ಸ್ನೇಹ ಪವಿತ್ರತೆಯ ಸೂಚಕ ರಾಖಿ

Sunday, August 22nd, 2021
Rakhi

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಹಬ್ಬ ಹರಿದಿನಗಳಿಂದ ಕೂಡಿದ ಶ್ರಾವಣ ಮಾಸಕ್ಕೆ ವಿಶೇಷ ಮಹತ್ವವಿದೆ. ಶ್ರವಣ, ಪೂಜಾ-ಪಾಠಗಳು, ಧ್ಯಾನ-ಧಾರಣೆಗಳು, ಚಿಂತನೆಗಳ ಮಾಸವೇ ಶ್ರಾವಣ. ನಾಗಚೌತಿ, ನಾಗಪಂಚಮಿ, ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ, ಗೋಕುಲಾಷ್ಟಮಿ, ನೂಲಹುಣ್ಣಿಮೆ ಹೀಗೆ ಪ್ರತಿದಿನವು ಹಬ್ಬ. ಈ ಎಲ್ಲ ಹಬ್ಬಗಳಲ್ಲಿ “ನೂಲಹುಣ್ಣಿಮೆ” ಅಥವಾ `ರಕ್ಷಾಬಂಧನ’ಕ್ಕೆ ತನ್ನದೇ ಆದ ಮಹತ್ವವಿದೆ. ನಾವೆಲ್ಲಾ ಭಾರತೀಯರು ವಿದೇಶಿಯರ ಅನುಕರಣೆಯಿಂದ ನಮ್ಮ ನಿಜವಾದ ಸಂಸ್ಕೃತಿಯನ್ನು ಮರೆತು ಸ್ನೇಹ ಅತ್ಮೀಯತೆಯಿಂದ ದೂರ ಹೋಗುತ್ತಿದ್ದೇವೆ. ಇಂದಿನ ಯುವ ಪೀಳಿಗೆ `ಪ್ರೇಮಿಗಳ ದಿನ’ಕ್ಕೆ ಮಹತ್ವವನ್ನು […]

ಕಂದಾಯ ಸಚಿವರಿಂದ ರಕ್ಷಾಬಂಧನ‌ ಆಚರಣೆ

Sunday, August 22nd, 2021
Rakshabandhan

ಬೆಂಗಳೂರು : ಭಾತೃತ್ವದ ಸಂಕೇತವಾಗಿರುವ‌ ರಕ್ಷಾಬಂಧನದ ನಿಮಿತ್ತ ಕಂದಾಯ ಸಚಿವ ಆರ್‌ ಅಶೋಕ‌ ಅವರು ಹೊಸಕೆರೆಹಳ್ಳಿಯಲ್ಲಿ‌ ಮಹಿಳಾ ಕಾರ್ಯಕರ್ತರಿಂದ ರಾಖಿ ಕಟ್ಟಿಸಿಕೊಂಡು ಶುಭ ಕೋರಿದರು. ಈ ವೇಳೆ ಮಾತನಾಡಿದ ಸಚಿವರು,”ಹಿಂದೂ ಸಂಪ್ರದಾಯದಲ್ಲಿ ರಕ್ಷಾ ಬಂಧನಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಸಹೋದರಿಯ ರಕ್ಷಣೆಯ ಸೂಚಕವಾಗಿ ರಾಖಿ ಕಟ್ಟಿಸಿಕೊಳ್ಳುವ ಸಹೋದರ ಆ‌ ಮೂಲಕ ಆಕೆಗೆ ನಿರಂತರ ರಕ್ಷಣೆ ನೀಡುವ ಅಭಯ ಈ ಆಚರಣೆಯಲ್ಲಿ ಅಡಗಿದೆ”, ಎಂದು ಹೇಳಿದರು.

ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಯುವಕ ಕಬ್ಬಿಣದ ಸರಳುಗಳಿಗೆ ಸಿಲುಕಿ ಮೃತ್ಯು

Tuesday, January 28th, 2020
Rockey

ಮೈಸೂರು : ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ಯುವಕನ ನಿಯಂತ್ರಣಕ್ಕೆ ಬೈಕ್ ಸಿಗದ ಕಾರಣ ಬೈಕ್ ಕಂಪೌಂಡ್ ಗೆ ಗುದ್ದಿದ್ದು, ಕಂಪೌಂಡ್ ಗೆ ಅಳವಡಿಸಲಾದ ಕಬ್ಬಿಣದ ಸರಳುಗಳಿಗೆ ಸಿಲುಕಿ ಯುವಕ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತ ಯುವಕನನ್ನು ವಿಜಯಶ್ರೀಪುರ ನಿವಾಸಿ ರಾಖಿ(20) ಎಂದು ಗುರುತಿಸಲಾಗಿದ್ದು, ಈತ ನಿನ್ನೆ ರಾತ್ರಿ ಮದ್ಯಪಾನ ಮಾಡಿ ಸ್ಪ್ಲೆಂಡರ್ ಬೈಕ್ ಚಲಾಯಿಸುತ್ತಿದ್ದ. ವಿಜಯ ನಗರ ಟ್ಯಾಂಕ್ ಕಡೆ ಬರುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಶಾಸಕ ಜಿ.ಟಿ.ದೇವೇಗೌಡರ ಮನೆಯ ಕಂಪೌಂಡ್ […]