ವಿದ್ಯಾರ್ಥಿನಿ ತರಗತಿಯಲ್ಲಿ ಕುಸಿದು ಬಿದ್ದು ಮೃತ್ಯು : ಪೋಷಕರಿಂದ ಅಂಗಾಂಗ ದಾನ

Thursday, December 5th, 2019
Rimple

ಗಾಂಧಿನಗರ : ತರಗತಿಯಲ್ಲಿ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟ ಘಟನೆ ಗುಜರಾತಿನ ಸೂರತ್‍ನಲ್ಲಿ ನಡೆದಿದ್ದು, ಪೋಷಕರು ಆಕೆಯ ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ರಿಂಪಲ್(12) ಮೃತಪಟ್ಟ ಬಾಲಕಿ. ಭಾವೇಶ್‍ಬಾಯಿ ಸಂಗಾಣಿ ಮಗಳಾಗಿರುವ ರಿಂಪಲ್ ಪಿಪಿ ಸವಾಣಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಳು. ಮಂಗಳವಾರ ರಿಂಪಲ್ ತರಗತಿಯಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದರು. ಮಂಗಳವಾರ ಬೆಳಗ್ಗೆ ರಿಂಪಲ್ ತರಗತಿಯಲ್ಲಿ ಭಾಷಣ ಮಾಡಿದ […]

ಗಾಯಾಳುವಿಗೆ ತನ್ನ ಕಾರು ನೀಡಿ ಮಾನವೀಯತೆ ಮೆರೆದ ಕೇಂದ್ರ ಸಚಿವ ಸದಾನಂದಗೌಡ

Friday, October 11th, 2019
sadananda-gowda

ಬೆಂಗಳೂರು : ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದ ದಂಪತಿಗಳ ಪೈಕಿ ತೀವ್ರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಕೇಂದ್ರ ಸಚಿವ ಸದಾನಂದಗೌಡ ಅವರು ತಮ್ಮ ಕಾರು ನೀಡಿ ಅರ್ಧ ಕಿ.ಮೀ. ದೂರದ ಮನೆಗೆ ನಡೆದು ಸಾಗಿ ಮಾನವೀಯತೆ ಮೆರೆದಿದ್ದಾರೆ. ಗುರುವಾರ ರಾತ್ರಿ ತಮ್ಮ ಕಾರ್ಯ ಮುಗಿಸಿ ಡಿ.ವಿ.ಎಸ್. ಅವರು ಮನೆಯತ್ತ ಸಾಗುತ್ತಿದ್ದ ವೇಳೆ ಇಸ್ರೊ ಕಚೇರಿ ಮುಖ್ಯರಸ್ತೆಯಲ್ಲಿ ದಂಪತಿ ಆಯಾತಪ್ಪಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದರು. ತಕ್ಷಣ ಕಾರು ನಿಲ್ಲಿಸಿದ ಅವರು ಕೆಳಗಿಳಿದು ದಂಪತಿಯನ್ನು ಉಪಚರಿಸಿದ್ದಲ್ಲದೇ ತಮ್ಮ ಚಾಲಕ […]

ಮಾನವೀಯತೆಗಿಂತ ಜೀವನ ದರ್ಶನ ಬೇರೊಂದಿಲ್ಲ: ರುದ್ರಪ್ಪ ಮಾನಪ್ಪ ಲಮಾಣಿ

Monday, August 22nd, 2016
Badiyadka

ಬದಿಯಡ್ಕ: ಮಾನವೀಯತೆಗಿಂತ ಜೀವನ ದರ್ಶನ ಬೇರೊಂದಿಲ್ಲ.ಲಭ್ಯ ಸಂಪತ್ತನ್ನು ಸ್ವಂತಕ್ಕೆ ಸೀಮಿತವಾಗಿ ಬಳಸಿ,ಪರೋಪಕಾರವಾಗುವಂತೆ ಉಳಿದವುಗಳನ್ನು ಮೀಸಲಿಡುವ ಮನೋಭಾವ ದೈವತ್ವಕ್ಕೇರಿಸುತ್ತದೆಯೆಂದು ಕರ್ನಾಟಕ ಜವಳಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ಗಾಂಧೀವಾದಿ,ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರಿಗೆ ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕೊಡಮಾಡಿದ ಜೀವಮಾನ ಸಾಧನಾ ಪ್ರಶಸ್ತಿಯನ್ನು ಶನಿವಾರ ಸಂಜೆ ಕಿಳಿಂಗಾರಿನಲ್ಲಿ ವಿತರಿಸಿ ಅವರು ಮಾತನಾಡುತ್ತಿದ್ದರು. ಸಾಯಿರಾಂ ಗೋಪಾಲಕೃಷ್ಣ ಭಟ್ಟರ ಒಟ್ಟು ಜೀವನ ಮಾದರಿ ವ್ಯಕ್ತಿತ್ವದ ರೂಪಕವಾಗಿದ್ದು ಅಳಿದು ಹೋಗುತ್ತಿರುವ ಮೌಲ್ಯಗಳ ಪುನರುತ್ಥಾನದಲ್ಲಿ ನಕ್ಷತ್ರದಂತೆ […]