ವಿಜಯನಗರ ಜಿಲ್ಲೆ: ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ

Monday, September 6th, 2021
Vijayanagara

ಬೆಂಗಳೂರು :  ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸಲಾಯಿತು. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ದುರಸ್ತಿ, ನವೀಕರಣ ಮತ್ತು ಕಛೇರಿ ಮೂಲಸೌಕರ್ಯಕ್ಕೆ 53 ಕೋಟಿ ರೂ. ಅನುದಾನ ಒದಗಿಸಲು ಮಂಜೂರಾತಿ ನೀಡಲಾಗಿದೆ. ಎರಡು ಹಂತಗಳಲ್ಲಿ ಹುದ್ದೆಗಳ ಸೃಜನೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ಸಾರ್ವಜನಿಕರು […]

ಜಿಲ್ಲಾಧಿಕಾರಿಗಳ ಕಚೇರಿಯೆದುರು ಅಖಿಲ ಭಾರತ ಮಹಾಮುಷ್ಕರ ಪ್ರದರ್ಶನ

Tuesday, January 8th, 2019
CITU

ಮಂಗಳೂರು  : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ(JCTU) ನೇತ್ರತ್ವದಲ್ಲಿ ಅಖಿಲ ಭಾರತ ಮಹಾಮುಷ್ಕರದ ಅಂಗವಾಗಿ ಮಂಗಳವಾರ ಬೆಳಿಗ್ಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು. ಪ್ರತಿಭಟನೆಯಲ್ಲಿ INTUC ಜಿಲ್ಲಾ ನಾಯಕರಾದ ಮನೋಹರ್ ಶೆಟ್ಟಿ, ಬೊಂಡಾಲ ಚಿತ್ತರಂಜನ್ ಶೆಟ್ಟಿ,CITU ಜಿಲ್ಲಾ ನಾಯಕರಾದ ವಸಂತ ಆಚಾರಿ,ಜೆ.ಬಾಲಕ್ರಷ್ಣ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್,AITUC ಜಿಲ್ಲಾ ನಾಯಕರಾದ ಎಚ್.ವಿ.ರಾವ್,ವಿ.ಕುಕ್ಯಾನ್,ಕರುಣಾಕರ್ ಸೇರಿದಂತೆ ಬ್ಯಾಂಕ್, ವಿಮೆ, BSNL, RMS, ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಯೆಚೂರಿಯವರ ಮೇಲೆ ಹಲ್ಲೆ ಪ್ರಜಾಪ್ರಭುತ್ವಕ್ಕೆ ಸವಾಲಾಗಿದೆ : ಶ್ರೀಯಾನ್

Friday, June 9th, 2017
cpim-yechuri

ಮಂಗಳೂರು : ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿಯವರ ಮೇಲೆ ಹಲ್ಲೆ ಯತ್ನವನ್ನು  ಖಂಡಿಸಿ ಸಿಪಿಎಂ ಕೇಂದ್ರ ಸಮಿತಿ ನೀಡಿದ ಕರೆಯ ಮೇರೆಗೆ ಗುರುವಾರ ಪ್ರತಿಭಟನಾ ಪ್ರದರ್ಶನ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಆರ್. ಶ್ರೀಯಾನ್, ಏಕಸಂಸ್ಕೃತಿ, ಏಕರಾಷ್ಟ್ರ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿ, ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಜಾತ್ಯಾತೀತ ತತ್ವಕ್ಕೆ ಸಂಘಪರಿವಾರ ಕೊಡಲಿಪೆಟ್ಟು ನೀಡುತ್ತಿದೆ. […]

ವಿಳಂಬಧೋರಣೆ ಭ್ರಷ್ಟಾಚಾರಕ್ಕೆ ಸಮಾನ: ಜಿಲ್ಲಾಧಿಕಾರಿ

Monday, October 27th, 2014
AB Ibrahim

ಮಂಗಳೂರು : ಸಾರ್ವಜನಿಕ ಕರ್ತವ್ಯ ನಿರ್ವಹಣೆಯಲ್ಲಿ ನಿಧಾನಗತಿ ಅನುಸರಿಸುವುದು ಮತ್ತು ಸೇವೆಯನ್ನು ಒದಗಿಸುವುದರಲ್ಲಿ ವಿಳಂಭವಾಗಿಸುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭ್ರಾಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷ ಆಡಳಿತ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಭ್ರಷ್ಟಾಚಾರವು ದೊಡ್ಡ ಪಿಡುಗಾಗಿದೆ. ಆದರೆ, ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆಯು ಉತ್ತಮ ಸಮಾಜ ನಿರ್ಮಾಣಕ್ಕೆ […]

ಅಣ್ಣಾ ಹಜಾರೆ ಬೆಂಬಲಿಗರಿಂದ ಮೈಕಿಗಾಗಿ ಕಿತ್ತಾಟ

Wednesday, August 17th, 2011
Anna Hazare followers / ಅಣ್ಣಾ ಹಜಾರೆ ಬೆಂಬಲಿಗರು

ಮಂಗಳೂರು : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಮಂಗಳೂರಲ್ಲಿ ಅಣ್ಣಾ ಹಜಾರೆ ಬೆಂಬಲಕ್ಕೆ ಬಂದಿದ್ದ ಎರಡು ಬಣಗಳು ಮೈಕಿಗಾಗಿ ಸೆಣಸಾಟ ನಡೆಸಿ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡ ಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯಿತು. ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳು ತುದಿಗಾಲಲ್ಲಿ ನಿಂತಿದ್ದವು. […]