ಪ್ರಶಾಂತ್ ಕೊಲೆ ಆರೋಪಿಗಳ ಬಂಧನಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ
Thursday, October 15th, 2015ಮಂಗಳೂರು : ಭಜರಂಗದಳದ ಕಾರ್ಯಕರ್ತ, ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ. ನಡುಬೀದಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಕೊಲೆಯಾದ ವಾರದ ನಂತರವೂ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ನಾಗರಿಕ ವಲಯದಲ್ಲಿ ಭೀತಿಯ ವಾತಾವರಣವನ್ನು ಉಂಟು ಮಾಡಿದೆ. ಈ ಹಿಂದೆಯೂ ಕೋಮುದ್ವೇಷದಿಂದ ಎನ್ನಲಾದ ಸರಣಿ ಪ್ರತೀಕಾರದ ಕೊಲೆಗಳು ನಡೆದಿತ್ತು. ಆಗೆಲ್ಲ ಪ್ರಕರಣದ ಆಳಕ್ಕಿಳಿದು ಸೂತ್ರಧಾರಿಗಳನ್ನು ಕಂಡುಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾದುದರಿಂದ ಜಿಲ್ಲೆಯ ಜನತೆ ಅಪಾರವಾದ […]