ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ವತಿಯಿಂದ ಬಿ.ಎ.ಮೊಹಿದಿನ್ ರಿಗೆ ಸಂತಾಪ ಸೂಚಕ ಸಭೆ

Tuesday, July 10th, 2018
JDS-office

ಮಂಗಳೂರು: ಮಾಜಿ ಸಚಿವ ಬಿ.ಎ.ಮೊಹಿದಿನ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಜಿಲ್ಲಾ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ ಬಿ.ಎ.ಬಿ.ಎ.ಮೊಹಿದಿನ್ ಅವರು ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞ, ಅಜಾತಶತ್ರು ಆಗಿದ್ದು ಈ ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದರು. ಕಾರ್ಯಧ್ಯಕ್ಷ ರಾಮಗಣೇಶ್ ಮಾತನಾಡಿ ಅವರು ಪಕ್ಷದಲ್ಲಿ ಎಲ್ಲಾ ಸರ್ವಧರ್ಮದವರನ್ನು ಸಮಾನತೆಯಿಂದ ಹಾಗೂ ಗೌರವದಿಂದ ಕಾಣುತಿದ್ದರು ಎಂದು […]

ಸಂಜೆ 5 ಗಂಟೆಗೆ ಬಜ್ಪೆ ತಲುಪಲಿರುವ ಬಿ.ಎ.ಮೊಹಿದಿನ್‌ ಮೃತದೇಹ

Tuesday, July 10th, 2018
bajpe

ಮಂಗಳೂರು: ಮಂಗಳವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಸಚಿವ ಬಿ.ಎ.ಮೊಹಿದಿನ್‌ರ ಪಾರ್ಥಿವ ಶರೀರವು ವಿಶೇಷ ಎಸ್ಕಾರ್ಟ್ ವಾಹನದ ಬೆಂಗಾವಲಿನೊಂದಿಗೆ ಮಂಗಳೂರಿಗೆ ತರಲಾಗುತ್ತಿದ್ದು, ಸಂಜೆ ಸುಮಾರು 5 ಗಂಟೆಗೆ ಬಜ್ಪೆಗೆ ಮೃತದೇಹ ತಲುಪಿಲಿದೆ. ಧಾರ್ಮಿಕ ವಿಧಿ ವಿಧಾನದ ಬಳಿಕ ಬಜ್ಪೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಜಿ ಸಚಿವ ಹಿರಿಯ ರಾಜಕಾರಣಿ ಬಿ.ಎ. ಮೊಹಿದಿನ್ ನಿಧನ..!

Tuesday, July 10th, 2018
b-a-mohuiddian

ಮಂಗಳೂರು: ಇತ್ತೀಚಿಗೆ ಭಾರಿ ಚರ್ಚೆಗೆ ಒಳಗಾಗಿದ್ದ ಕಾಂಗ್ರೆಸ್ ಒಳಗಿನ ಕಚ್ಚಾಟದ ಕೃತಿ  ‘ನನ್ನೊಳಗಿನ ನಾನು’ ಬಿಡುಗಡೆಗೆ ಮುನ್ನವೇ ಬಿ.ಎ.ಮೊಹಿದಿನ್ ಕೊನೆಯುಸಿರೆಳೆದಿದ್ದಾರೆ. ‘ನನ್ನೊಳಗಿನ ನಾನು’ ಕೃತಿ ಇದೇ ತಿಂಗಳು 20 ಕ್ಕೆ ಬಿಡುಗಡೆಯಾಗಬೇಕಿತ್ತು. ತನ್ನ ಬದುಕಿನ ನೆನಪುಗಳನ್ನು ಅವರು ಅದರಲ್ಲಿ ಹಂಚಿಕೊಂಡಿದ್ದರು. ತಾನು ಅನುಭವಿಸಿದ ರಾಜಕೀಯದ ಏರಿಳಿತಗಳನ್ನು ‘ನನ್ನೊಳಗಿನ ನಾನು’ ಕೃತಿಯಲ್ಲಿ ಬರೆದಿದ್ದರಲ್ಲದೆ. ಕಾಂಗ್ರೆಸ್ ಒಳಗಿನ ವೈರತ್ವವನ್ನು ಲೇಖನ ಮೂಲಕ ಹೊರಹಾಕಿದ್ದಾರೆ. ಬಜ್ಪೆ ಸಮೀಪದ ಕುಗ್ರಾಮವಾದ ಪೇಜಾವರ  ಎಂಬಲ್ಲಿ ಜೂನ್ 5, 1938ರಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬದಲ್ಲಿ ಸಾಮಾನ್ಯ ವ್ಯಕ್ತಿಯಾಗಿ  ಬಿ.ಎ. ಮೊಹಿದಿನ್ (ಬಜ್ಪೆ ಅಬ್ದುಲ್ ಖಾದರ್ […]

ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ರನ್ನು ಭೇಟಿಯಾದ ಸಿಎಂ

Monday, January 8th, 2018
hospital

ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ ರಾತ್ರಿ ಮಂಗಳೂರಿನಲ್ಲಿ ತಂಗಿದ್ದರು. ನಗರದ ಕೊಡಿಯಲ್ ಬೈಲ್ ನಲ್ಲಿರುವ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಬಿ.ಎ. ಮೊಹಿದಿನ್ ಅವರನ್ನು ಮುಖ್ಯಮಂತ್ರಿ ಭೇಟಿಯಾಗಿ, ಆರೋಗ್ಯ ವಿಚಾರಿಸಿ ನಂತರ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು. ಈ ಸಂದರ್ಭ […]

ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಸಂಘಟಕರು ಅಕಾಡಮಿಗಳ ಮುಂದಾಳುತ್ವ ವಹಿಸಬೇಕು : ಬಿ.ಎ.ಮೊಹಿದಿನ್

Saturday, August 12th, 2017
Beary Academy

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರ ತಂದ ಅಕಾಡಮಿಯ ಮೂರು ವರ್ಷಗಳ ಸಾಧನೆಗಳ ಮಾಹಿತಿಯುಳ್ಳ ‘ಹಕೀಕತ್’ ಹಾಗೂ ಇತರ ಐದು ಬ್ಯಾರಿ ಭಾಷೆಯ ಕೃತಿಗಳನ್ನು ನಗರದ ಹೊಟೇಲ್ ಶ್ರೀನಿವಾಸ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಎ.ಮೊಹಿದಿನ್,  ರಾಜ್ಯದಲ್ಲಿರುವ ಅಕಾಡಮಿಗಳು ಆಯಾ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆ, ಪೋಷಣೆಗೆ ಶ್ರಮಿಸಬೇಕು ಅದು  ರಾಜಕಾರಣಿಗಳಿಗೆ ಆಶ್ರಯ ತಾಣವಾಗಬಾರದು ಎಂದು  ಹೇಳಿದರು. ಅಕಾಡಮಿಗಳಿಗೆ ನೇಮಕ ಮಾಡುವಾಗ ಸಾಹಿತಿಗಳು, ಕಲಾವಿದರು, ಸಾಹಿತ್ಯಾಸಕ್ತರು, ಸಂಘಟಕರನ್ನು ಪರಿಗಣಿಸಬೇಕು ಎಂದು […]