ಹೆಣ್ಣು ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ: ಪ್ರಸಾದ ಆಸ್ರಣ್ಣ

Tuesday, December 18th, 2018
kadri-temple

ಮಂಗಳೂರು: ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾ ದೇವಿಪ್ರಸಾದ ಅಸ್ರಣ್ಣ ಹೇಳಿದರು. ಕದ್ರಿ ರಾಜಾಂಗಣದಲ್ಲಿ ನಡೆದ ಬಾಲ ಯಕ್ಷಕೂಟ ದಶಮ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀವರ್ಚನ ನೀಡಿದರು. ಯಕ್ಷ ಗಾನ ಗಂಡು ಕಲೆ ಎಂದು ಹೇಳುತ್ತಾರೆ ಆದರೆ ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಯಕ್ಷಗಾನ ಕಲಿಯುತ್ತಾರೆ. ಹೀಗೆ ಯಕ್ಷಗಾನ ವ್ಯಾಪ್ತಿ ಹಿರಿದಾಗುತ್ತದೆ ಎಂದರು. ಅನೇಕ ಭಾರತೀಯ ಕಲೆಗಳನ್ನು ನೋಡಿದ್ದೇನೆ. ಯಕ್ಷಗಾನದಷ್ಟು ಸಂತೋಷವನ್ನು, ಸಂಭ್ರಮವನ್ನು ನೀಡುವ […]