ಮಂಗಳೂರು: ಅಧಿಕೃತ ಜಾನುವಾರು ಸಾಗಾಟಕ್ಕೆ ಆ್ಯಪ್

Friday, August 9th, 2019
police phone in

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಧಿಕಾರಿಯವರು ಅಧಿಕೃತ ಜಾನುವಾರು ಸಾಗಾಟ ವ್ಯವಸ್ಥೆಗಾಗಿ ಆ್ಯಪೊಂದನ್ನು ಅಭಿವೃದ್ಧಿ ಮಾಡಿದ್ದಾರೆ. ಜಾನುವಾರು ಸಾಗಾಟ ಮಾಡುವವರು ಈ ಆ್ಯಪ್ ಮುಖಾಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಈ ಮೂಲಕ ನಾವು ಸಾಗಾಟಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸುತ್ತೇವೆ ಎಂದು ಮಂಗಳೂರು ನಗರ ಪೊಲೀಸ್ ಉಪ ಆಯುಕ್ತ ಹನುಮಂತರಾಯ ಹೇಳಿದರು. ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಧಿಕೃತ ಜಾನುವಾರು ಸಾಗಾಟಕ್ಕೆ ಕಡಿವಾಣ […]

ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ: ಪೊಲೀಸ್ ಆಯುಕ್ತ ವಿಫುಲ್ ಕುಮಾರ್

Tuesday, May 8th, 2018
vipul-kumar

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಯ ವೇಳೆ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಪೊಲೀಸ್ ಇಲಾಖೆಯ ವತಿಯಿಂದ ಕೈಗೊಳ್ಳಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ತಿಳಿಸಿದ್ದಾರೆ. ಇಂದು ಬೆಳಗ್ಗೆ ತನ್ನ ಕಚೇರಿಯಲ್ಲಿ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಮಂಗಳೂರು, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 877 ಬೂತ್‌ಗಳಿವೆ. ಈ ಪೈಕಿ 676 ಬೂತ್‌ಗಳನ್ನು ಕ್ಲಿಷ್ಟಕರ […]

ಕೊಲೆ ಪ್ರಕರಣದ ಆರೋಪಿಯ ಬಂಧನ

Tuesday, February 27th, 2018
murder

ಮಂಗಳೂರು : ಬೊಕ್ಕಪಟ್ಣ ಬೆಂಗ್ರೆಯಲ್ಲಿ ನಡೆದ ಶಿವರಾಜ್ ಕರ್ಕೇರಾ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮನೋಜ್ ಯಾನೆ ಮನು (39) ಎಂದು ಗುರುತಿಸಲಾಗಿದೆ. ಬೊಕ್ಕಪಟ್ಣ ಬೆಂಗ್ರೆಯಲ್ಲಿ ನಡೆದ ಶಿವರಾಜ್ ಕರ್ಕೇರಾ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಶಿವರಾಜ್ ಅವರ ಕೊಲೆಗೆ ಪ್ರೇರಣೆ ಹಾಗೂ ಕುಮ್ಮಕ್ಕು ನೀಡಿ ತಲೆಮರೆಸಿಕೊಂಡಿದ್ದ ಆರೋಪಿ ಗುಡ್ಡೆಕೊಪ್ಪಳ ಮನೋಜ್‌ನನ್ನು ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ವಿಭಾಗ ರೌಡಿ […]

ಪೊಲೀಸ್‌ ಫೋನ್‌ ಇನ್‌

Saturday, February 17th, 2018
police

ಮಂಗಳೂರು : ಬಲ್ಮಠ ನ್ಯೂ ರೋಡ್‌ನ‌ಲ್ಲಿ ಪೊಲೀಸರು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಏಕ ಮುಖ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದ್ದು, ಶುಕ್ರವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ಕುರಿತಂತೆ ಹಲವಾರು ಮಂದಿ ಕರೆ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು. ಈ ರಸ್ತೆಯಲ್ಲಿ ಫಳ್ನೀರ್‌ನ ಅವೇರಿ ಜಂಕ್ಷನ್‌ನಿಂದ ಜ್ಯೋತಿ ಜಂಕ್ಷನ್‌ ಕಡೆಗೆ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ತಮಗೆ ಜ್ಯೋತಿ ಜಂಕ್ಷನ್‌ ಕಡೆಗೆ ಹೋಗಲು ಸುಮಾರು ಒಂದು ಕಿಲೋ ಮೀಟರ್‌ ಸುತ್ತು ಬಳಸಿ […]

ಪ್ರಚಾರ ಪಡೆಯಲು ದಾಳಿಯ ಕತೆ ಕಟ್ಟಿದ ಹಿಂಜಾವೇ ಮುಖಂಡ

Thursday, January 11th, 2018
hindu-vedike

ಮಂಗಳೂರು: ತನ್ನ ಮೇಲೆ ತಲವಾರು ದಾಳಿಗೆ ಯತ್ನ ನಡೆಯಿತು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ ಸುರತ್ಕಲ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದ ಸತ್ಯಾಸತ್ಯತೆ ಈಗ ಬಟಾಬಯಲಾಗಿದೆ. ಹಿಂದೂ ಜಾಗರಣ ವೇದಿಕೆ ಸುರತ್ಕಲ್‌ ಘಟಕದ ಸಹ ಸಂಚಾಲಕ ಭರತ್‌ ರಾಜ್‌ ಅಗರಮೇಲು ಜನವರಿ 8 ರಂದು ರಾತ್ರಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ತೆರಳಿ ನೀಡಿದ್ದ ದೂರು ಕಟ್ಟುಕತೆ ಎಂಬುದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಯಲಾಗಿದೆ. ಘಟನೆಯ ಕುರಿತು ಮಂಗಳೂರು ಪೊಲೀಸ್‌ ಕಮಿಷನರ್‌ ಟಿ.ಆರ್‌.ಸುರೇಶ್‌ ಕುಮಾರ್ ಖುದ್ದಾಗಿ ತನಿಖೆ ನಡೆಸಿದ್ದರು […]