ಪಚ್ಚನಾಡಿ ಡಂಪಿಂಗ್​ ಯಾರ್ಡ್​ ವಿಚಾರದಲ್ಲಿ ಕಾಂಗ್ರೆಸ್​​​​​ನಿಂದ ಭ್ರಷ್ಟಾಚಾರ : ಶಾಸಕ ಭರತ್ ಶೆಟ್ಟಿ ಆರೋಪ

Wednesday, November 6th, 2019
Bharath-Shetty

ಮಂಗಳೂರು : ಪಚ್ಚನಾಡಿ ಡಂಪಿಂಗ್ ಯಾರ್ಡ್ ಹಾಗೂ ಯುಜಿಡಿ ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ‌. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಪಚ್ಚನಾಡಿ ಡಂಪಿಂಗ್ ಯಾರ್ಡ್ ಅಭಿವೃದ್ಧಿಗಾಗಿ ಬಳಕೆ ಮಾಡದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿದೆ‌. ಅದೇ ಇಂದಿನ ಮಂದಾರ ಪ್ರದೇಶದ ದುರಂತಕ್ಕೆ ಕಾರಣ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ.ಭರತ್ ಶೆಟ್ಟಿ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಡಂಪಿಂಗ್ ಯಾರ್ಡ್ನಲ್ಲಿ ಸಮಸ್ಯೆಗಳಿವೆ. […]

ಅಕ್ರಮ ಟೋಲ್ ಗೇಟ್ ಮುಚ್ಚಲು ಒತ್ತಾಯಿಸಿ ಅಕ್ಟೋಬರ್ 22 ರಿಂದ ಸುರತ್ಕಲ್ ನಲ್ಲಿ ಅನಿರ್ದಿಷ್ಟ ಧರಣಿ

Wednesday, October 10th, 2018
suratkal

ಮಂಗಳೂರು: ಜನತೆಯ ತೀವ್ರ ವಿರೋಧ, ಹಲವು ಹಂತದ ಹೋರಾಟ, ಸುರತ್ಕಲ್ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾಪದ ಹೊರತಾಗಿಯೂ ಎನ್ಐಟಿಕೆ ಸಮೀಪ ಇರುವ ಅಕ್ರಮ ಟೋಲ್ ಕೇಂದ್ರವನ್ನು ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರಾಕರಿಸುತ್ತಿದೆ. 3.1. 2018 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಾಜ್ಯ ಸರಕಾರ ನಡೆಸಿದ ಸಭೆಯಲ್ಲಿ “ಸುರತ್ಕಲ್ ಟೋಲ್ ಗೇಟ್ ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳ್ಳಬೇಕು, ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ […]

ವಾಜಪೇಯಿ ನಿಧನರಾದ ಹಿನ್ನೆಲೆ..ಬಿಜೆಪಿ ಕಚೇರಿಯಲ್ಲಿ ಶೃದ್ದಾಂಜಲಿ!

Friday, August 17th, 2018
nalin-kumar

ಮಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನರಾದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಶೃದ್ದಾಂಜಲಿ ಅರ್ಪಿಸಲಾಯಿತು. ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಶೃದ್ದಾಂಜಲಿ ಸಭೆಯಲ್ಲಿ ವಾಜಪೇಯಿ ಅವರಿಗೆ ಪುಷ್ಪನಮನ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್ ಮೊದಲಾದವರು ನುಡಿನಮನ ಸಲ್ಲಿಸಿದರು.

ತಮ್ಮ ಸೋಲಿಗೆ ಇವಿಎಂ ಕಾರಣ…ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು!

Saturday, June 30th, 2018
jr-lobo

ಮಂಗಳೂರು: ವಿಧಾನ ಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಹಿನ್ನಡೆಗೆ ಇವಿಎಂ ದುರ್ಬಳಕೆಯೇ ಕಾರಣ ಎಂದು ಪರಾಜಿತರಾದ ದ.ಕ. ಜಿಲ್ಲೆಯ ನಾಲ್ವರು ಕಾಂಗ್ರೆಸ್ ಅಭ್ಯರ್ಥಿಗಳು ದೂರು ನೀಡಿದ್ದು, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ, ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಆರೋಪಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನಂತರ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ ಕೆ ಸೋಮಶೇಖರ್, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸೋತ ವಾಸು […]

ಏರ್ಪೋರ್ಟ್ ಆವರಣ ಗೋಡೆ ಬಿರುಕು ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Thursday, June 7th, 2018
Nalin Kumar Kateel

ಮಂಗಳೂರು : ಮಳೆಯಿಂದಾಗಿ ಹಾನಿಗೊಳಗಾದ ಏರ್ ಪೋರ್ಟ್ ಸುತ್ತಮುತ್ತಲಿನ ಕೊಳಂಬೆ ಉನಿಲೆ ಪ್ರದೇಶಗಳಿಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರು ಉತ್ತರ ಶಾಸಕರಾದ ಭರತ್ ಶೆಟ್ಟಿ ಇವರೊಂದಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದರು. ಏರ್ಪೋರ್ಟ್ ನಿರ್ದೇಶಕರು, ಸಂಬಂಧಪಟ್ಟ ಎಂಜಿನೀಯರ್ಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ನಡೆಸಲು ಮಾನ್ಯ ಸಂಸದರು ನಿರ್ದೇಶನ ನೀಡಿದರು.

ಮೊಯ್ದೀನ್ ಬಾವ ವಿರುದ್ಧ ಸುಮಾರು 15 ಸಾವಿರ ಮತಗಳ ಅಂತರದಲ್ಲಿ ಭರತ್ ಶೆಟ್ಟಿ ಗೆಲುವು..!

Tuesday, May 15th, 2018
bharath-shetty

ಮಂಗಳೂರು: ಕಾಂಗ್ರೆಸ್ ಕೈಯಲ್ಲಿದ್ದ ದ.ಕ. ಜಿಲ್ಲೆಯ 7 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವತ್ತ ಬಿಜೆಪಿಯು ದಾಪುಗಾಲಿಟ್ಟಿದೆ. ಕಾಂಗ್ರೆಸ್ ಕೈಯಲ್ಲಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ ಭರತ್ ಶೆಟ್ಟಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಮೊಯ್ದೀನ್ ಬಾವ ಅವರ ವಿರುದ್ಧ ಸುಮಾರು 15 ಸಾವಿರ ಮತಗಳ ಅಂತರದಲ್ಲಿ ಭರತ್ ಶೆಟ್ಟಿ ಜಯ ದಾಖಲಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್ ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದ್ದಾರೆ: ಪಾಲೇಮಾರ್ ಆರೋಪ

Saturday, April 21st, 2018
palimar

ಮಂಗಳೂರು: ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಅವರು ಟಿಕೆಟ್ ಕೈತಪ್ಪಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರೇ ಟಿಕೆಟ್ ಭರವಸೆ ನೀಡಿದ್ದರು. ಎರಡು ದಿನಗಳ ಹಿಂದೆ ಯಡಿಯೂರಪ್ಪ ಕಚೇರಿಯಿಂದಲೇ ಗುರುತಿನ ಚೀಟಿಯನ್ನು ಕೇಳಿದ್ದರು. ಟಿಕೆಟ್ ಭರವಸೆಯ ಹಿನ್ನೆಲೆಯಲ್ಲಿ ಎ. 23 ರಂದು ನಾಮಪತ್ರ ಸಲ್ಲಿಕೆ ಮಾಡಲು ನಿರ್ಧರಿಸಿದ್ದೆ ಆದರೆ ಅಭ್ಯರ್ಥಿಗಳ ಘೋಷಣೆ ಆಗುವಾಗ ನನ್ನ ಹೆಸರಿಲ್ಲ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್ ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದ್ದಾರೆ. ನಳಿನ್ […]