ಅಹಮದಾಬಾದ್​ನಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್ ವಿಮಾನದಲ್ಲಿ ಬೆಂಕಿ : ತಪ್ಪಿದ ಅನಾಹುತ

Tuesday, February 18th, 2020
goair

ಬೆಂಗಳೂರು : ಅಹಮದಾಬಾದ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಗೋಏರ್ ವಿಮಾನಕ್ಕೆ ಹಕ್ಕಿಯ ರೆಕ್ಕೆ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್ ಆಗುವ ವೇಳೆ ಈ ಘಟನೆ ನಡೆದಿದ್ದರಿಂದ ತಕ್ಷಣ ಪ್ರಯಾಣಿಕರನ್ನು ವಿಮಾನದಿಂದ ಕೆಳಗೆ ಇಳಿಸಲಾಗಿದೆ. ಹೀಗಾಗಿ, ಯಾವುದೇ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಗೆ ತೊಂದರೆಯಾಗಿಲ್ಲ. ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಅಹಮದಾಬಾದ್- ಬೆಂಗಳೂರು ಮಾರ್ಗದ ಗೋಏರ್ ವಿಮಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಸುತ್ತಿದ್ದಂತೆ ಹಕ್ಕಿಯ ರೆಕ್ಕೆ […]

ಉಕ್ರೇನ್‌ ವಿಮಾನ ಇರಾನ್‌ನಲ್ಲಿ ಪತನ : ಬೋಯಿಂಗ್‌ ವಿಮಾನದಲ್ಲಿದ್ದ 170 ಮಂದಿ ದುರ್ಮರಣ

Wednesday, January 8th, 2020
vimana

ಟೆಹ್ರಾನ್ ‌: ಉಕ್ರೇನ್‌ನಿಂದ ಹೊರಟಿದ್ದ ವಿಮಾನ ಇರಾನ್‌ನಲ್ಲಿ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲ 170 ಮಂದಿ ದುರ್ಮರಣಕ್ಕೀಡಾಗಿದ್ದಾರೆಂದು ಇರಾನ್‌ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ ರಾಜಧಾನಿ ಟೆಹ್ರಾನ್‌ನ ಇಮಾಮ್ ಖೊಮೇನಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಉಕ್ರೇನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನ ತಾಂತ್ರಿಕ ಸಮಸ್ಯೆಗಳಿಂದಾಗಿ ಬುಧವಾರ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 180 ಮಂದಿ ಇದ್ದರು ಎಂದು ಇರಾನ್‌ ಸರಕಾರಿ ಮಾಧ್ಯಮ ವರದಿ ಮಾಡಿತ್ತು. ತಾಂತ್ರಿಕ ಸಮಸ್ಯೆಗಳಿಂದ ಅಪಘಾತ ಉಂಟಾಗಿದೆ ಎಂದು ಶಂಕಿಸಲಾಗಿದೆ. […]