ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ : ಮೊಯ್ದೀನ್ ಬಾವಾ

Saturday, March 20th, 2021
Kapila Goshala

ಮಂಗಳೂರು   :  ಕಪಿಲಾ ಗೋಶಾಲೆಯನ್ನು ಹಾಡಹಗಲೇ ಧ್ವಂಸ ಮಾಡಿದ್ದು ಖಂಡನೀಯ. ಗೋಶಾಲೆಯಲ್ಲಿರೋ ಕರುಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. ನೆಲಸಮಗೊಂಡ ಗೋಶಾಲೆಯ ಮಾಲೀಕನಿಗೆ ನಾನು ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯಧನವಾಗಿ ನೀಡುತ್ತೇನೆ ಎಂದು  ಮಾಜಿ ಶಾಸಕ ಮೋಯ್ದಿನ್‌ ಬಾವಾ ಅವರು ಚೆಕ್ಕನ್ನು ಮಾಲೀಕ‌ ಪ್ರಕಾಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಇವತ್ತು ಬೀಫ್ ರಫ್ತು ಮಾಡುವುದರಲ್ಲಿ ದೇಶ ನಂಬರ್ ವನ್ ಆಗಿರೋದಕ್ಕೆ ಬಿಜೆಪಿ ಕಾರಣ.  ಗೋವಿನ ಹೆಸರಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಈ ಆಡಳಿತವೇ ಕಪಿಲ […]

ಓಮಾನ್‌ನಲ್ಲಿ ಬಂಟರ ಐಸಿರಿ 2018

Saturday, December 1st, 2018
Bunts-Oman

ಓಮಾನ್: ಓಮಾನ್‌ನಲ್ಲಿ ನೆಲೆಸಿರುವ ಬಂಟ ಸಮುದಾಯದ ೩೧ನೇ ವರ್ಷದ ಓಮಾನ್ ಬಂಟರ ಐಸಿರಿ 2018 ವಾರ್ಷಿಕ ಕೂಟವು ಮಸ್ಕತ್ ಅಲೆಫಾಲಾಜ್ ಹೊಟೇಲ್ ನ ’ಲೀ ಗ್ರಾಂಡ್ ಹಾಲ್’ನಲ್ಲಿ ನೆರವೇರಿತು. ಕಾರ್ಯಕ್ರಮದ ಸಾರಥ್ಯವನ್ನು ಬಂಟರ ಐಸಿರಿ 2018ರ ಸಮಿತಿಯು ಬಹಳ ಅಚ್ಚುಕಟ್ಟಾಗಿ ಮುನ್ನಡೆಸಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ, ವಿಶ್ವ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ ಹಾಗೂ ಮುಂಬಯಿ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ […]

ಪೋಷಕರ ಪ್ರೀತಿ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಿರಬೇಕು: ಪ್ರೋ ಪ್ರಕಾಶ್ ಶೆಟ್ಟಿ

Monday, October 1st, 2018
praksh-shetty

ಮೂಡಬಿದಿರೆ: ಮಕ್ಕಳು ಕೇಳಿದ ಎಲ್ಲ ವಸ್ತುವನ್ನು ಪೋಷಕರು ನೀಡಿದರೆ ಅದು ಮಕ್ಕಳನ್ನು ಪೋಷಿಸಿದಂತಲ್ಲ. ಮಕ್ಕಳನ್ನು ವಿನಯಶೀಲರಾಗಿ ಬೆಳೆಸುವುದು ಪೋಷಕರ ಮುಖ್ಯ ಕರ್ತವ್ಯ ಎಂದು ಆಳ್ವಾಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಅಧಿಕಾರಿ ಪ್ರೋ ಪ್ರಕಾಶ್ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾಗಿದ್ದ ಶಿಕ್ಷಕ-ರಕ್ಷಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಬಾಲ್ಯದಲ್ಲಿಯೇ ಶಿಕ್ಷಣಕ್ಕಾಗಿ ಮನೆಯಿಂದ ಹೊರ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಕುಟುಂಬ ಪದ್ದತಿಯ ಮೌಲ್ಯ ಅರಿಯದ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಹೆತ್ತವರನ್ನೆ […]

ಬಿಜೆಪಿ ಅಭ್ಯರ್ಥಿಯಾಗಿ ಲಾಲಾಜಿ ಮೆಂಡನ್ ನಾಮಪತ್ರ ಸಲ್ಲಿಕೆ

Tuesday, April 24th, 2018
kapu-BJP

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಇಂದು ನಾಮಪತ್ರ ಸಲ್ಲಿಸಿದರು. ಕಾಪು ಬಿಜೆಪಿ ಕಚೇರಿಯಿಂದ ಹೊರಟ ಲಾಲಾಜಿ ಆರ್.ಮೆಂಡನ್, ಕಾಪು ಜರ್ನಾದನ ದೇವಸ್ಥಾನ, ಮಾರಿಗುಡಿ, ವೆಂಕರಮಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರ ಜೊತೆಗೂಡಿ ಉಡುಪಿಯಲ್ಲಿರುವ ಚುನಾವಣಾ ಕಚೇರಿ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಇಂದಿರಾ, ಕಾಪು ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಟಪಾಡಿ ಶಂಕರ ಪೂಜಾರಿ, ಶಶಾಂಕ್ ಶಿವತ್ತಾಯ, ಗಂಗಾಧರ ಸುವರ್ಣ ಮೊದಲಾದವರು […]