ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ

Tuesday, July 20th, 2021
Mudra Dharane

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಶಯನೀ ಏಕಾದಶಿ ಪ್ರಯುಕ್ತ ಮುದ್ರಾಧಾರಣೆ ನಡೆಯಿತು. ಬೆಳಗ್ಗೆ ಮಠದ ಋತ್ವಿಜರು ಸುದರ್ಶನ ಹೋಮ ನಡೆಸಿ ನಂತರ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮುದ್ರಾಧಾರಣೆ ಮಾಡಿಕೊಂಡು, ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರಿಗೆ, ಹಾಗೂ ಹಾಗೂ ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರಿಗೆ ತಪ್ತ ಮುದ್ರಾಧಾರಣೆ ನಡೆಸಿದರು. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಪರ್ಯಾಯ ಮಠಾಧೀಶರು ರಾಜಾಂಗಣದಲ್ಲಿ ಭಕ್ತಾದಿಗಳಿಗೆ ಮುದ್ರಾಧಾರಣೆ ನಡೆಸಿದರು. ಪಲಿಮಾರು ಮಠಾಧೀಶ ಶ್ರೀ […]

ಎಸ್. ಪ್ರದೀಪ ಕುಮಾರ ಕಲ್ಕೂರ ರವರಿಗೆ ಸಮಾಜ ಭೂಷಣ ಪ್ರಶಸ್ತಿ

Friday, January 17th, 2020
samaja-bhusha

ಉಡುಪಿ : ಸಾಹಿತ್ಯ, ಸಾಮಾಜಿಕ, ಧಾರ್ಮಿಕ, ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಕಳೆದ ಹಲವು ದಶಕಗಳಿಂದ ಸೇವಾ ನಿರತರಾಗಿದ್ದು ಕೊಂಡಿರುವುದಲ್ಲದೆ, ಸತತ 5 ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನನ್ಯವಾದ ಸಾಧನೆಗೈದಿರುವ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಜರಗಿದ ಸಮಾರಂಭದಲ್ಲಿ ಪರ್ಯಾಯ ಪೂರೈಸುತ್ತಿರುವ ಪಲಿಮಾರು ಮಠಾಧೀಶ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಸಮಾಜ ಭೂಷಣ ಪ್ರಶಸ್ತಿ ನೀಡಿ ಅಭಿನಂದಿಸಿದರು. ಕಲ್ಕೂರ ಅವರು ಪಲಿಮಾರು ಶ್ರೀಗಳ ಪ್ರರ್ಯಾಯದ ಆರಂಭದಿಂದಲೂ ವಿಶೇಷವಾದ ಸೇವೆಯನ್ನು […]

ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪಶ್ಚಿಮ ಜಾಗರ ಪೂಜೆ

Thursday, October 10th, 2019
Udupi

ಉಡುಪಿ : ಕೃಷ್ಣ ಮಠದಲ್ಲಿ ಬೆಳಗ್ಗಿನ ಜಾವ ಸೂರ್ಯೋದಯಕ್ಕೂ ಮುನ್ನ ನಡೆಯುವ ಪಶ್ಚಿಮ ಜಾಗರ ಪೂಜೆ ಆಶ್ವಯುಜ ಮಾಸದ ಶುಕ್ಷಪಕ್ಷದ ಏಕಾದಶಿ ದಿನವಾದ ಬುಧವಾರ ಆರಂಭವಾಗಿದ್ದು, ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೆರವೇರಿಸಿದರು. ಕೃಷ್ಣನಿಗೆ ನಿತ್ಯ 14 ಬಗೆಯ ಪೂಜೆಗಳೊಂದಿಗೆ ಬುಧವಾರದಿಂದ ಪಶ್ಚಿಮ ಜಾಗರ (ಜಾಗರಣೆ) ಪೂಜೆ ಸೇರ್ಪಡೆಗೊಂಡಿದ್ದು, ಇನ್ನು ಒಂದು ತಿಂಗಳು ನಿತ್ಯ 15 ಪೂಜೆ ನಡೆದು ಉತ್ಥಾನ ದ್ವಾದಶಿಯಂದು ಸಂಪನ್ನಗೊಳ್ಳಲಿದೆ. ಬೆಳಗ್ಗೆ ನಿರ್ಮಾಲ್ಯ, ಉಷಃಕಾಲ, ಅಕ್ಷಯಪಾತ್ರೆ ಪೂಜೆ, ಪಂಚಾಮೃತ ಅಭಿಷೇಕದ ಬಳಿಕ ಪಶ್ಚಿಮ […]

ಇನ್ನೆರಡು ವರ್ಷಗಳಲ್ಲಿ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಚಿನ್ನದ ಗೋಪುರ

Friday, December 29th, 2017
Udupi-Gold

ಮಂಗಳೂರು: ಹದಿನಾರು ವರ್ಷಗಳ ನಂತರ ನಡೆಯುವ ತಮ್ಮ ಎರಡನೇ ಪರ್ಯಾಯದ ಭಾಗವಾಗಿ ಪಾಲಿಮಾರು ಮಠದ ಶ್ರೀಗಳಾದ ವಿದ್ಯಾದೀಶತೀರ್ಥ ಸ್ವಾಮೀಜಿ, ದ್ವಾರಕಾ ದೇವಾಲಯದ ಸೌಂದರ್ಯ ಮತ್ತು ಸಮೃದ್ಧತೆಯ ಪ್ರತಿರೂಪವನ್ನು ಉಡುಪಿಯ ಶ್ರೀ ಕೃಷ್ಣ ಮಠದ ಗರ್ಭಗುಡಿಯ ಗೋಪುರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಈ ಚಿನ್ನದ ಗೋಪುರ ಸಿದ್ಧವಾಗಬಹುದು ಎಂದು ಅವರು ಆಶಿಸುತ್ತಾರೆ. ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳು ಪ್ರತಿ ಎರಡು ವರ್ಷಗಳಿಗೊಮ್ಮೆ ಒಬ್ಬರು ಕೃಷ್ಣ ದೇವರನ್ನು ಪೂಜಿಸುವ ಮತ್ತು ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಕ್ಕೆ ಪರ್ಯಾಯ ಎಂದು […]