್ಲಿ ಬುಧವಾರ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ,ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ೬ನೇ ವರ್ಷದ ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆ ಮತ್ತು ಮೊಸರುಕುಡಿಕೆ ಉತ್ಸವದಂಗವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ದುಷ್ಕೃತ್ಯ,ಸಾಮಾಜಿಕ ಅಸಮಾನತೆಗಳ […]