ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಕಳಕೊಂಡ ಯುವಕ

Monday, January 3rd, 2022
chethan

ಮಂಗಳೂರು : ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಪ್ರಾಣವನ್ನೇ  ಕಳೆದುಕೊಂಡಿರುವ ಘಟನೆ ಮಂಗಳೂರಿನ  ಜೋಕಟ್ಟೆಯಲ್ಲಿ  ನಡೆದಿದೆ. ಮೃತಪಟ್ಟ ಯುವಕನನ್ನು ಜೋಕಟ್ಟೆ ನಿವಾಸಿ 21 ವರ್ಷದ ಚೇತನ್ ಎಂದು ಗುರುತಿಸಲಾಗಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿ ಆಡಿನ ಮರಿಯಯನ್ನು ರಕ್ಷಣೆ ಮಾಡುತ್ತಿದ್ದಾಗ ರೈಲು ಬಂದು ಅಪಘಾತಕ್ಕೀಡಾಗಿದ್ದಾನೆ. […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಮೂರು ಕೋವಿಡ್ ಸೋಂಕಿತ ಸಾವು

Sunday, June 28th, 2020
covid death

ಮಂಗಳೂರು : ಜೋಕಟ್ಟೆ ನಿವಾಸಿ 51ರ ಹರೆಯದ ಮಹಿಳೆ ಸಾವನ್ನಪ್ಪಿದ್ದು ಅವರ  ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್-19 ಪಾಸಿಟಿವ್ ವರದಿ ಬಂದಿದೆ. ಮಹಿಳೆ ಅನಾರೋಗ್ಯ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಭಾನುವಾರ ಜೂನ್ 28ರ ಬೆಳಗ್ಗೆ ಸುರತ್ಕಲ್ ನಿವಾಸಿ 31ರ ಹರೆಯದ ಯುವಕ ಹಾಗೂ ಬಂಟ್ವಾಳ ನಿವಾಸಿ ವೃದ್ಧೆ ಮೃತಪಟ್ಟಿದ್ದು ಈ ಮೂಲಕ ಜಿಲ್ಲೆಯಲ್ಲಿ ಇಂದು ಒಂದೇ ದಿನ ಮೂವರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸೋಂಕಿತರ ಸಾವಿನ ಸಂಖ್ಯೆ 13ಕ್ಕೇರಿದೆ. ಜೋಕಟ್ಟೆ ಸಮೀಪದ ನಿವಾಸಿ ಮಹಿಳೆ ಟಿಬಿ […]

ಅಕ್ರಮವಾಗಿ ರಕ್ತಚಂದನವನ್ನು ವಿದೇಶಕ್ಕೆ ರವಾನೆ ಮಾಡಲು ಯತ್ನಿಸುತ್ತಿದ್ದ ಐವರ ಬಂಧನ

Friday, January 10th, 2020
sanders

ಮಂಗಳೂರು : ಅಕ್ರಮವಾಗಿ ರಕ್ತಚಂದನವನ್ನು ಸಂಗ್ರಹಿಸಿಟ್ಟು ವಿದೇಶಕ್ಕೆ ರವಾನೆ ಮಾಡಲು ಯತ್ನಿಸುತ್ತಿದ್ದ ಐವರನ್ನು ಪಣಂಬೂರು ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಬೆಳ್ಳಿಯಪ್ಪ ನೇತೃತ್ವದ ತಂಡ ಬಂಧಿಸಿದೆ. ಕಾವೂರು ನಿವಾಸಿ ರಾಕೇಶ್ ಶೆಟ್ಟಿ (44), ತೊಕ್ಕೊಟ್ಟು ನಿವಾಸಿ ಲೋಹಿತ್ ಶೆಟ್ಟಿ (35), ಕಲ್ಲಾಪು ನಿವಾಸಿಗಳಾದ ಶೇಕ್ ತಬ್ರೇಝ್ (36), ಫಾರೂಕ್ (45), ಹುಸೈನ್ ಕುಂಞಿಮೋನು (45) ಬಂಧಿತ ಆರೋಪಿಗಳು. ಪಣಂಬೂರು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ಜಂಕ್ಷನ್‌ನಿಂದ ಜೋಕಟ್ಟೆಗೆ ತೆರಳುವ ರಸ್ತೆಯ ಎಡಬದಿಯಲ್ಲಿರುವ ಗೋಡೌನ್‌ವೊಂದರಲ್ಲಿ 2 ಕೋಟಿ ರೂ. […]

ಕುಲಶೇಖರ, ರೈಲಿನ ಹಳಿಗೆ ಮಣ್ಣು ಕುಸಿತ; ಸಂಚಾರ ಸ್ಥಗಿತ

Friday, August 23rd, 2019
Kulshekar

ಮಂಗಳೂರು : ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಧರೆ ಕುಸಿತ ಪ್ರಕರಣಗಳು ಮುಂದುವರಿದಿದ್ದು, ಇದೀಗ ಕುಲಶೇಖರ ಬಳಿಯೂ ಹಳಿಗೆ ಮಣ್ಣು ಕುಸಿದ ಬಿದ್ದ ಪರಿಣಾಮ ಈ ಮಾರ್ಗವಾಗಿ ಶುಕ್ರವಾರ ಈ ಮಾರ್ಗವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಕುಲಶೇಖರದಲ್ಲಿ ಕಳೆದೆರಡು ವರ್ಷದಿಂದ ನಡೆಯುತ್ತಿರುವ ಕುಲಶೇಖರ-ಪಡೀಲ್ ರೈಲ್ವೆ ಸುರಂಗ ಮಾರ್ಗದ ಸನಿಹ ಈ ಘಟನೆ ನಡೆದಿದ್ದು ಈ ಹಿನ್ನಲೆಯಲ್ಲಿ ಈ ಮಾರ್ಗವಾಗಿ ಸಂಚರಿಸುವ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಹಳಿಯಲ್ಲಿದ್ದ ಮಣ್ಣು ತೆರವುಗೊಳಿಸುವ ಕಾರ್ಯವನ್ನು ರೈಲ್ವೆ […]

ಜೋಕಟ್ಟೆ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Saturday, December 15th, 2018
railway

ಮಂಗಳೂರು: ಪಡೀಲ್-ಜೋಕಟ್ಟೆ ನಡುವಿನ ರೈಲು ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಜೋಕಟ್ಟೆ ಸಮೀಪದ ಬಬ್ಬರ್ಯ ದೇವಸ್ಥಾನ ಬಳಿಯ ನಿವಾಸಿ ಕಿಶೋರ್ (46) ಮೃತಪಟ್ಟಿದ್ದಾನೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಅವರು ಮಧ್ಯಾಹ್ನ ಊಟ ಮಾಡಿ ರೈಲು ಹಳಿ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಮತ್ಸಗಂಧಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರೈಲು ಅವರನ್ನು ಸುಮಾರು ದೂರಕ್ಕೆ ಎಳೆದೊಯ್ದಿದ್ದು, ತೀವ್ರ ಗಾಯಗೊಂಡ ಕಿಶೋರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಶರ್ಟ್ […]

ಮಂಗಳೂರಿನಲ್ಲಿ ಬಸ್​​ ಪಲ್ಟಿ: 35ಕ್ಕೂ ಅಧಿಕ ಮಂದಿಗೆ ಗಾಯ

Tuesday, September 11th, 2018
accident-2

ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ 35ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ. ಮಂಗಳೂರಿನ ಶಾಲಾ-ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿಗಳೂ ಸೇರಿ 35ಕ್ಕೂ ಅಧಿಕ ಮಂದಿಗೆ ಗಾಯಾಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನ ಕಾಟಿಪಳ್ಳದಿಂದ ಮಂಗಳೂರಿಗೆ ಬರುತ್ತಿದ್ದ ಬಸ್, ಬೈಕಂಪಾಡಿ ಬಳಿಯ ಜೋಕಟ್ಟೆಯಲ್ಲಿ ಎದುರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಗೆ ಬಿದ್ದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದನದ ವ್ಯಾಪಾರಿ ಹುಸೇನಬ್ಬ ಸಾವು ಪ್ರಕರಣ: ಹೂತಿದ್ದ ಶವ ಹೊರತೆಗೆದು ಮತ್ತೆ ಮಹಜರು

Tuesday, June 12th, 2018
cattle-traders

ಮಂಗಳೂರು: ದನದ ವ್ಯಾಪಾರಿ ಜೋಕಟ್ಟೆಯ ಹುಸೇನಬ್ಬ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಯು ಸೋಮವಾರ ನಡೆಯಿತು. ಹುಸೇನಬ್ಬ ಅವರು ಹಿರಿಯಡ್ಕ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಕುರಿತ ದೂರಿನ ಹಿನ್ನೆಲೆಯಲ್ಲಿ ಈ ತನಿಖೆ ನಡೆಯುತ್ತಿದ್ದು, ಅದರಂತೆ ಜೋಕಟ್ಟೆಯ ಈದ್ಗಾ ಭೂಮಿಯಲ್ಲಿ ದಫನ ಮಾಡಲಾಗಿದ್ದ ಹುಸೇನಬ್ಬರ ಮೃತದೇಹವನ್ನು ಉಡುಪಿಯ ನ್ಯಾಯಾಧೀಶ ಇರ್ಫಾನ್ ಅವರ ಸಮ್ಮುಖದಲ್ಲಿ ಹೊರತೆಗೆದು ಮಹಜರು ನಡೆಸಲಾಯಿತು. ಈ ಸಂದರ್ಭ ಹುಸೇನಬ್ಬರ ಸಂಬಂಧಿಕರು, ತನಿಖಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಜರಿದ್ದರು. ಸೋಮವಾರ ಬೆಳಗ್ಗೆ ಸುಮಾರು 10 ಗಂಟೆಗೆ ಆಗಮಿಸಿದ […]

ಎಂಆರ್‌ಪಿಎಲ್ ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಜೋಕಟ್ಟೆ ನಾಗರಿಕರ ಪ್ರತಿಭಟನೆ

Friday, October 10th, 2014
Jokatte Protest

ಮಂಗಳೂರು: ಎಂಆರ್‌ಪಿಎಲ್ ಕಂಪೆನಿಯ ಸರ್ವಾಧಿಕಾರಿ ಧೋರಣೆ ವಿರುದ್ಧ, ಸಲ್ಫರ್, ಕೋಕ್ ಘಟಕಗಳನ್ನು ಮುಚ್ಚಲು ಆಗ್ರಹಿಸಿ ನಾಗರಿಕ ಹೋರಾಟ ಸಮಿತಿ ಜೋಕಟ್ಟೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಅ1o ರಂದು ಪ್ರತಿಭಟನೆ ನಡೆಸಿತು. ಕ್ಲಾಕ್ ಟವರ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಮೆರವಣಿಗೆಯಲ್ಲಿ ಬಂದ ನಾಗರಿಕ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಎಂಆರ್‌ಪಿಎಲ್ ಕಂಪೆನಿಯ ಮೂರನೇ ಹಂತದ ಸ್ಥಾವರ ಸ್ಥಾಪನೆಯಾದ ನಂತರ ಗಂಭೀರ ಸಮಸ್ಯೆಗಳು ಆರಂಭವಾಗಿದೆ. ಎಂಆರ್‌ಪಿಎಲ್ ನಮ್ಮ […]