ಮರವೂರು : ಬೈಕ್ ನಿಂದ ಬಿದ್ದು ಯುವಕನೋರ್ವ ಮೃತ್ಯು

Thursday, September 19th, 2019
Akshith

ಬಜಪೆ : ಬೈಕ್ ನಿಂದ ಬಿದ್ದು ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಮರವೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ಅಕ್ಷಿತ್ ಪೂಜಾರಿ (24) ಎಂದು ಗುರುತಿಸಲಾಗಿದ್ದು, ಕಿನ್ನಿಪದವು ನಿವಾಸಿಗಳಾದ ಜನಾರ್ಧನ ಮತ್ತು ಲಲಿತ ದಂಪತಿ ಎರಡನೇ ಮಗನಾಗಿದ್ದು ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12 ಗಂಟೆ ವೇಳೆ ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಮರವೂರಿನ ರೈಲ್ವೇ ಬ್ರಿಡ್ಜ್ ಕೆಳಗಿನ ರಾಡ್ ಗೆ ತಲೆಬಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಸರ ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ

Friday, December 21st, 2018
arrested

ಮಂಗಳೂರು: ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಮಂಗಳೂರಿನ ಪಡುಪೆರಾರ ಕತ್ತಲ್ಸಾರ್ನ ತಿಲಕ್ (27) ಬಂಧಿತ ಆರೋಪಿ. ಈತನಿಂದ ಒಟ್ಟು 40 ಸಾವಿರ ಮೌಲ್ಯದ 2 ಚಿನ್ನದ ಸರ, ಹೋಂಡ ಆಕ್ಟಿವಾ ದ್ವಿಚಕ್ರ ವಾಹನ, ರೂ.3700 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈತ ಡಿಸೆಂಬರ್ 11ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಎರಮೆ ಎಂಬಲ್ಲಿ ಪುಪ್ಪಾ ಎಂಬ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಕುತ್ತಿಗೆಗೆ ಕೈ ಹಾಕಿ ಚಿನ್ನದ ಕರಿಮಣಿಸರವನ್ನು ಎಗರಿಸಿ ಪರಾರಿಯಾಗಿದ್ದ […]

ಸ್ವಚ್ಛತೆಗೆ ಮಾದರಿಯಾದ ಬಜಪೆ ಅನ್ಸಾರ್‌ ಆಂಗ್ಲ ಮಾಧ್ಯಮ ಶಾಲೆ

Thursday, January 25th, 2018
bajape-college

ಬಜಪೆ: ಎಲ್ಲೆಡೆ ಪ್ಲಾಸ್ಟಿಕ್‌ ತ್ಯಾಜ್ಯಗಳು ಕಂಡು ಬಂದು ಪರಿಸರ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ತೊಡಕಾಗುವ ಈ ಸಮಯದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಕಲಾಕುಂಚ ರಚಿಸಿದ ಅನ್ಸಾರ್‌ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಇತರರಿಗೆ ಮಾದರಿಯಾಗಿದ್ದಾರೆ. ಕಳೆದ ನವೆಂಬರ್‌ನಿಂದ ಈ ಶಾಲೆಯ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ಕಲಾತ್ಮಕವಾಗಿ ಬೆಂಚು ತಯಾರಿಸಿದ್ದಾರೆ. ಬಜಪೆ ಗ್ರಾ.ಪಂ.ತ್ಯಾಜ್ಯ ವಿಲೇವಾರಿಗೆಂದೇ ವರ್ಷಕ್ಕೆ 25ರಿಂದ 35 ಲಕ್ಷ ರೂ. ತನಕ ಖರ್ಚು ಮಾಡುತ್ತಿದೆ. ಗ್ರಾ.ಪಂ.ಗೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಮನಗಂಡ ವಿದ್ಯಾರ್ಥಿಗಳು ಬಜಪೆಯ ಅನ್ಸಾರ್‌ […]

ರಸ್ತೆ ಇದ್ದಲ್ಲಿ ಸೇತುವೆಯಿಲ್ಲ; ಸೇತುವೆ ಇದ್ದಲ್ಲಿ ರಸ್ತೆಯಿಲ್ಲ

Monday, January 22nd, 2018
bridge

ಬಜಪೆ: ರಸ್ತೆ ಇದ್ದಲ್ಲಿ ಸೇತುವೆಯಿಲ್ಲ; ಸೇತುವೆ ಇದ್ದಲ್ಲಿ ರಸ್ತೆಯಿಲ್ಲ ಇದು ಪಡುಪೆರಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುರುಮದ ಕಟ್ಟೆ ಸೇತುವೆ, ಈಶ್ವರಕಟ್ಟೆ- ಪರಕಟ್ಟ ಬನ- ಮುಚ್ಚಾ ರಸ್ತೆಯ ದುರವಸ್ಥೆ. ಪಡುಪೆರಾರ ಬಲವಾಂಡಿ ದೈವಸ್ಥಾನದ ಬಳಿ ಕುರುಮದ ಕಟ್ಟೆಯಲ್ಲಿ ಸೇತುವೆ ನಿರ್ಮಾಣವಾಗಿದೆ. ಆದರೆ ಅದಕ್ಕೆ ಸಂಪರ್ಕ ರಸ್ತೆಯೇ ಇಲ್ಲ. ಅದೇ ರೀತಿ ಮೂಡು ಪೆರಾರದ ಈಶ್ವರ ಕಟ್ಟೆ- ಪರಕಟ್ಟ ಬನ- ಮುಚ್ಚಾರು ರಸ್ತೆ ಇದ್ದರೂ ಇಲ್ಲಿ ಅಗತ್ಯವಾಗಿ ಬೇಕಾದ ಸೇತುವೆಯೇ ಇಲ್ಲವಾಗಿದೆ. ಇದರಿಂದ ಪಡುಪೆರಾರ ಗ್ರಾಮಸ್ಥರು ನಿತ್ಯವೂ ಸಂಕಟ […]

ಬಜಪೆ ಮಕ್ಕಳ ಗ್ರಾಮ ಸಭೆ

Monday, December 25th, 2017
bajpe-village

ಬಜಪೆ: ಸರಕಾರ ಕೇವಲ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ್ರ ನೀಡುತ್ತಿದೆ.ಅನುದಾನಿತ ಶಾಲೆಯಲ್ಲಿಯೂ ಬಡ ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮನಿಸಿ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಬೇಕು. ಗ್ರಾಮ ಪಂಚಾಯತ್‌ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಮಾಡಬೇಕು ಎಂದು ಬಜಪೆ ಗ್ರಾಮ ಪಂಚಾಯತ್‌ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಒತ್ತಾಯಿಸಿದರು. ಬಜಪೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 2017- 18ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಡಿ. 23ರಂದು ಗ್ರಾಮ […]

ಹಜ್‌ ಭವನ ಉತ್ತಮ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಬೇಕು: ರೋಷನ್‌ ಬೇಗ್‌

Thursday, August 4th, 2016
Roshan-Beg

ಮಂಗಳೂರು: ಮಂಗಳೂರಿನಲ್ಲಿ ಬಹೂಪಯೋಗಿ ಕೇಂದ್ರವಾಗಿ ಹಜ್‌ ಭವನ ನಿರ್ಮಾಣ ಮಾಡಲು ರೂಪುರೇಖೆ ಸಿದ್ಧಪಡಿಸಿ ಅದಕ್ಕೆ ಬೇಕಾದ ಎಲ್ಲ ನೆರವನ್ನು ಸರಕಾರದಿಂದ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಹಜ್‌ ಸಚಿವ ಆರ್‌. ರೋಷನ್‌ ಬೇಗ್‌ ಹೇಳಿದರು. ಬಜಪೆ ಹಳೆ ವಿಮಾನ ನಿಲ್ದಾಣದಲ್ಲಿ 2016-17ನೇ ಸಾಲಿನ ಹಜ್‌ ಯಾತ್ರೆಯ ವಿಮಾನ ಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು. ಹಜ್‌ ಭವನ ಕೇವಲ ನೆಪ ಮಾತ್ರಕ್ಕೆ ನಿರ್ಮಾಣವಾಗುವಂತಾಗಬಾರದು. ಇತರ ಉತ್ತಮ ಕಾರ್ಯಕ್ರಮಗಳಿಗೂ ಅದು ಸದ್ಬಳಕೆಯಾಗುವಂತಿರಬೇಕು. ಈ ನಿಟ್ಟಿನಲ್ಲಿ ಬಹೂಪಯೋಗಿ ಹಜ್‌ […]

ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ, ಮತ್ತೊಬ್ಬ ಆರೋಪಿಯ ಬಂಧನ

Tuesday, April 2nd, 2013
Girish Putran murder case

ಬಜಪೆ : ಹೊಯ್ಗೆ ಬಜಾರ್‌ನ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್‌ ಪುತ್ರನ್‌ ಕೊಲೆ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ರಿತೇಶ್‌ (28) ನನ್ನು ಬಜಪೆ ಪೊಲೀಸ್‌ ಇನ್ಸ್‌ಪೆಕ್ಟರ್‌ ದಿನಕರ ಶೆಟ್ಟಿ ನೇತೃತ್ವದ ಪೊಲೀಸ್‌ ತಂಡ ಸೋಮವಾರ ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣ ಕುರಿತಂತೆ ಬಂಧಿತರಾದವರ ಸಂಖ್ಯೆ 3 ಕ್ಕೇರಿದೆ. ಆರೋಪಿ ರೀತು ಯಾನೆ ರಿತೇಶ್‌ನನ್ನು ಖಚಿತ ಮಾಹಿತಿ ಮೇರೆಗೆ  ಮೂಲ್ಕಿ ಬಪ್ಪನಾಡು ಬಳಿ ಬಂಧಿಸಲಾಗಿದ್ದು, ಕೊಲೆಗೆ ಉಪಯೋಗಿಸಿದ್ದ ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ. ರಿತೇಶ್‌ ಹಳೆ ಆರೋಪಿಯೂ ಆಗಿದ್ದಾನೆ. […]

ಮಾರ್ಚ್ 18 ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನೆ

Thursday, March 14th, 2013
Mangalore International Airport

ಮಂಗಳೂರು : ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು  ವೈಮಾನಿಕ ಸರಕು ನಿರ್ವಹಣಾ ಸಂಕೀರ್ಣ ದ ಉದ್ಘಾಟನಾ ಸಮಾರಂಭವು ಮಾರ್ಚ್ 18 ರಂದು ನಡೆಯಲಿರಿರುವುದಾಗಿ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಉದ್ಘಾಟನೆಯನ್ನು ಕೇಂದ್ರ ವಿಮಾನ ಯಾನ ಸಚಿವ ಅಜಿತ್‌ ಸಿಂಗ್‌ ನೆರವೇರಿಸಲಿರುವರು. ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೇಂದ್ರ ಸಚಿವರಾದ ಎಂ. ವೀರಪ್ಪ ಮೊಲಿ ಮೊದಲಾದವರು ಆಗಮಿಸಲಿದ್ದಾರೆ.