ಬಂಟ್ವಾಳ : 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ

Monday, October 27th, 2014
RSS Bantwal

ಬಂಟ್ವಾಳ : ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗಣವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ಸೋಮವಾರ ನಡೆಯಿತು. ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ಶ್ರೀ ರಾಜೇಶ್ ರವರು ಮಾತನಾಡಿ ಹಿಂದೂ ಸಮಾಜಕ್ಕೆ ಸಂಘ ಶಕ್ತಿ ತುಂಬಿದೆ ಸಮಾಜದ ಒಳಿತಿಗಾಗಿ ಲಕ್ಷಾಂತರ ಜನ ಜೊತೆಯಾಗಿ ಕೆಲಸಮಾಡುವವರನ್ನು ಕಲ್ಪಿಸಿಕೊಟ್ಟಿದೆ. ಸಂಘ ಉಪೇಕ್ಷೆ ವಿರೋಧಗಳನ್ನು ದಾಟಿ ಸ್ವೀಕಾರ ಹಂತ ತಲುಪಿದೆ. ನಮ್ಮ ಪ್ರಭಾವ ಶಕ್ತಿ ಅಲ್ಪ ಬದಲಾಗಿ ಸಂಘಸ್ಥಾನವೇ ನಮ್ಮ ಶಕ್ತಿ ಇದನ್ನು ಬಲಪಡಿಸಬೇಕಾಗಿರುವುದು ಇಂದಿನ […]

ಮೋದಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದ್ದು ಬಿಜೆಪಿಯಲ್ಲ, ಆರೆಸ್ಸೆಸ್: ಸಿದ್ದು

Thursday, March 13th, 2014
Siddaramaiah

ಬೆಂಗಳೂರು: ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಬಿಜೆಪಿಯಲ್ಲ. ಬದಲಾಗಿ ಆರೆಸ್ಸೆಸ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದೆ. ಮೋದಿ ಆರೆಸ್ಸೆಸ್ ಮನುಷ್ಯ. ಆರೆಸ್ಸೆಸ್ ಹೇಳಿದಂತೆ ಕೇಳುತ್ತಾರೆ ಹೊರತು ಬಿಜೆಪಿ ಹೇಳಿದಂತಲ್ಲ. ಬಿಜೆಪಿಯಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರು. ಲಾಲ್‌ಕೃಷ್ಣ ಆಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಅವರನ್ನೆಲ್ಲ ಬಿಟ್ಟು ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಲು ಆರೆಸ್ಸೆಸ್ಸೇ ಕಾರಣ. ಚುನಾವಣೆ ಸಿದ್ಥತೆಯ ನಡುವೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಸಾಮೂಹಿಕ ಸಂದರ್ಶನ ನೀಡಿದರು. ಸಂದರ್ಶನದುದ್ದಕ್ಕೂ ದ್ವಂದ್ವ ನೀತಿಯ ಮಾತುಗಳಿಗೆ […]

‘ಅಮೃತಾನಂದಮಯಿ ಅವಮಾನಿಸುವ ಪುಸ್ತಕ ನಿಷೇಧಿಸಿ’

Monday, March 10th, 2014
Amrtanandamayi

ಬೆಂಗಳೂರು: ಲಕ್ಷಾಂತರ ಜನರ ‘ಅಮ್ಮ’ ಮಾತಾ ಅಮೃತಾನಂದಮಯಿಯವರು ಜಗತ್ತಿನಾದ್ಯಂತ ವಿವಿಧ ಭಾಷೆ, ಜಾತಿ, ಮತಗಳ ಅನುಯಾಯಿಗಳನ್ನು ಹೊಂದಿರುವ ಜಗದ್ವಂದ್ಯರು. ತಮ್ಮ ಅಮಿತ ವಾತ್ಸಲ್ಯ ಮತ್ತು ದೈವಿಕ ಸ್ಪರ್ಶದಿಂದ ಲಕ್ಷಾಂತರ ದುಃಖತಪ್ತ ಜೀವಗಳಿಗೆ ಸಾಂತ್ವನ ನೀಡುತ್ತಿರುವವರು. ಪೂಜ್ಯ ಮಾತಾ ಅಮೃತಾನಂದಮಯಿ ಅವರನ್ನು ಅವಮಾನಿಸುವ ಷಡ್ಯಂತ್ರವನ್ನು ಸಹಿಸುವಂತಿಲ್ಲ. ಅವರನ್ನು ಅವಮಾನಿಸುವ ಪುಸ್ತಕವನ್ನು ನಿಷೇಧಿಸಬೇಕು ಎಂದು ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ (ಭಯ್ಯಾಜಿ) ಜೋಶಿ ಆಗ್ರಹಿಸಿದ್ದಾರೆ. ಮನುಕುಲದ ದುಃಖ ದುಮ್ಮಾನಗಳನ್ನು ತಗ್ಗಿಸಲು ಶ್ರಮಿಸುತ್ತಿರುವ ಈ ‘ಅಪ್ಪುಗೆಯ ಅಮ್ಮ’ನನ್ನು ವಿಶ್ವಸಂಸ್ಥೆ ಮತ್ತು ಅನೇಕ ದೇಶಗಳು […]

ರಾಹುಲ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಆರೆಸ್ಸೆಸ್ಸ್

Friday, March 7th, 2014
Rahul-Gandhi

ನವದೆಹಲಿ: ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ಸ್ ಕೈವಾಡವಿದೆ ಎಂದು ಹೇಳಿರುವ ರಾಹುಲ್ ಗಾಂಧಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೆಸ್ಸೆಸ್ಸ್ ಹೇಳಿದೆ. ರಾಹುಲ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ಸ್ ಹಿರಿಯ ನೇತಾರ ರಾಮ್ ಮಾಧವ್, ರಾಹುಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಆರೆಸ್ಸೆಸ್ಸ್ ಗಾಂಧೀಜಿಯವರನ್ನು ಹತ್ಯೆಗೈದಿತ್ತು. ಆಗ ಅವರೇ (ಬಿಜೆಪಿ) ಗಾಂಧಿ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಅವರು ಸರ್ದಾರ್ ಪಟೇಲ್ ಮತ್ತು ಗಾಂಧೀಜಿಯವರನ್ನು ವಿರೋಧಿಸುತ್ತಿದ್ದರು ಎಂದು ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಹೇಳಿದ್ದರು.