ಲಿಪ್ಫ್ ಕೊಟ್ಟು ರೇಪ್ ಆಂಡ್ ಮರ್ಡರ್ ಮಾಡಿದವನಿಗೆ ಮರಣದಂಡನೆ
Friday, October 30th, 2015ಮುಂಬೈ: ಟೆಕ್ಕಿ ಎಸ್ತರ್ ಅನೂಹ್ಯಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಚಂದ್ರಬಾನ್ ಸನಾಪ್ ಗೆ ಮುಂಬೈ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿ, ಇದು ಅತ್ಯಪರೂಪ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲುಶಿಕ್ಷೆಯೇ ಸೂಕ್ತವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ. 2014ರ ಜನವರಿ 5ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಅನೂಹ್ಯಾ ಮುಂಬೈಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದ ಬಳಿ ಅನೂಹ್ಯಳಿಗೆ ತಾನು ತನ್ನ ಬೈಕ್ ನಲ್ಲಿ ಲಿಫ್ಟ್ ಕೊಡುವುದಾಗಿ ತಿಳಿಸಿದ್ದ. ಸನಾಪ್ ಮಾತನ್ನು ನಂಬಿ ಬೈಕ್ ನಲ್ಲಿ […]