ನವರಾತ್ರಿಯಲ್ಲಿ ನವದುರ್ಗೆಯರ ನವ ವೈಭವ
Wednesday, October 17th, 2012ಮಂಗಳೂರು: ನವರಾತ್ರಿ ನಮ್ಮ ದೇಶದ ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯು ಶಕ್ತಿ ದೇವತೆಯ ಹಬ್ಬ. ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು. ಶಕ್ತಿದೇವತೆಯನ್ನು ಒಂಭತ್ತು ರಾತ್ರಿಗಳು ಹಾಗೂ ಹತ್ತು ಹಗಲುಗಳ ಕಾಲ ಒಂಭತ್ತು ರೂಪಗಳಲ್ಲಿ ಪೂಜಿಸುತ್ತಾರೆ. ಹತ್ತನೆಯ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಕರೆಯುತ್ತಾರೆ. ಭಾರತದಲ್ಲಿ ನವರಾತ್ರಿಯನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಉತ್ತರ ಭಾರತೀಯರಿಗೆ ನವರಾತ್ರಿ ಎಂದರೆ ಬಹುದೊಡ್ಡ ಹಬ್ಬವಾಗಿದೆ. ಒಂಭತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೀತಿಯಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಭಾರತದ ವಿವಿಧ ಭಾಗಗಳಲ್ಲಿ […]