ಸೋಮವಾರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳೂರಿನಲ್ಲಿ ವಾಸ್ತವ್ಯ

Monday, December 18th, 2017
modi

ಮಂಗಳೂರು: ಓಖಿ ಚಂಡಮಾರುತದಲ್ಲಿ ಸಂತ್ರಸ್ತರಾದವರು ಹಾಗೂ ಹಾನಿಗೊಳಗಾದ ಪ್ರದೇಶ ವೀಕ್ಷಿಸಲಿರುವ  ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಮಂಗಳೂರಿಗೆ ಆಗಮಿಸಲಿದ್ದು, ರಾತ್ರಿ ಇಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ. ಲಕ್ಷದ್ವೀಪಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ 11.30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣ ತಲುಪಲಿರುವ ಅವರು, ನಗರದ ಸರ್ಕ್ಯೂಟ್‌‌‌ ಹೌಸ್‌‌‌ನಲ್ಲಿ ತಂಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ವಾಸ್ತವ್ಯ ಹೂಡುವ ದೇಶದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಾಗಲಿದ್ದಾರೆ. ಡಿ. 19ರಂದು (ಮಂಗಳವಾರ) ಬೆಳಿಗ್ಗೆ 7.30ಕ್ಕೆ ಮಂಗಳೂರಿನಿಂದ ಸೇನಾ ಹೆಲಿಕಾಪ್ಟರ್‌‌ನಲ್ಲಿ […]

ವರ್ಗಾವಣೆ ಹಾಗೂ ಖಾಲಿ ಹುದ್ದೆ ಭರ್ತಿಗೆ ವಕೀಲರ ಸಂಘದ ಸದಸ್ಯರ ಆಗ್ರಹ

Thursday, October 5th, 2017
lawyers

ಮಂಗಳೂರು: ಹೈ ಕೋರ್ಟ್‌ನ 2ನೇ ಹಿರಿಯ ನ್ಯಾಯಮೂರ್ತಿ ಜಯಂತ್‌ ಎಂ. ಪಟೇಲ್‌ ಅವರ ದಿಢೀರ್‌ ವರ್ಗಾವಣೆ ಖಂಡಿಸಿ ಹಾಗೂ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಭರ್ತಿಗೆ ಆಗ್ರಹಿಸಿ ಮಂಗಳೂರು ವಕೀಲರ ಸಂಘದ ಸದಸ್ಯರು ಬುಧವಾರ ಕೋರ್ಟ್‌ ಕಲಾಪದಿಂದ ದೂರ ಉಳಿದು ಪ್ರತಿಭಟಿಸಿದರು. ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನ ಸಭೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು ದಿನದ ಕೋರ್ಟ್‌ ಕಲಾಪದಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವ ಬಗ್ಗೆ ಪ್ರಕಟಿಸಿದರು. ಸಂಘದ ಅಧ್ಯಕ್ಷ ಎಂ.ಆರ್‌. ಬಲ್ಲಾಳ್‌ ಮಾತನಾಡಿ, ನ್ಯಾಯಮೂರ್ತಿ ಜಯಂತ್‌ ಎಂ. ಪಟೇಲ್‌ […]

ಮಂಗಳೂರು‌: ‘ಬ್ಯಾರಿ ಬಾಷಾ ಅಭಿವೃದ್ಧಿ ರಥ’ ಗೆ ಚಾಲನೆ

Wednesday, October 4th, 2017
byari.kalarang

ಮಂಗಳೂರು‌:  ‘ಬ್ಯಾರಿ ಬಾಷಾ ಬಲರ್ಮೆರೊ ತೇರ್‌’ (ಬ್ಯಾರಿ ಭಾಷೆ ಅಭಿವೃದ್ಧಿ ರಥ)ಗೆ ಬ್ಯಾರಿ ಕಲಾರಂಗ ಮಂಗಳೂರು ವತಿಯಿಂದ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜರಗಿದ ಸಮಾರಂಭದಲ್ಲಿ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಕರಪತ್ರ ಬಿಡುಗಡೆ ಮಾಡಿ ತೇರಿಗೆ ಚಾಲನೆ ನೀಡಿದರು. ಮಾತೃಭಾಷೆಯ ಬಗ್ಗೆ ಪ್ರತಿಯೋರ್ವರು ಅಭಿಮಾನ ತಾಳಿ ಅದನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಟಿ.ಆರ್‌. ಸುರೇಶ್‌ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಬ್ಯಾರಿ ಭಾಷೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ […]

ತ್ಯಾಜ್ಯದ ವಿಲೇವಾರಿ ಇನ್ನೂ ಬಗೆಹರಿಯದ ಗೊಂದಲ

Tuesday, October 3rd, 2017
waste

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕೋಳಿ ಮಾಂಸ ತ್ಯಾಜ್ಯ ಹಾಗೂ ಎಳನೀರು ಚಿಪ್ಪುಗಳ ಪ್ರತ್ಯೇಕ ವಿಲೇವಾರಿಯನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡುವ ಮಹಾನಗರ ಪಾಲಿಕೆಯ ಪ್ರಸ್ತಾವನೆ ಇನ್ನೂ ಜಾರಿಗೊಳ್ಳುವ ಲಕ್ಷಣಗಳಿಲ್ಲ. ಕೋಳಿ ಮಾಂಸ ಹಾಗೂ ಎಳನೀರಿನ ತ್ಯಾಜ್ಯಗಳನ್ನು ಈಗ ಇತರ ತ್ಯಾಜ್ಯಗಳೊಂದಿಗೆ ಆ್ಯಂಟೊನಿ ಸಂಸ್ಥೆಯೇ ವಿಲೇವಾರಿಗೊಳಿಸುತ್ತಿದೆ. ನಿಯಮ ಪ್ರಕಾರ ಇದನ್ನು ಬೇರೆಯವರಿಗೆ ಕೊಡಲಾಗದು. ಜತೆಗೆ ಅನುದಾನ ಲಭ್ಯತೆಯಲ್ಲೂ ವ್ಯತ್ಯಾಸವಾಗಲಿದೆ ಎಂಬ ಕಾರಣ ನೀಡಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಈ […]

ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪಿ ರವಿಕುಮಾರ್

Friday, September 29th, 2017
ganja

ಮಂಗಳೂರು: ಕೊಡಿಯಾಲ್‌ ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದ ಆವರಣದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಪುತ್ತೂರು ಮುಕ್ರಂಪಾಡಿಯ ರವಿಕುಮಾರ್ (28) ಎಂಬಾತನನ್ನು ಬರ್ಕ್ ಪೊಲೀಸರು ಬಂಧಿಸಿದ್ದಾರೆ.ಆರೋಪಿಯಿಂದ 2,800 ರೂ. ಬೆಲೆಯ 115 ಗ್ರಾಂ. ಗಾಂಜಾ ಮತ್ತು 1,000 ರೂ.ಬೆಲೆಯ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾಪತ್ತೆಯಾಗಿದೆ. ಕಾರಾಗೃಹದ ಬಳಿ ಸುಳಿದಾಡುತ್ತಿದ್ದ ಈತನನ್ನು ಸಂಶಯದಿಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದನ್ನು ಕೇರಳದ ಗಡಿ ತಲಪಾಡಿಯಿಂದ ಮಾರಾಟಕ್ಕೆ ತಂದಿರುವುದಾಗಿ ಆರೋಪಿ ರವಿ ಕುಮಾರ್‌ ಒಪ್ಪಿಕೊಂಡಿದ್ದಾನೆ ಎನ್ನಲಾಗುತ್ತಿದೆ. ಹಳೆ ಪ್ರಕರಣವೊಂದರ ಆರೋಪಿಯಾಗಿರುವ ಈತ 17 […]