ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕಬೇಕು: ಏರ್ಯ ಲಕ್ಷ್ಮೀನಾರಾಯಣ ಆಳ್ವ

Wednesday, August 10th, 2016
Lakshminarayana-Alwa

ಬಂಟ್ವಾಳ: ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರಕಾರಿ ನೌಕರಿ ದೊರಕುವಂತೆ ಹೊಸ ಕಾನೂನು ಜಾರಿಗೊಳಿಸಬೇಕೆಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರು ಹೇಳಿದರು. ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್‌ ಕ್ಲಬ್‌ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗದಲ್ಲಿ ಸೋಮವಾರ ನಡೆದ ‘ಸರಕಾರಿ ಶಾಲೆಗಳನ್ನು ಉಳಿಸಿ’ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸರಕಾರ ಅನ್ಯಾಯ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ದುರ್ಗಾ ಫ್ರೆಂಡ್ಸ್‌ ಕ್ಲಬ್‌ […]

ಮಲಯಾಳಿ ಕಡ್ಡಾಯ ನೀತಿಯಿಂದ ಕನ್ನಡಿಗರನ್ನು ಹೊರತುಪಡಿಸುವುದಾಗಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಭರವಸೆ

Saturday, March 16th, 2013
Umman Chandi

ಕಾಸರಗೋಡು : ಕೇರಳದಲ್ಲಿ ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎಂಬ ಆದೇಶದಿಂದ ಕನ್ನಡಿಗರನ್ನು  ಹೊರತುಪಡಿಸಬೇಕೆಂದು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಯವರನ್ನು ಭೇಟಿಯಾದ ಮಂಜೇಶ್ವರ ಶಾಸಕರು ತಿಳಿಸಿದ್ದಾರೆ. ಕೇರಳದಲ್ಲಿ ಇನ್ನು ಮುಂದೆ  ಸರಕಾರಿ ನೌಕರಿ ಹೊಂದಬೇಕಾದರೆ ಮಲಯಾಳವನ್ನು ಕಡ್ಡಾಯವಾಗಿ ಕಲಿತಿರಬೇಕು ಎನ್ನುವ ಸರ್ಕಾರದ ಶಿಫಾರಸ್ಸನು ಕೇರಳದ ಲೋಕಸೇವಾ ಆಯೋಗ ಅಂಗೀಕರಿಸಿದ್ದು ಈ ಆದೇಶ ಕಾಸರಗೋಡಿನಲ್ಲಿರುವ ಅಲ್ಪಸಂಖ್ಯಾತ ಕನ್ನಡಿಗರನ್ನು ಸರಕಾರಿ ನೌಕರಿಯಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಈ ನಿಯಮದಿಂದ ಕನ್ನಡಿಗರನ್ನು ಹೊರತುಪಡಿಸಬೇಕೆಂದು ಕೇಳಿಕೊಳ್ಳಲಾಗಿದ್ದು  ಈ ನಿಯಮದಿಂದ […]