ಅಂಬಿ ಆರೋಗ್ಯ ಮತ್ತಷ್ಟು ಚೇತರಿಕೆ ಇಂದು ವೆಂಟಿಲೇಟರ್ ತೆಗೆಯುವ ಸಾಧ್ಯತೆ
Tuesday, February 25th, 2014ಬೆಂಗಳೂರು: ಅನಾರೋಗ್ಯಕ್ಕೀಡಾಗಿ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದ ನಟ ಮತ್ತು ಸಚಿವ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಬೆಳಗ್ಗೆ ವೆಂಟಿಲೇಟರ್ ತೆಗೆಯುವ ಸಾಧ್ಯತೆ ಇದೆ. ಪ್ರಸ್ತುತ ಅಂಬರೀಶ್ ಅವರಿಗೆ ಕೃತಕ ಉಸಿರಾಟವನ್ನು ಮುಂದುವರೆಸಲಾಗಿದ್ದು, ದೇಶದಲ್ಲಿ ಶೇಖರಣೆಯಾಗಿದ್ದ ನೀರಿನ ಅಂಶವನ್ನು ಹೊರತೆಗೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಪ್ರತಿ ಗಂಟೆಗೊಮ್ಮೆ ವೈದ್ಯರು ಅಂಬರೀಶ್ ಅವರ ಆರೋಗ್ಯ ವಿಚಾರಣೆ ಮಾಡುತ್ತಿದ್ದು, ಅಂಬಿ ಆರೋಗ್ಯದ ಕುರಿತು ತೀವ್ರ ನಿಗಾ ವಹಿಸಿದ್ದಾರೆ. ಅಂಬರೀಶ್ ಅವರ ರಕ್ತದೊತ್ತಡ ಮತ್ತು ಸಕ್ಕರೆ ಪ್ರಮಾಣ […]