ವೇಣೂರು: ಮಹಾಮಸ್ತಕಾಭಿಷೇಕ ಸಮಾಪನ

Saturday, March 2nd, 2024
Dinesh-Gundurao

ಮಂಗಳೂರು : ಜೈನರು ಅಲ್ಪಸಂಖ್ಯಾತರಾದರೂ ಸಮಾಜದ ಮೇಲೆ ಜೈನರ ಜೀವನ ಶೈಲಿ, ದಿಗಂಬರ ಮುನಿಗಳ ಆಚಾರ-ವಿಚಾರ, ಆಹಾರ-ವಿಹಾರ ಮತ್ತು ಉಪದೇಶಾಮ್ರತ ಸಮಾಜದ ಮೇಲೆ ಗಾಢ ಪರಿಣಾಮ ಬೀರುತ್ತದೆ. ಧರ್ಮಪ್ರಭಾವನೆಯೊಂದಿಗೆ ಆರೋಗ್ಯಪೂರ್ಣ ಜೀವನಕ್ಕೆ ನಿರಂತರ ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡುತ್ತದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಶುಕ್ರವಾರ ವೇಣೂರಿನಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತದಲ್ಲಿ ಜೈನರ ಜೀವನಶೈಲಿ, ವ್ರತ-ನಿಯಮಗಳು, ನಾಯಕತ್ವ ಗುಣ, […]

ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಚಾಲನೆ

Friday, February 23rd, 2024
Venooru-Bahubali

ವೇಣೂರು : ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ 12 ವರ್ಷದ ಬಳಿಕ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಗುರುವಾರ ಅಧಿಕೃತವಾಗಿ ಆರಂಭ ಗೊಂಡಿದೆ. 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ಹತ್ತಿ ಭಕ್ತರು ಅಭಿಷೇಕ ಮಾಡುತ್ತಿದ್ದಾರೆ. ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ಮುಂದುವರಿಯಲಿದ್ದು ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಲಿದೆ. ರಾಜ್ಯದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ದಕ ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ಕಾರ್ಕಳದಲ್ಲಿ […]

ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ: ಪಂಚ ಮಹಾವೈಭವ ಶುಭಾರಂಭ

Tuesday, February 12th, 2019
Dharmasthala

ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯ ಚತುರ್ಥ ಮಹಾಮಸ್ತಕಾಭಿಷೇಕದ ಅಂಗವಾಗಿ ಸೋಮವಾರ ಪಂಚಮಹಾವೈಭವ ಮಂಟಪದಲ್ಲಿ ಮೊದಲ ತೀರ್ಥಂಕರ ವೃಷಭನಾಥರ ಆಡಳಿತದಲ್ಲಿ ನವಯುಗಾರಂಭದ ಘಟನೆಗಳನ್ನು ರೂಪಕದ ಮೂಲಕ ಸಾದರ ಪಡಿಸಲಾಯಿತು. ಕಥಾನಕ: ಅಯೋಧ್ಯೆಯಲ್ಲಿ ವೃಷಭನಾಥನ ಆಸ್ಥಾನದಲ್ಲಿ ವೀಣಾವಾದನ ನಡೆಯುತ್ತಿರುತ್ತದೆ. ಪ್ರಜೆಗಳು ಭಯ-ಆತಂಕದಿಂದ ಬಂದುತಮ್ಮ ಸಮಸ್ಯೆಗಳನ್ನು ರಾಜನಲ್ಲಿ ತಿಳಿಸಿ ಪರಿಹಾರಕೋರುತ್ತಾರೆ. ಪ್ರಕೃತಿ ವಿಕೃತಿಯಾಗಿದೆ.ಆಹಾರದಕೊರತೆಇದೆ. ಕ್ರೂರ ಪ್ರಾಣಿಗಳ ಉಪಟಳ. ಬದುಕುವ ದಾರಿಕಾಣದೆ ಕಂಗಾಲಾಗಿದ್ದೇವೆ. ಮಾರ್ಗದರ್ಶನ ನೀಡಿ, ಸಮಸ್ಯೆ ಪರಿಹರಿಸಿ ಎಂದು ಪ್ರಜೆಗಳು ರಾಜನಲ್ಲಿ ಬೇಡಿಕೊಳ್ಳುತ್ತಾರೆ. ವೃಷಭನಾಥಅಭಯ ನೀಡಿ ನವಯುಗ ಪರಿವರ್ತನೆಗೆ ನಾಂದಿ […]

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ- ಸಂತ ಸಮ್ಮೇಳನ

Saturday, February 9th, 2019
Jaina-Muni

ಧರ್ಮಸ್ಥಳ : ಸಕಲ ಪಾಪಕರ್ಮಗಳ ಕ್ಷಯ ಮಾಡಿ ಮೋಕ್ಷ ಪ್ರಾಪ್ತಿಯೇ ಸಕಲ ಜೀವಿಗಳ ಗುರಿಯಾಗಿದೆ. ಆತ್ಮ ವೈಭವವೇ ಶ್ರೇಷ್ಠ ವೈಭವ ಎಂದು ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಮಹಾರಾಜರು ಹೇಳಿದರು. ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಿದ ಸಂತ ಸಮ್ಮೇಳನದಲ್ಲಿ ಆಶೀರ್ವಚನ ನೀಡಿಅವರು ಮಾತನಾಡಿದರು. ಲೌಕಿಕ ಸುಖ-ಭೋಗಗಳಿಂದ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಅಹಿಂಸೆ, ತ್ಯಾಗ, ಮೈತ್ರಿ, ಮತ್ತುಧ್ಯಾನದಿಂದ ಶಾಶ್ವತ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಬಾಹುಬಲಿಯಜೀವನದಿಂದ ನಮಗೆ ಉತ್ತಮ ಸಂದೇಶದೊರಕುತ್ತದೆ.ಆತ್ಮ ವೈಭವವೇ ಶ್ರೇಷ್ಠ […]

ಫೆ. 9 ರಿಂದ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ

Wednesday, January 30th, 2019
Masthakabhisheka

ಉಜಿರೆ: ಧರ್ಮಸ್ಥಳದಲ್ಲಿ ಫೆ. 9 ರಿಂದ 18ರ ವರೆಗೆ ನಡೆಯಲಿರುವಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಮಂಗಳವಾರ ಧರ್ಮಸ್ಥಳದ ಶ್ರೀ ಸನ್ನಿಧಿಅತಿಥಿಗೃಹದಲ್ಲಿ ನಡೆಯಿತು. ಸಚಿವಯು.ಟಿ.ಖಾದರ್‌ಎಲ್ಲಾ ಇಲಾಖಾ ಅಧಿಕಾರಿಗಳಿಂದ ಪ್ರಗತಿ ಬಗ್ಗೆ ಸವಿವರ ಮಾಹಿತಿ ಪಡೆದು ಫೆ.೧೦ ರೊಳಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಿದರು. ನೇತ್ರಾವತಿ ಸ್ನಾನಘಟ್ಟದಿಂದಧರ್ಮಸ್ಥಳದವರೆಗೆ, ಬಾಹುಬಲಿ ಬೆಟ್ಟ ಸಂಪರ್ಕರಸ್ತೆ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದರಸ್ತೆಯಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಫೆಬ್ರವರಿ ಪ್ರಥಮ ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕಎಂಜಿನಿಯರ್ ಶಿವಪ್ರಸಾದ ಅಜಿಲ ತಿಳಿಸಿದರು. ಮಸ್ತಕಾಭಿಷೇಕ […]

ಮಹಾಮಸ್ತಕಾಭಿಷೇಕ ಅಂಗವಾಗಿ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ

Wednesday, January 2nd, 2019
Attalige Muhoortha

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಫೆಬ್ರವರಿ 9 ರಿಂದ ನಡೆಯಲಿರುವ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಅಂಗವಾಗಿ ಅಟ್ಟಳಿಗೆ ಮುಹೂರ್ತ ನೆರವೇರಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ತ್ಯಾಗಿಗಳಾದ ಆಚಾರ್ಯ ಶ್ರೀ 108 ಸೂರ್ಯನಂದಿ ಸಾಗರ್ ಮಹಾರಾಜ್ ಹಾಗೂ ಆಚಾರ್ಯ ಶ್ರೀ 108 ಶ್ರೇಯ ಸಾಗರ್ ಮಹಾರಾಜ್ ಸಮ್ಮುಖದಲ್ಲಿ ಜೈನ ಪುರೋಹಿತರ(ಇಂದ್ರರ) ಮಂತ್ರಘೋಷಗಳೊಂದಿಗೆ ಅಟ್ಟಳಿಗೆ ನಿರ್ಮಾಣಕ್ಕೆ ಬುಧವಾರ ಬೆಳಗ್ಗೆ ಮುಹೂರ್ತ ನೆರವೇರಿಸಲಾಯಿತು. ಮಾಣಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿ ನೇತೃತ್ವದಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯ ನಡೆಯಲಿದೆ. ಅಟ್ಟಳಿಗೆ ಮುಹೂರ್ತದ ವೇಳೆ […]

ಫೆ.9 ರಿಂದ 18ರವರೆಗೆ ಧರ್ಮಸ್ಥಳದ ಬಾಹುಬಲಿಗೆ ವೈಭವದ ಮಹಾಮಸ್ತಕಾಭಿಷೇಕ

Wednesday, January 2nd, 2019
Masthkabhisheka

ಧರ್ಮಸ್ಥಳ:ತ್ಯಾಗತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಜೈನಧರ್ಮದ ಸಮಸ್ಥ ಮೌಲ್ಯಗಳ ಪ್ರತಿರೂಪ. ರಾಜಭೋಗಜೀವನ ತ್ಯಜಿಸಿ ಮೋಕ್ಷದಋಜು ಮಾರ್ಗವನ್ನು ಆರಿಸಿಕೊಂಡು ಆಧ್ಯಾತ್ಮಿಕ ಉತ್ತುಂಗಕ್ಕೇರಿದ ಬಾಹುಬಲಿಯ ಜೀವನ ಇಂದಿಗೂ ಎಲ್ಲಾ ಜೈನಧರ್ಮೀಯರಿಗೆ ಆದರ್ಶ ಪ್ರಾಯವಾದದ್ದು. ರಾಜ್ಯದೊಂದಿಗೆ ಉಟ್ಟ ಬಟ್ಟೆಯನ್ನೂ ತ್ಯಜಿಸಿದ ಬಾಹುಬಲಿ ಆಡಂಬರ, ಅಭಿಷೇಕ ಇವೆಲ್ಲವುಗಳ ಪರಿಧಿಯನ್ನು ಮೀರಿ ನಿಂತವರು. ಆದರೂ ಅವರ ಪರಮೋಚ್ಛತ್ಯಾಗ- ತಪಸ್ಸಿನ ಗುಣಗಳನ್ನು ಆರಾಧಿಸುವ ಭಕ್ತರು 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಗಗನ ಸದೃಶ ಮೂರ್ತಿಯತಲೆಯಿಂದ ಕಾಲಿನೆಡೆಗೆ ಹರಿದು ಬರುವ ಅಭಿಷೇಕ ದ್ರವ್ಯಗಳು […]

ಧರ್ಮಸ್ಥಳದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ: ವೆಬ್‌ಸೈಟ್‌ಗೆ ಚಾಲನೆ

Sunday, November 18th, 2018
mastakabhisheka website

ಉಜಿರೆ: ಶ್ರವಣಬೆಳಗೊಳದದಲ್ಲಿ ತ್ಯಾಗಿ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದ ಶ್ರೀಪಾಲ್ ಗಂಗ್ವಾಲ್ ಧರ್ಮಸ್ಥಳದಲ್ಲಿ 2019 ರ ಫೆಬ್ರವರಿ 9 ರಿಂದ 18vರ ವರೆಗೆ ನಡೆಯಲಿರುವ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ವೆಬ್‌ಸೈಟ್‌ಗೆ ಭಾನುವಾರ ಚಾಲನೆ ನೀಡಿ ಶುಭ ಹಾರೈಸಿದರು. ವೆಬ್‌ಸೈಟ್: www.bahubali.live ಇದರಲ್ಲಿ ಮಸ್ತಕಾಭಿಷೇಕದ ಸವಿವರ ಮಾಹಿತಿ ಲಭ್ಯವಿದೆ. ಅಲ್ಲದೆ ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಇತರ ಎಲ್ಲಾ ಮಾಹಿತಿ ಲಭ್ಯವಿದೆ. ಕಾಲಕಾಲಕ್ಕೆ ಸುದ್ದಿಯನ್ನು ಇದರಲ್ಲಿ ಅಳವಡಿಸಲಾಗುವುದು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆ, ಪ್ರಧಾನ ಸಂಚಾಲಕ ಡಿ. […]