ದೂರು ಬರಲಿ ಎಂದು ಕೈಕಟ್ಟಿ ಕೂರಬೇಡಿ: ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ

Thursday, February 6th, 2014
Mescom

ಬಂಟ್ವಾಳ: ಯಾವುದೇ ಸಮಸ್ಯೆ ಬಗೆಹರಿಸಲು ಗ್ರಾಹಕರಿಂದ ದೂರು ಬರಲಿ ಎಂದು ಕಾದು ಕುಳಿತುಕೊಳ್ಳದೆ, ಸಮಸ್ಯೆಗಳಿಗೆ ಸ್ವತಃ ತಾವೇ ಮುಂದಾಗಿ ಪರಿಹಾರ ಕ್ರಮ ಕೈಗೊಳ್ಳಿ ಎಂದು ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ ಮೆಸ್ಕಾಂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಬುಧವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಪ್ರಗತಿ ವೇಳೆ ಅಧಿಕಾರಿಗಳಿಗೆ  ಈ ಮೇಲಿನ ಸೂಚನೆ ನೀಡಿದರು. ರಾಜೀವ್ ಗಾಂಧಿ […]

ಲಂಚ ಪಡೆದ ಅಧಿಕಾರಿ ಬಂಧನ

Wednesday, February 5th, 2014
Arrested-bribery

ಉಡುಪಿ: ಸಬ್ಸಿಡಿ ಹಣ ಬಿಡುಗಡೆ ಮಾಡಲು ಸಣ್ಣ ಕೈಗಾರಿಕಾ ಉದ್ಯಮಿಯೊಬ್ಬರಿಂದ ₨ 10 ಸಾವಿರ ಲಂಚ ಪಡೆದ ಆರೋಪದ ಮೇಲೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗೇಶ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಶ್ರೀಕಾಂತ್‌ ಎಂಬುವವರು ಸುಮಾರು ₨ 22 ಲಕ್ಷ ಬಂಡವಾಳದ ಕರಕುಶಲ ಕೈಗಾರಿಕೆ ಆರಂಭಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಂಡವಾಳದ ಒಟ್ಟು ಮೊತ್ತಕ್ಕೆ ಅನುಗುಣವಾಗಿ, ಅವರಿಗೆ ₨ 8.75 ಲಕ್ಷ ಸಹಾಯಧನ ಇಲಾಖೆಯಿಂದ ಸಂದಾಯವಾಗಬೇಕಿತ್ತು. ಆದರೆ, ಸಹಾಯಧನ ಬಿಡುಗಡೆ ಮಾಡಬೇಕಾದರೆ,  […]