‘ಆ್ಯಂಟನಿ ವೇಸ್ಟ್’ ಕಂಪೆನಿಯ ಮಂಗಳೂರು ಮೆನೇಜರ್ ಡೆಂಗ್ ಜ್ವರದಲ್ಲಿ ಮೃತ್ಯು

Sunday, July 21st, 2019
Naveenchandra

ಮಂಗಳೂರು : ಡೆಂಗ್ಯೂ ಸಾಂಕ್ರಾಮಿಕ ದಿನದಿಂದ ದಿನಕ್ಕೆ ನಗರದಲ್ಲಿ ಆವರಿಸುತ್ತಿದ್ದು ‘ಆ್ಯಂಟನಿ ವೇಸ್ಟ್’ ಕಂಪೆನಿಯ ಮಂಗಳೂರು ಮೇಲ್ವಿಚಾರಕ ನವೀನ್ ಚಂದ್ರ ಕದ್ರಿ (56) ಶನಿವಾರ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆ್ಯಂಟನಿ ವೇಸ್ಟ್ ಕಂಪೆನಿಯು ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಸಂಸ್ಥೆಯಲ್ಲಿ  ಮೇಲ್ವಿಚಾರಕರಾಗಿದ್ದರು. ನವೀನ್ ಚಂದ್ರ ಅವರು ತೀವ್ರ ಜ್ವರದ ಹಿನ್ನೆಲೆಯಲ್ಲಿ ವಾರದ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಡೆಂಗ್ ಬಾಧಿಸಿರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸೊಳ್ಳೆ ಕಡಿತದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 352 ಜನರಿಗೆ ಜ್ವರ

Wednesday, July 17th, 2019
Dengue

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 352 ಡೆಂಗ್ ಜ್ವರದ ಪ್ರಕರಣ ಗಳು ಪತ್ತೆಯಾಗಿವೆ. ಈ ಪೈಕಿ 200 ಪ್ರಕರಣಗಳಲ್ಲಿ ಜ್ವರ ಪೀಡಿತರಾಗಿದ್ದವರು ಗುಣಮುಖರಾಗುತ್ತಿದ್ದಾರೆ. ಜುಲೈ ತಿಂಗಳಲ್ಲಿ ಮಂಗಳೂರು ನಗರದ ಜೆಪ್ಪು ಗುಜ್ಜರ ಕೆರೆ ಮತ್ತು ಕಡಬ ಮೊದಲಾದ ಕಡೆ ಡೆಂಗ್ ಜ್ವರದ ಪ್ರಕರಣ ಗಳು ಕಂಡು ಬಂದಿವೆ. ಸೊಳ್ಳೆ ಗಳ ಕಡಿತದಿಂದ ಕಂಡು ಬರುವ ಈ ರೋಗ ಬಾರದಂತೆ ತಡೆಯಲು ಮಳೆ ನೀರು ಹೆಚ್ಚು ಕಾಲ ನಿಲ್ಲದಂತೆ ನೋಡಿಕೊಳ್ಳಬೇಕು. ಈ ರೀತಿಯ ಕ್ರಮ ಕೈಗೊಂಡರೆ ಶೇ 85ರಷ್ಟು […]