ಕುಡುಪು ಶ್ರೀ ಅನಂತ ಪದ್ಮನಾಭ ದೇವರಿಗೆ ಶತಮಾನದ ವೈಭವದ ಬ್ರಹ್ಮಕಲಶಾಭಿಷೇಕ
Sunday, February 25th, 2018ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನವು ಸಮಗ್ರವಾಗಿ ೯ ಕೋಟಿ ರುಪಾಯಿ ವೆಚ್ಛದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಈ ಶತಮಾನದಲ್ಲಿ ಕಂಡರಿಯದ ವಿಶೇಷವಾದ ಬ್ರಹ್ಮಕಲಶಾಭಿಷೇಕವು ಶ್ರೀ ಅನಂತಪದ್ಮನಾಭ ದೇವರಿಗೆ ಪೂರ್ವಾಹ್ನ 6.45 ರಿಂದ 7.45 ರ ಸಮಯ ಒದಗುವ ಕುಂಭ ಲಗ್ನ ಸುಮೂಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತ್ತು. ಮುಂಜಾನೆ ನಾಲ್ಕು ಗಂಟೆಯಿಂದ ಶ್ರೀ ದೇವರಿಗೆ ಕಲಶಾಭಿಷೇಕ ಪ್ರಾರಂಭಗೊಂಡು ಬ್ರಹ್ಮಕಲಶಾಭಿಷೇಕ ಪ್ರಕ್ರಿಯೆಯ ಕೊನೆಯ ಭಾಗವಾದ ಪ್ರಧಾನ ಚಿನ್ನದ ಕಲಶದಲ್ಲಿರುವ […]