ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ‘ಬೆಸ್ಟ್ ಇಂಜಿನಿಯರ್‌’ ಪ್ರಶಸ್ತಿ ಪ್ರದಾನ

Saturday, July 17th, 2021
mpmla-news

ಮಂಗಳೂರು : ಎಂಪಿಎಂಎಲ್ಎ ನ್ಯೂಸ್ ಪತ್ರಿಕೆಯ 12ನೇ ವರ್ಷದ ಸೌಹಾರ್ದ ಸಂಗಮ ಕಾರ್ಯಕ್ರಮದ ಅಂಗವಾಗಿ ನೀಡಲಾಗುವ “ಬೆಸ್ಟ್ ಇಂಜಿನಿಯರ್’ ಅವಾರ್ಡ್” ಪ್ರಶಸ್ತಿಯನ್ನು ಮಂಗಳೂರಿನ ಲೋಕೋಪಯೋಗಿ ಇಲಾಖೆಯ ನಂ. 1 ಉಪವಿಭಾಗದ ಸಹಾಯಕ ಕಾರ‍್ಯ ಪಾಲಕ ಇಂಜಿನಿಯರ್ ಕೆ.ಟಿ. ಚಂದ್ರಶೇಖರಯ್ಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|  ಪಿ.ಎಸ್‌. ಯಡಪಡಿತ್ತಾಯರವರು ಪ್ರದಾನ ಮಾಡಿದರು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|  ಪಿ.ಎಸ್‌. ಯಡಪಡಿತ್ತಾಯರವರು ಮಾತನಾಡುತ್ತಾ, MPMLAS NEWS ಪತ್ರಿಕೆ ಕಳೆದ ಹಲವಾರು ವರ್ಷಗಳಿಂದ ಸೌಹಾರ್ದ ಸಂಗಮ ಕಾರ್ಯಕ್ರಮಗಳನ್ನು […]

ಸಾಲೆತ್ತೂರಿನಲ್ಲಿ ತಲೆ ಎತ್ತುತ್ತಿರುವ ಅಕ್ರಮ ಕಟ್ಟಡ

Monday, November 16th, 2020
salettur

ವಿಟ್ಲ: ರಾಜ್ಯ ಹೆದ್ದಾರಿ ಬದಿಯಲ್ಲಿ ಅಕ್ರಮ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೂ ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಮೌನ ವಹಿಸುವ ಮೂಲಕ ಜಮೀನು ನುಂಗಣ್ಣರಿಗೆ ಸಾಥ್ ನೀಡುತ್ತಿದೆ. ರಾಜ್ಯ ಹೆದ್ದಾರಿಯ ಸಾಲೆತ್ತೂರು-ವಿಟ್ಲ ಸಂಪರ್ಕ ರಸ್ತೆಯ ತಾಮರಾಜೆ ಮಸೀದಿ ಎದುರಲ್ಲಿ ರಸ್ತೆ ಅಂಚಿನಲ್ಲೇ ಅಕ್ರಮ ಕಟ್ಟಡ ನಿರ್ಮಾಣವಾಗುತ್ತಿದೆ. ವರ್ಷದ ಹಿಂದೆಯೇ ಕೊಳ್ನಾಡು ಮತ್ತು ವಿಟ್ಲ ಪಡ್ನೂರು ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಸಾರ್ವಜನಿಕ ಸೇವಾ ಸಂಸ್ಥೆಯೊಂದು ಸ್ಥಳೀಯ ಕಂದಾಯ ಅಧಿಕಾರಿಗಳಿಂದ ಜಿಲ್ಲಾಧಿಕಾರಿ ತನಕ ವಿವರವಾದ ದೂರು ನೀಡಿತ್ತು. ಆ ಸಂದರ್ಭ […]

ಪಂಪವೆಲ್ ಪ್ಲೈಓವರ್ ಕಳಪೆ ಕಾಮಗಾರಿ ತನಿಖೆ ನಡೆಸಿ : ಐವನ್ ಡಿ ಸೋಜಾ

Monday, April 27th, 2020
ivan

ಮಂಗಳೂರು  : ಪಂಪವೆಲ್ ಪ್ಲೈಓವರ್  ಕಳಪೆ ಕಾಮಗಾರಿ ತನಿಖೆ ನಡೆಸಿ,  ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಲೋಕೋಪಯೋಗಿ ಇಲಾಖೆಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ ರವರು ದೂರು ನೀಡಿದ್ದಾರೆ. ಪಂಪವೆಲ್ ಪ್ಲೈಓವರ್ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂದು ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ.  ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಕಳಪೆ ಮಟ್ಟದ ಮತ್ತು ತಾಂತ್ರಿಕವಾಗಿಯೂ ಕಾಮಗಾರಿಯಿಂದ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಸಂಸದ ಸದಸ್ಯರು, ಬಿಜೆಪಿ ಶಾಸಕರುಗಳು ಈ ಕಾಮಗಾರಿ ಬಗ್ಗೆ […]

ವೇದವ್ಯಾಸ್ ಕಾಮತ್ ರಿಂದ ಅಧಿಕಾರಿಗಳೊಂದಿಗೆ ವಿವಿಧ ಇಲಾಖೆಗಳ ಕಾಮಗಾರಿಯ ಪ್ರಗತಿ ಪರಿಶೀಲನೆ

Thursday, December 12th, 2019
vidhavyas

ಮಂಗಳೂರು :ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ ವಿವಿಧ ಇಲಾಖೆಗಳ ಕಾಮಗಾರಿಯ ಕುರಿತು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಲೋಕೋಪಯೋಗಿ ಇಲಾಖೆ,ಪ್ರವಾಸೋದ್ಯಮ ಇಲಾಖೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಮೂಲಭೂತ ಅಭಿವೃದ್ಧಿ ನಿಗಮ, ಅಲ್ಪ ಸಂಖ್ಯಾತ ಇಲಾಖೆ ಹಾಗೂ ಮತ್ತಿತರ ಅಧಿಕಾರಿಗಳೊಂದಿಗೆ ಪ್ರಗತಿಯಲ್ಲಿರುವ ಕಾಮಗಾರಿಗಳ ಕುರಿತು ಚರ್ಚಿಸಿ, ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಲಕ್ಷ್ಮಣ ಪೂಜಾರಿ, ರಮೇಶ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಉದಯ್ ಶೆಟ್ಟಿ, ಕರಾವಳಿ […]

11 ಕೋಟಿ ರೂಪಾಯಿ ವೆಚ್ಚದ ಕೋರ್ಟ್ ರಸ್ತೆ ವಿಳಂಭಕ್ಕೆ ಶಾಸಕ ಜೆ.ಆರ್.ಲೋಬೊ ಅಸಮಾಧಾನ

Friday, December 22nd, 2017
j-r-lobo

ಮಂಗಳೂರು: ಮಂಗಳೂರು ಕೋರ್ಟ್ ರಸ್ತೆಯ ನಿರ್ಮಾಣಕ್ಕೆ11 ಕೋಟಿ ರೂಪಾಯಿ ವೆಚ್ಚಮಾಡಲಾಗುತ್ತಿದ್ದು ಈ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ನಡೆಯದಿರುವುದಕ್ಕೆ ಶಾಸಕ ಜೆ.ಆರ್.ಲೋಬೊ ಅವರು ತೀವೃ ಅಸಮಾಧಾನ ವ್ಯಕ್ತಪಡಿಸಿದರು. ಅವರು ಮಲ್ಲಿಕಟ್ಟೆ ಕಚೇರಿಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಸಿ ಮಾತನಾಡುತ್ತಿದ್ದರು. ಈ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ನನಗೆ ಅತೀವ ಗತಿಯಲ್ಲಿ ನೋವಾಗಿದೆ. ಇದು ಇಷ್ಟೊತ್ತಿಗೆ ಮುಗಿಯಬೇಕಿತ್ತು. ಕಾರಣವೇನೆಂದು ತಿಳಿಸಬೇಕು ಎಂದರು. ಲೋಕೋಪಯೋಗಿ ಇಲಾಖೆ ಮತ್ತು ಗುತ್ತಿಗೆದಾರರ ನಡುವೆ ಹೊಂದಾಣಿಕೆ ಕೊರತೆ ಇರುವುದನ್ನು ಪ್ರಸ್ತಾಪಿಸಿದ ಶಾಸಕ ಜೆ.ಆರ್.ಲೋಬೊ ಅವರು […]

ಜನವರಿ 2ನೇ ವಾರದಿಂದ 5 ತಿಂಗಳು ಶಿರಾಡಿ ಘಾಟ್ ರಸ್ತೆ ಬಂದ್‌

Thursday, December 21st, 2017
januavery

ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆಯಲ್ಲಿ ಎರಡನೇ ಹಂತದ ಕಾಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜನವರಿ 21ನೇ ವಾರದಿಂದ ಐದು ತಿಂಗಳ ಕಾಲ ಈ ಮಾರ್ಗದಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ಜನವರಿಯಿಂದ ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಬಂದ್ ಶಿರಾಡಿ ಘಾಟಿಯಲ್ಲಿ ಬಾಕಿ ಉಳಿದಿರುವ 12.38 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿ ಆರಂಭಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಜನವರಿ ಎರಡನೇ ವಾರದಿಂದ ಐದು ತಿಂಗಳ ಕಾಲ ಈ […]

ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ 8 ಗೂಡಂಗಡಿಗಳ ದ್ವಂಸ

Friday, March 13th, 2015
Deralakatte shops

ಉಳ್ಳಾಲ: ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ 8 ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ತೆರವುಗೊಳಿಸಿತು. ಮೂರು ಅಂಗವಿಕಲರ ಅಂಗಡಿ ಸೇರಿದಂತೆ ಒಟ್ಟು 8 ಅಂಗಡಿಗಳಿಗೆ 12 ದಿನಗಳ ಹಿಂದೆ ತೆರವು ಗೊಳಿಸಲು ಇಲಾಖೆ ನೋಟೀಸು ಜಾರಿಗೊಳಿಸಿತ್ತು. ಅದರಂತೆ ಶುಕ್ರವಾರ ತೆರವು ಕಾರ್ಯಾಚರಣೆ ನಡೆಯಿತು. ಅಗಲೀಕರಣ ಸಂದರ್ಭ ಇಲಾಖೆಯವರು ಬಡವರಿಗೊಂದು ನೀತಿ, ಶ್ರೀಮಂತರಿಗೊಂದು ನೀತಿ ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಬದಲಿ ವ್ಯವಸ್ಥೆ ಮಾಡದೆ ಏಕಾಏಕಿ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸಿರುವುದರಿಂದ ಹೊಟ್ಟೆಪಾಡಿಗೆ […]