ಮಗನ ಅಂತ್ಯಕ್ರಿಯೆಯ ಕೆಲವೇ ಹೊತ್ತಿನಲ್ಲಿ ತಂದೆ ಮೃತ್ಯು
Wednesday, June 26th, 2013ಮಂಗಳೂರು: ಉಳ್ಳಾಲ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಟ್ರಸ್ಟಿ ಪಿ.ಲಕ್ಷ್ಮಣ ಮಲ್ಯ ಅವರ ಪುತ್ರ ವೆಂಕಟೇಶ್ ಮಲ್ಯ(37) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದರು. ಮಗನ ಅಗಲಿಕೆಯನ್ನು ನೋವನ್ನು ತಡೆದುಕೊಳ್ಳಲಾಗದ ತಂದೆಯೂ ಮೃತಪಟ್ಟಿರುವ ಘಟನೆ ಸೋಮವಾರ ಕೋಟೆಕಾರ್ ನಲ್ಲಿ ನಡೆದಿದೆ. ಮಗನ ಸಾವಿನಿಂದ ತೀವ್ರ ಅಘಾತಗೊಂಡಿದ್ದ ತಂದೆ ಲಕ್ಷ್ಮಣ್ ಮಲ್ಯ ಮಗನ ಅಂತ್ಯಕ್ರಿಯೆಯ ಕೆಲವೇ ಹೊತ್ತಿನಲ್ಲಿ ಮೃತಪಟ್ಟರು. ಕೋಟೆಕಾರಿನಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದ ಲಕ್ಷ್ಮಣ ಮಲ್ಯ ಅವರು ಉಳ್ಳಾಲ ಲಯನ್ಸ್ ಕ್ಲಬ್ ನ ಅಧ್ಯಕ್ಷರಾಗಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ […]