ಕರಾವಳಿಯ ಪ್ರವಾಸೋದ್ಯಮದಿಂದ ದೂರ ಉಳಿದ ಸಸಿಹಿತ್ಲು !

Monday, January 28th, 2013

ಮಂಗಳೂರು : ನಂದಿನಿ ಮತ್ತು ಶಾಂಭವಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರಿ ತ್ರಿವೇಣಿ ಸಂಗಮದ ಕೇಂದ್ರ ಬಿಂದು ಎಣಿಸಿರುವ ಸಸಿಹಿತ್ಲು ಎಂಬ ಪುಟ್ಟ ಗ್ರಾಮಕ್ಕೆ ತನ್ನ ಅಜ್ಞಾತವಾಸ ಮತ್ತೂ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಕಡೆ ನದಿ ಕಡಲಿನ ತ್ರಿವೇಣಿ ಸಂಗಮದ ಅಳಿವೆ ಬಾಗಿಲು, ಸಸಿಹಿತ್ಲು ಕಡೆಯ ಜಾಗವನ್ನು ಕಬಳಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ಮೂರು ದಶಕದಿಂದ ಭರವಸೆಯಾಗಿರುವ ಸಸಿಹಿತ್ಲು ನಂದಿನಿ ನದಿ ಸೇತುವೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಪ್ರವಾಸೋದ್ಯಮದ ಪಟ್ಟಿಯಲ್ಲಿ ಹೆಸರು ಪಡೆದಿರುವ ಸಸಿಹಿತ್ಲು ಗ್ರಾಮದತ್ತ […]

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ಉದ್ಭವ

Monday, October 18th, 2010
ತಲಕಾವೇರಿ

ಮಡಿಕೇರಿ : ಸೋಮವಾರ ಮುಂಜಾನೆ 3.11ಕ್ಕೆ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಅಪಾರ ಭಕ್ತವೃಂದಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವುದರೊಂದಿಗೆ ನೆರೆದ ಭಕ್ತರಿಗೆ ದರ್ಶನವಿತ್ತಳು.  ಭಕ್ತರ ಉದ್ಘೋಷ, ಮುಗಿಲು ಮುಟ್ಟಿದ ಮಂತ್ರಘೋಷ ದೊಂದಿಗೆ ತಲಕಾವೇರಿಯಲ್ಲಿ ತಿರ್ಥೂದ್ಭವವಾಯಿತು. ನೆರೆದ ಭಕ್ತವೃಂದ ಸ್ನಾನಕೊಳದ ಸಮೀಪ ತೀರ್ಥ ಪ್ರೋಕ್ಷಣೆಗೆ ಶಿರವೊಡ್ಡಿ ಪುನೀತರಾದರು.  ತಮಿಳುನಾಡು, ಮಂಡ್ಯ, ಬೆಂಗಳೂರು ಮುಂತಾದ ಕಡೆಗಳಿಂದ ಆಗಮಿಸಿದ ಭಕ್ತರು ಭಾಗಮಂಡಲದಲ್ಲಿ ಸ್ನಾನ ಮಾಡಿ ಭಗಂಡೇಶ್ವರನ ದರ್ಶನ ಪಡೆದು ತಲಕಾವೇರಿಗೆ ಆಗಮಿಸಿದರೆ, ಇನ್ನು ಕೆಲವರು ಮೈಸೂರು ದಸರಾ ಮುಗಿಸಿ ಬಂದಿದ್ದರು. ಬ್ರಹ್ಮಕುಂಡಿಕೆಯ ಮುಂಭಾಗದ ಸ್ನಾನಕೊಳದಿಂದ […]