ಕಾಯಿಸಿದ ಮೀನು ತಿಂದು ಪಿಯುಸಿ ವಿದ್ಯಾರ್ಥಿನಿ ಸಾವು
Monday, August 8th, 2011ಮಂಗಳೂರು : ಮಂಗಳೂರು ಹೊರವಲಯ ಪಚ್ಚನಾಡಿ ದೇವಿ ನಗರದಲ್ಲಿ ಕಾಯಿಸಿದ ಮೀನು ತಿಂದು ಯುವತಿಯೋರ್ವಳು ಅಸ್ವಸ್ಥಳಾಗಿ ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಸಾವನ್ನಪ್ಪಿದ ಯುವತಿ. ಈಕೆ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್ ಆಯಿಲ್ನಲ್ಲಿ ಮೀನು ಕಾಯಿಸಿದ್ದರು. ಅದರಲ್ಲಿ ಎರಡು ಮೀನುಗಳನ್ನು ಆಕೆ ತಿಂದಿದ್ದು, ಕೆಲವೇ ಹೊತ್ತಿನಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಕೂಡಲೇ ಆಕೆಯನ್ನು ಸಮೀಪದ […]