ಆಂಧ್ರ ವಿಭಜನೆ ಅಧಿಕೃತ, ಜೂ.2 ತೆಲಂಗಾಣ ಉದಯ ದಿನ

Wednesday, March 5th, 2014
Sampath

ನವದೆಹಲಿ: ತೆಲಂಗಾಣ ರಾಜ್ಯ ರಚನೆ ಈಗ ಅಧಿಕೃತವಾಗಿದ್ದು, ಜೂ.2 ತೆಲಂಗಾಣ ಉದಯ ದಿನ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರೊಂದಿಗೆ ಭಾರತದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದೆ. ತೆಲಂಗಾಣ ರಾಜ್ಯ ರಚನೆ ಮಸೂದೆ ರಾಜ್ಯಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ಅಂಗೀಕಾರಗೊಂಡ ನಂತರ, ಮಾರ್ಚ್ 1ರಂದು ರಾಷ್ಟ್ರಪತಿಗಳು ಮಸೂದೆಗೆ ಸಹಿ ಹಾಕಿದ್ದರು. ಇದಾದ ಬಳಿಕ ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವಾಲಯ, ಆಂಧ್ರಪ್ರದೇಶ ವಿಭಜನೆ ಕಾಯ್ದೆ 2014ರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಅದರಲ್ಲಿ ಜೂನ್ 2 ತೆಲಂಗಾಣ ದಿನವನ್ನಾಗಿ ಘೋಷಿಸಿದೆ. […]

ವಿಭಜನೆ ಜತೆಗೆ ಆಂಧ್ರಕ್ಕೆ ಕೇಂದ್ರಾಡಳಿತದ ನೆರಳು

Saturday, February 22nd, 2014
Jairam-Ramesh

ನವದೆಹಲಿ: ಒಂದು ಕಡೆ ಆಂಧ್ರ ವಿಭಜನೆ ಪ್ರಕ್ರಿಯೆ ಆರಂಭವಾಗಿದ್ದರೆ, ಇನ್ನೊಂದೆಡೆ  ರಾಷ್ಟ್ರಪತಿ ಆಳ್ವಿಕೆಗೆ ಕ್ಷಣಗಣನೆ ಆರಂಭವಾಗಿದೆ. ತೆಲಂಗಾಣ ಮಸೂದೆಗೆ ರಾಜ್ಯಸಭೆಯಿಂದಲೂ ಅನುಮೋದನೆ ಸಿಕ್ಕ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಂಧ್ರವಿಭಜನೆ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿದೆ. ನಾಗರಿಕ ಸೇವಾ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳ ಹಂಚಿಕೆಗೆ ಸಂಬಂಧಿಸಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎರಡು ಪ್ರತ್ಯೇಕ ಸಮಿತಿಗಳನ್ನು ರಚಿಸಿದೆ. ಇವುಗಳಲ್ಲಿ ಒಂದು ಸಮಿತಿ ಅಖಿಲ ಭಾರತ ಸೇವೆಗಳ ಅಡಿ ಬರುವ ಅಧಿಕಾರಿಗಳನ್ನು ಹಂಚಿಕೆ ಮಾಡಿದರೆ ಇನ್ನೊಂದು ಸಮಿತಿ ರಾಜ್ಯಮಟ್ಟದ […]

ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

Saturday, February 8th, 2014
ಕೊನೆಗೂ ತೆಲಂಗಾಣಕ್ಕೆ ಸಿಕ್ಕಿತು ಕೇಂದ್ರದ ಸಮ್ಮತಿ

ನವದೆಹಲಿ: ಅಂತೂ ಇಂತೂ ಆಂಧ್ರ ಪ್ರದೇಶವನ್ನು ಇಬ್ಭಾಗ ಮಾಡುವ ತೆಲಂಗಾಣ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.  ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದಿಲ್ಲ ಎಂದಿರುವ ಕೇಂದ್ರ ಸರ್ಕಾರ ಜಂಟಿ ರಾಜಧಾನಿ ಮಾಡುವುದಾಗಿ ಹೇಳಿದೆ. ಕರಡು ಮಸೂದೆಯ ಬಹುತೇಕ ಅಂಶಗಳನ್ನು ಹಾಗೆಯೇ ಉಳಿಸಿಕೊಂಡಿರುವ ಕೇಂದ್ರ ಸರ್ಕಾರ, ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಸೀಮಾಂಧ್ರ ಭಾಗದ ನಾಯಕರ ಒತ್ತಡಕ್ಕೆ ಮಣಿದಿಲ್ಲ. ಬದಲಾಗಿ […]