ಪಂಪ್ ವೆಲ್‌ನ ಫ್ಲೈಓವರ್ ಕಾಮಗಾರಿಯಲ್ಲಿ ಮತ್ತೊಂದು ಎಡವಟ್ಟು
Monday, October 23rd, 2017ಮಂಗಳೂರು: ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿರುವ ರಾ.ಹೆ. 66 ಹಾಗೂ 75ರ ಸಂಗಮ ಸ್ಥಳವಾದ ಪಂಪ್ ವೆಲ್‌ನ ಫ್ಲೈಓವರ್ ಕಾಮಗಾರಿಯಲ್ಲಿ ಈಗ ಮತ್ತೊಂದು ಎಡವಟ್ಟಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಫ್ಲೈ ಓವರ್ ಕಾಮಗಾರಿ ಇನ್ನಷ್ಟು ವಿಳಂಬವಾಗುವ ಲಕ್ಷಣ ಸ್ಪಷ್ಟವಾಗುತ್ತಿದೆ. ಕಾಮಗಾರಿಯಲ್ಲಿ ಲೋಪ ಎದುರಾದ ಹಿನ್ನೆಲೆಯಲ್ಲಿ ಫ್ಲೈ ಓವರ್‌ನ ಒಂದು ಭಾಗದಲ್ಲಿ ಅಳವಡಿಸಿದ ‘ಗರ್ಡರ್’ (ಕಾಂಕ್ರೀಟ್‌ನ ಉದ್ದದ ಸ್ತಂಭಗಳು) ಒಂದನ್ನು ಹಿಟಾಚಿ ಯಂತ್ರದ ಮೂಲಕ ಕತ್ತರಿಸಲಾಗುತ್ತಿದೆ. ಫ್ಲೈ ಓವರ್ ಜೋಡಿಸುವ ‘ಗರ್ಡರ್’ ಅಳವಡಿಕೆ ಇಲ್ಲಿ ನಡೆಯುತ್ತಿದೆ. ಐದಾರು ಗರ್ಡರ್‌ಗಳನ್ನು […]