ನೈಟ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲು ಮುಖ್ಯ ಮಂತ್ರಿಗಳಿಗೆ ಶ್ರೀ ಐವನ್ ಡಿ ಸೋಜ ವಿನಂತಿ

Wednesday, December 23rd, 2020
ivan D souza

ಮಂಗಳೂರು :  ಡಿಸೆಂಬರ್ 23ರಿಂದ ಜನವರಿ 7 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರಾತ್ರಿ10 ರಿಂದ ಬೆಳಿಗ್ಗೆ 6ಗಂಟೆಯವರೆ ಏರಲಾಗಿದ್ದು, ಕ್ರಿಸ್‌ಮಸ್ ಮತ್ತು ಅನೇಕ ಮದುವೆ ಸಮಾರಂಭಗಳು ಸಂಜೆ ಹೊತ್ತಿನಲ್ಲಿ ನಡೆಯಲಿರುವುದರಿಂದ ಅದರಲ್ಲೂ, ಕ್ರಿಸ್‌ಮಸ್ ಡಿಸೆಂಬರ್ 24 ರಂದು ಸಂಜೆ ವೇಳೆ ಎಲ್ಲಾ ಚರ್ಚುಗಳಲ್ಲಿ ಕ್ರಿಸ್‌ಮಸ್ ಪೂಜೆ ಸಂಭ್ರಮ ನಡೆಯಲಿರುವುದರಿಂದ, ದಿನಾಂಕ 24ರಂದು ಸಂಪೂರ್ಣವಾಗಿ ಕರ್ಫ್ಯೂನಿಂದ ವಿನಾಯಿತಿ ನೀಡಬೇಕೆಂದು ಮತ್ತು ಇತರ ದಿನಗಳಲ್ಲಿ ಹಾಕಿರುವಂತೆ ರಾತ್ರಿ 11ರಿಂದ 5ಗಂಟೆಯವರೆಗೆ ಹಾಕಿರುವ ಕರ್ಫ್ಯೂನಲ್ಲಿ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದರು. […]

ಮದುವೆ ಸಮಾರಂಭದ ವೇಳೆ ಕಾಂಗ್ರೆಸ್​​ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಬಂಧನ

Monday, November 18th, 2019
Gowsiya-Nagara

ಮೈಸೂರು : ಭಾನುವಾರ ರಾತ್ರಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರ ಕತ್ತಿನ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಆರೋಪಿಯನ್ನ ಬಂಧಿಸಲಾಗಿದೆ. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದ ಹಿಂಭಾಗವಿರುವ ಕಲ್ಯಾಣ ಮಂಟಪವೊಂದರಲ್ಲಿ ಶಾಸಕ ತನ್ವೀರ್ ಸೇಠ್ ಊಟ ಮಾಡಿ ನಂತರ ಸಮಾರಂಭದ ಹಾಲ್ಗೆ ಬಂದು ಸ್ನೇಹಿತರೊಂದಿಗೆ ಸಂಗೀತ ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ಇದೇ ವೇಳೆ ಕೆಂಪು ಬಣ್ಣದ ಜಾಕೆಟ್ ಧರಿಸಿದ್ದ ಯುವಕನೋರ್ವ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ನಿಧಾನವಾಗಿ ಬಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ […]

ಮದುವೆ ಸಮಾರಂಭದಲ್ಲಿ ಪರಿಸರ ಜಾಗೃತಿ

Monday, December 11th, 2017
Padil

ಮಂಗಳೂರು: ಪರಿಸರ ಸ್ವಚ್ಛತೆ ಹಾಗೂ ಆಹಾರಗಳ ಮಿತ ಬಳಕೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಅದಕ್ಕೆ ಈಗ ಮದುವೆ ಸಮಾರಂಭವೊಂದು ಹೊಸ ಸೇರ್ಪಡೆ. ಪಡೀಲ್‌ನ ಸಿವಿಲ್‌ ಕಂಟ್ರ್ಯಾಕ್ಟರ್‌ ವಿಟ್ಠಲ್‌ ಆಚಾರ್‌ ಅವರ ಪುತ್ರಿ ಹರ್ಷಿತಾ ಹಾಗೂ ಮಂಜುನಾಥ್‌ ಅವರ ವಿವಾಹವು ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಆಡಿಟೋರಿಯಂನಲ್ಲಿ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೆ ಪರಿಸರದ ಸ್ವಚ್ಛತೆ ಬಗ್ಗೆ ಹಾಗೂ ಆಹಾರ ಪೋಲು ಮಾಡಬಾರದು ಎಂಬ ಬರಹಗಳನ್ನು ಬರೆದು […]