ಕನ್ನಡದ ಹಿರಿಯ ನಟಿ ‘ಅಭಿನವ ಶಾರದೆ’ ಜಯಂತಿ ನಿಧನ

Monday, July 26th, 2021
Jayanthi died

ಬೆಂಗಳೂರು : ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ, ಅಭಿನಯ ಶಾರದೆ ಎಂದು ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದ ಜಯಂತಿ ನಿಧನರಾಗಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಸೋಮವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅಸ್ತಮಾ, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಕನ್ನಡ […]

ಹಿರಿಯ ಬಹುಭಾಷಾ ನಟಿ ‌ಕೃಷ್ಣಕುಮಾರಿ ವಿಧಿವಶ

Wednesday, January 24th, 2018
krishnakumari

ಬೆಂಗಳೂರು: ಹಿರಿಯ ಬಹುಭಾಷಾ ನಟಿ ಕೃಷ್ಣಕುಮಾರಿ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದು, ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ 88 ವರ್ಷದ ಹಿರಿಯ ನಟಿ ಇಹಲೋಕ ತ್ಯಜಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೃಷ್ಣಕುಮಾರಿ ನಟಿಸಿದ್ದರು. ಕೃಷ್ಣಕುಮಾರಿ ಅವರು ಡಾ.ರಾಜ್ ಕುಮಾರ್, ಎನ್‌ಟಿಆರ್, ಎಎನ್ಆರ್, ಶಿವಾಜಿ ಗಣೇಶನ್ ಜೊತೆ ಬಣ್ಣ ಹಚ್ಚಿದ್ದರು. ಕನ್ನಡದಲ್ಲಿ ಭಕ್ತ ಕನಕದಾಸ, ಆಶಾ ಸುಂದರಿ, ಶ್ರೀಶೈಲ ಮಹಾತ್ಮೆ ಸೇರಿದಂತೆ […]