ತವರು ಜಿಲ್ಲೆಗೆ ಹೆಚ್ಹಿನ ಆದ್ಯತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ
Monday, August 15th, 2011ಮಂಗಳೂರು : ದ.ಕ ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಹಿನ ಜವಾಬ್ದಾರಿಯನ್ನು ಕೊಟ್ಟು, ಉತ್ಕೃಷ್ಟ ಸಂಸ್ಥೆಯಾಗಿ ಕೆಲಸ ಮಾಡವಂತೆ ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿ ಹೆಚ್ಚಿನ ಅಧಿಕಾರ ನೀಡುವುದು ಸರಿಯಾದ ಕ್ರಮ. ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ, ಹಿರಿಯ ಸಚಿವರರೊಂದಿಗೆ ಚರ್ಚೆ ಮಾಡಿ, ಕಾನೂನಿನ ಇತಿಮಿತಿಯೊಳಗೆ ಏನು ಮಾಡಲು ಸಾಧ್ಯ ಅನ್ನುವುದನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು. […]