ಇಸ್ಲಾಮಿಕ್ ಸ್ಟೇಟ್ ಸೇರಿದ 4 ಕೇರಳ ಮಹಿಳೆಯರನ್ನು ಹಿಂದಿರುಗಿ ಬರಲು ಭಾರತ ಅನುಮತಿ ನಿರಾಕರಣೆ

Saturday, June 12th, 2021
Indian-Women

ನವದೆಹಲಿ : ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಸೇರಲು ತಮ್ಮ ಗಂಡಂದಿರೊಂದಿಗೆ ತೆರಳಿ ಅಫ್ಘಾನಿಸ್ತಾನ ಜೈಲಿನಲ್ಲಿ ಬಂಧಿತರಾದ ನಾಲ್ವರು ಭಾರತೀಯ ಮಹಿಳೆಯರು ದೇಶಕ್ಕೆ ಮರಳಲು ಅವಕಾಶವಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲಿ ಬಂಧಿತರಾದ ಮಹಿಳೆಯರು, ಎಲ್ಲರೂ ಕೇರಳದವರು, 2016-18ರಲ್ಲಿ ಅಫ್ಘಾನಿಸ್ತಾನದ ನಂಗರ್ಹಾರ್ಗೆ ಪ್ರಯಾಣ ಬೆಳೆಸಿದರು. ಅಫ್ಘಾನಿಸ್ತಾನದಲ್ಲಿ ನಡೆದ ಬೇರೆ ಬೇರೆ ದಾಳಿಯಲ್ಲಿ ಅವರ ಗಂಡಂದಿರು ಕೊಲ್ಲಲ್ಪಟ್ಟರು. 2019 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ […]

ಜಾಗತಿಕ ಸಮಸ್ಯೆಗಳಿಂದ ಹೊರಬರಲು ಭಾರತೀಯ ದರ್ಶನವೊಂದೇ ಪರಿಹಾರ: ನಗರೇಶ್ ನಾಯಕ್

Monday, August 8th, 2016
Deenthanana

ಕಾಸರಗೋಡು: ಆಧುನಿಕ ವ್ಯವಸ್ಥೆಗಳು ಸೌಕರ್ಯ ವೃದ್ದಿಗೊಳಿಸುತ್ತಿದ್ದರೂ ಸಾಮೂಹಿಕ ಸಮಸ್ಯೆಗಳು ಸುತ್ತಿಕೊಳ್ಳುತ್ತಿರುವುದು ಜಾಗತಿಕವಾಗಿ ಕಳವಳಕಾರಿಯಾಗಿದೆ.ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತೀಯ ದರ್ಶನ ಎಲ್ಲಾ ಸಮಸ್ಯೆಗಳಿಗೂ ಏಕ ಪರಿಹಾರವಾಗಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವುದೆಂದು ಕೇರಳದ ಕೇಂದ್ರ ಸರಕಾರಿ ಮುಖ್ಯ ಅಭಿಯೋಜಕ(ಸೋಲಿಸಿಟರಲ್ ಜನರಲ್)ನಗರೇಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡಿನ ಸಾಹಿತ್ತಿಕ,ಸಾಂಸ್ಕೃತಿಕ ಸಂಘಟನೆಯಾದ ರಂಗಚಿನ್ನಾರಿ ಶನಿವಾರ ಮುಸ್ಸಂಜೆ ನಗರದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ “ಧೀಂತನನ” ನೃತ್ಯ ಗಾಯನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಗತ್ತಿನಲ್ಲಿ ತನ್ನದೇ ಧರ್ಮ ಸರ್ವಶ್ರೇಷ್ಠವೆಂದು ಭಾರತ […]