ಎಂಆರ್ಪಿಎಲ್ ವಾರ್ಷಿಕ ವಹಿವಾಟು -1,177 ಕೋ.ರೂ. ನಿವ್ವಳ ಲಾಭ
Sunday, August 28th, 2011ಮಂಗಳೂರು: ಎಂಆರ್ಪಿಎಲ್ನ 23ನೇ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಸಂಸ್ಥೆ ಯ ಅಧ್ಯಕ್ಷ ಎ.ಕೆ.ಹಝಾರಿಕಾ ಎಂಆರ್ಪಿಎಲ್ನ ಮೂರನೇ ಹಂತದ ಕಾಮಗಾರಿ 2012 ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದ್ದು , ಜೂನ್ನಿಂದ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಹೇಳಿದರು. ಘಟಕದ ಸಂಸ್ಕರಣಾ ಸಾಮರ್ಥ್ಯವನ್ನು 15 ಎಂಎಂಟಿಪಿಎಗೆ (ಈಗ 12 ಎಂಎಂಟಿಪಿಎ) ಏರಿಸುವ ಮೂರನೇ ಹಂತದ ಕಾಮಗಾರಿ ಆಗಸ್ಟ್ 15ಕ್ಕೆ ಶೇ.86.26ರಷ್ಟು (ಶೇ.97.4 ನಿಗದಿತ ಗುರಿ) ಪೂರ್ಣಗೊಂಡಿದೆ. ಕೆಲವೊಂದು ಸ್ಥಳೀಯ ಸಮಸ್ಯೆಗಳಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗಿದ್ದು , ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸಿ […]