ಮತ್ತೆ ತೀವ್ರಗೊಂಡ ಕಾಡಾನೆ ಹಾವಳಿ-ಜೀವನ ಪರ್ಯಂತರದ ಕೃಷಿ ಕಣ್ಣೆದುರೇ ವ್ಯರ್ಥ

Sunday, May 8th, 2016
waild Elephant

ಮುಳ್ಳೇರಿಯಾ: ಕೃಷಿಯನ್ನು ತಪಸ್ಸಿನಂತೆ ಸ್ವೀಕರಿಸಿ ಜೀವನ ಪರ್ಯಂತರದ ಸಾಧನೆ,ಸಾಮರ್ಥ್ಯವನ್ನು ಧಾರೆಯೆರೆದು ಪೋಶಿಸಿ ಬೆಳೆಸಿದ ಬೆಳೆ ನಿಮಿಷಗಳಲ್ಲಿ ನಾಶವಾಗುವುದನ್ನು ಯಾವ ಕೃಷಿಕನೂ ಸಹಿಸಲಾರ. ಆದರೆ ಇಂತಹ ನೋವುಗಳನ್ನು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ನೂರಾರು ಕೃಷಿ ಕುಟುಂಬ ಸಮಸ್ಯೆಗಳನ್ನು ಅನುಭವಿಸುತ್ತಾ ಕಣ್ಣೀರಿಡುತ್ತಿರುವುದು ಮುಂದುವರಿದಿದೆ. ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿಯ ಇ.ರಾಘವನ್ ನಾಯರ್ ರವರ ತೋಟಕ್ಕೆ ಭಾನುವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು ಭೀಕರ ಧಾಳಿ ನಡೆಸಿ ಲಕ್ಷಾಂತರ ರೂ.ಗಳ ಕೃಷಿ ನಾಶಗೈದಿದೆ. 2 ಮರಿ ಆನೆಗಳ ಜೊತೆಗೆ 6 ದೊಡ್ಡ […]

ವಿದ್ಯುತ್ ಸ್ಪರ್ಶಕ್ಕೆ ಕಾಡಾನೆ ಬಲಿ , ಬೈನೆ ಮರದ ಆಸೆಗೆ ಪ್ರಾಣ ಕಳೆದುಕೊಂಡ ಗಜರಾಜ

Friday, August 8th, 2014
Elephant

ಸುಬ್ರಹ್ಮಣ್ಯ:ಆಹಾರ ಅರಸುತ್ತಾ ಕೃಷಿಕನೊರ್ವರ ತೋಟಕ್ಕೆ ದಾಳಿಯಿಟ್ಟು ಅಲ್ಲಿಂದ ತೆರಳಿದ ಒಂಟಿ ಸಲಗವೊಂದು ತನ್ನ ಇಷ್ಟದ ಆಹಾರವಾದ ಬೈನೆ ಗಿಡವನ್ನು ತಿನ್ನುವ ಸಂಧರ್ಭ ವಿದ್ಯುತ್ ಸ್ಪರ್ಶಿಸಿ ಸಾವೀಗೀಡಾದ ದುರಂತ ಘಟನೆ ಸುಬ್ರಹ್ಮಣ್ಯ ರೇಂಜ್ನ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಹೆರಕಜೆ ಎಂಬಲ್ಲಿ ಶುಕ್ರವಾರ ನಡೆದಿದೆ.ದಾರುಣವಾಗಿ ಸಾವಿಗೀಡಾದ ಕಾಡಾನೆ ಸುಮಾರು 25 ವರ್ಷ ತುಂಬಿದೆ ಎಂದು ಅಂದಾಜಿಸಲಾಗಿದ್ದು 2 ದಂತವನ್ನು ಹೊಂದಿದೆ. ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ನಾಲ್ಕೂರು ರಕ್ಷಿತಾರಣ್ಯದ ಕೊಲ್ಲಮೊಗ್ರು -ಕಂದ್ರಪ್ಪಾಡಿ ಸಂಪರ್ಕ ರಸ್ತೆಯ ಮಧ್ಯೆ ಹೆರಕಜೆ ಎಂಬಲ್ಲಿಯ […]