ಸೌಮ್ಯ ಕೊಲೆ ಪ್ರಕರಣದ ಆರೋಪಿಗೆ ಮರಣ ದಂಡನೆ ಶಿಕ್ಷೆ ಗೆ ಒತ್ತಾಯಸಿ ಸರ್ವ ಪಕ್ಷಗಳಿಂದ ಬೃಹತ್ ಪ್ರತಿಭಟನಾ ಸಭೆ
Thursday, February 28th, 2013ಬಂಟ್ವಾಳ : ಬುಧವಾರ ಬೆಳಗ್ಗೆ ಬಿಸಿ ರೋಡಿನ ತಾಲೂಕು ಕಚೇರಿ ಮುಂಭಾಗದಲ್ಲಿ ಎಲ್ಲಾ ಪಕ್ಷಗಳ ನಾಯಕರು ಪಕ್ಷ ಭೇದ ಮರೆತು ಸೌಮ್ಯ ಕೊಲೆ ಪ್ರಕರಣದ ಆರೋಪಿಗೆ ಮರಣ ದಂಡನೆ ನೀಡುವಂತೆ ಒತ್ತಾಯಸಿ ಬೃಹತ್ ಪ್ರತಿಭಟನಾ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಶಾಸಕ ರಮಾನಾಥ ರೈ ಹಗಲು ಹೊತ್ತಿನಲ್ಲೇ ಇಂತಹ ಕೃತ್ಯದಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕವ ಉದ್ದೇಶದಿಂದ ಮತ್ತು ನಾಗರೀಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಎಚ್ಚೆತ್ತುಕೊಳ್ಳುವಂತೆ […]