ಇಳಂತಿಲ : ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ 16ನೇ ಶತಮಾನದ ಪ್ರಾಚೀನ ತುಳು ಶಾಸನ ಪತ್ತೆ

Saturday, October 5th, 2019
thulu-shasana

ಬೆಳ್ತಂಗಡಿ : ತಾಲೂಕಿನ ಇಳಂತಿಲ ಗ್ರಾಮದ ಇಚ್ಚಾರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾಚೀನ ತುಳು ಶಾಸನವೊಂದು ಬೆಳಕಿಗೆ ಬಂದಿದೆ. ಸುಮಾರು 36 ವರ್ಷಗಳಿಂದ ದೇವಾಲಯದ ಆಗ್ನೇಯ ಮೂಲೆಯ ಕೋಣೆಯಲ್ಲಿದ್ದ ಸುಮಾರು 37 ಇಂಚು ಎತ್ತರ ಹಾಗೂ 13 ಇಂಚು ಅಗಲದ ಈ ಶಿಲಾಖಂಡವು ಪ್ರಾಚೀನ ಶಾಸನ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಭೂತದ ಕಲ್ಲು ಎಂದು ಭಾವಿಸಲಾಗಿದ್ದ ಈ ಕಲ್ಲಿನ ಕುರಿತು ಜೋತಿಷಿಗಳು ಅನುಮಾನಗೊಂಡು ವಿಶ್ಲೇಷಿಸಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರರ ಸೂಚನೆಯಂತೆ ಹಿರಿಯ ಶಾಸನ ತಜ್ಞ ಡಾ| […]

ವೀರನಾರಾಯಣ ದೇವಾಲಯದಲ್ಲಿ ಸಿಕ್ಕಿದ ರಾಜ ಕುಲಶೇಖರನ ತುಳು ಶಾಸನದಲ್ಲೇನಿದೆ !

Monday, February 25th, 2019
Murugeshi

ಮಂಗಳೂರು  : ತುಳು ಲಿಪಿ ಮತ್ತು ತುಳು ಭಾಷೆಯಲ್ಲಿ ಬರೆದ ಅತ್ಯಂತ ಪ್ರಾಚೀನ ಶಾಸನ ಮಂಗಳೂರಿನ ಕುಲಶೇಖರದ ಶ್ರೀವೀರನಾರಯಣ ದೇವಾಲಯದಲ್ಲಿ ಪತ್ತೆಯಾಗಿದೆ. ಆಳುಪ ಚಕ್ರವರ್ತಿ 1 ನೇ ಕುಲಶೇಖರನ ಕಾಲದ ಈ ಶಾಸನವನ್ನು ಸಂಪೂರ್ಣವಾಗಿ ತುಳು ಭಾಷೆಯಲ್ಲಿ ರಚಿಸಲ್ಪಟ್ಟಿರುವುದು ತುಳು ಭಾಷೆ ಹಾಗೂ ಸಂಸ್ಕೃತಿಯ ಅಧ್ಯಯನಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿದೆ. ಈ ಶಾಸನ ಶ್ರೀ ಹರಿಯೇ ನಮಃ ಎಂಬ ಒಂದು ಸಾಲಿನ ಪ್ರಾರ್ಥನಾ ಶ್ಲೋಕದೊಂದಿಗೆ ಆರಂಭವಾಗಿದೆ. ನಂತರ ಶಾಸನದಲ್ಲಿ ಸೌರ ಪಂಚಾಗದ ರೀತ್ಯಾ ಕಾಲಮಾನವನ್ನು ಉಲ್ಲೇಖಿಸಲಾಗಿದೆ. ಶಾಸನೋಕ್ತ ವಿವರದ […]

ಕಾಸರಗೋಡು :ತುಳು ಶಾಸನ ಪತ್ತೆ

Tuesday, November 27th, 2012
Ancient Tulu inscription

ಉಡುಪಿ :ಕಾಸರಗೋಡಿನ ಪರಕ್ಕಿಲ ಎಂಬಲ್ಲಿ ತುಳು ಶಾಸನವೊಂದು ಪತ್ತೆಯಾಗಿದ್ದು, ಕಾಸರಗೋಡಿನಿಂದ ಮಧೂರು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಧೂರು ದೇವಸ್ಥಾನಕ್ಕಿಂತ ಸುಮಾರು ಒಂದು ಕಿ.ಮೀ. ಮೊದಲು ಉಳಿಯತ್ತಡ್ಕದಿಂದ ಕವಲೊಡೆಯುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪರಕ್ಕಿಲ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಡುಗೋಪುರದಲ್ಲಿ ಶಾಸನವು ದೊರೆತ್ತಿದ್ದು ಶಾಸನದ ಎಡದಲ್ಲಿ ಅಂಕುಶದ ಚಿಹ್ನೆ ಇದೆ, ಮಧೂರು ಸಿದ್ಧಿವಿನಾಯಕನ ಹಸ್ತಶೋಭಿ ಒಂದು ಅಂಕುಶವೂ ಇದೆ. ಈ ಹಿನ್ನೆಲೆಯಲ್ಲಿ ಇದು ಎರಡು ದೇವಾಲಯಗಳಿಗೆ ಸಂಬಧಿಸಿರಬಹುದಾದ ಶಾಸನವಾಗಿರಬಹುದು. ಶಾಸನವು ಬಹಳಷ್ಟು ಸವೆದಿರುವುದರಿಂದ ಓದಲಾಗದ ಸ್ಥಿತಿಯಲ್ಲಿದೆ. […]