ದಕ್ಷಿಣ ಕನ್ನಡ : 300 ಕೋ.ರೂಪಾಯಿ ಅಧಿಕ ನಷ್ಟ ಸಂಭವಿಸಿದೆ

Wednesday, August 14th, 2019
DK-rain-and-flood

ಮಂಗಳೂರು : ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ 300 ಕೋ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಇದು ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಅಧಿಕ ಎನ್ನಲಾಗಿದೆ. ಬೆಳ್ತಂಗಡಿ-ಬಂಟ್ವಾಳದಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಸದ್ಯ ಜಿಲ್ಲಾಡಳಿತವು ವಿವಿಧ ಇಲಾಖೆಗಳಿಂದ ನಷ್ಟದ ವರದಿ ಸಿದ್ಧಪಡಿಸುತ್ತಿದೆ. ಅದರ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಮಾರು 275 ಕೋ.ರೂ.ಗಳಷ್ಟು (ಕೃಷಿನಾಶ ಬಿಟ್ಟು) ನಷ್ಟ ಸಂಭವಿಸಿದೆ. ಅಂತಿಮ ನಷ್ಟದ ಅಂದಾಜು ಇನ್ನಷ್ಟೇ ಸಿಗಬೇಕಿದೆ. ಕಳೆದ ವರ್ಷ ಮಳೆಗೆ 238 […]

ಕುಂದಾಪುರ : ಮೀನು ಸಂಸ್ಕರಣಾ ಘಟಕದಲ್ಲಿ ಅವಘಡ; ಇನ್ನೆರಡು ದಿನಗಳಲ್ಲಿ ವರದಿ

Wednesday, August 14th, 2019
meenu-samskarana-gataka

ಕುಂದಾಪುರ : ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್‌ ಎಕ್ಸ್‌ಪೋರ್ಟ್‌ ಮರೈನ್‌ ಮೀನು ಸಂಸ್ಕರಣಾ ಘಟಕದಲ್ಲಿ ಸೋಮವಾರ ಸಂಭವಿಸಿದ ಅಮೋನಿಯ ಅನಿಲ ಸೋರಿಕೆ ದುರಂತದಿಂದ ಅಸ್ವಸ್ಥರಾದ 79 ಮಂದಿ ಕಾರ್ಮಿಕರ ಪೈಕಿ 77 ಮಂದಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ. ಗಂಭೀರ ಅಸ್ವಸ್ಥರಾಗಿದ್ದ ಇಬ್ಬರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಮಂಗಳ ವಾರ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಬಿಡುಗಡೆ ಗೊಂಡವರಿಗೆ ವಾರಗಳ ಕಾಲ ಎಚ್ಚರಿಕೆಯಿಂದ ಇರುವಂತೆ ಸೂಚಿಸ ಲಾಗಿದೆ ಎಂದು ಆದರ್ಶ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ […]

ಕೊಲ್ಲೂರು : ದೇವಳದ ಸಾಕಾನೆ ಇಂದಿರಾ ಸಾವು

Wednesday, August 14th, 2019
indira-elephant

ಕೊಲ್ಲೂರು : ದೇವಳದ ಸಾಕಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಜ್ವರದಿಂದ ಬಳಲುತ್ತಿದ್ದ ಸಾಕಾನೆ ಇಂದಿರಾ ಮೃತಪಟ್ಟಿದೆ. ಕಳೆದ 20 ದಿನಗಳಿಂದ 62 ವರ್ಷ ಪ್ರಾಯದ ಆನೆ ಇಂದಿರಾ ಜ್ವರದಿಂದ ಬಳಲುತ್ತಿತ್ತು. ಆನೆ ಜ್ವರದಿಂದ ಬಳಲುತ್ತಿದ್ದರೂ ಕೂಡ ಮಾವುತ ಬಾಬಣ್ಣ ವಿಶೇಷವಾದ ಮುತುವರ್ಜಿಯನ್ನು ವಹಿಸಿಕೊಂಡಿರಲಿಲ್ಲ. ಅಲ್ಲದೆ, ದೇವಾಲಯದ ಆಡಳಿತಮಂಡಳಿಯೂ ಕೂಡ ಯಾವುದೇ ಲಕ್ಷ್ಯವನ್ನು ವಹಿಸಿಕೊಂಡಿರಲಿಲ್ಲ ಎಂದು ಸ್ಥಳೀಯ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿರಾ ಆನೆಯನ್ನು ಬಾಳೆಹೊನ್ನೂರಿನಿಂದ ತರಲಾಗಿತ್ತು. ಕೇರಳ ಮೂಲದ ಟಿಂಬರ್ ಮರ್ಚೆಂಟ್ ಈ ಆನೆಯನ್ನು ದಾನ ನೀಡಿದ್ದರು. […]

ಮಂಗಳೂರು : ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ

Wednesday, August 14th, 2019
nantoor

ಮಂಗಳೂರು : ಶಾಲಾ ಬಸ್ ಮೇಲೆ ಧರೆ ಕುಸಿದು ಭಾರೀ ಗಾತ್ರದ ಮರ ಬಿದ್ದ ಘಟನೆ ಆ. 14 ರ ಬುಧವಾರ ನಗರದ ನಂತೂರು ಸರ್ಕಲ್ ಬಳಿ ಮುಂಜಾನೆ ನಡೆದಿದೆ. ಬಸ್ಸಿನಲ್ಲಿ 17 ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಸುರಕ್ಷಿತವಾಗಿ ಬಸ್ಸಿನಿಂದ ತೆರವುಗೊಳಿಸಿ ಆ ಬಳಿಕ ಸಂಬಂಧಪಟ್ಟ ಶಾಲೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ. ಬಸ್ಸು ಮಾತ್ರವಲ್ಲದೆ ಬುಲೆಟ್ […]

ಪಚ್ಚನಾಡಿಯಲ್ಲಿ ಕುಸಿದು ಬೀಳುತ್ತಿರುವ ತ್ಯಾಜ್ಯ ರಾಶಿ

Wednesday, August 14th, 2019
pacchanaadi

ಮಂಗಳೂರು : ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್’ನ ತ್ಯಾಜ್ಯ ರಾಶಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿ ತ್ಯಾಜ್ಯ ರಾಶಿ ಕುಸಿದು ಬೀಳುತ್ತಿರುವುದು ಪ್ರತಿ ದಿನ ಮುಂದುವರಿಯುತ್ತಲೇ ಇದೆ. 15 ಎಕರೆ ವ್ಯಾಪ್ತಿಯಲ್ಲಿ 75 ಮೀಟರ್ ಎತ್ತರದಲ್ಲಿ ಹರಿದು ಬಂದ ತ್ಯಾಜ್ಯ ಮಂದಾರ ಪ್ರದೇಶದಲ್ಲಿದ್ದ ಅಡಕೆ, ತೆಂಗಿನ ತೋಟವನ್ನು ಸಂಪೂರ್ಣ ಆಪೋಶನ ಪಡೆದಿದೆ. ದಿನೇ ದಿನೇ ತ್ಯಾಜ್ಯ ಮುಂದಕ್ಕೆ ಹರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್’ನಲ್ಲಿ […]

ಮಂಗಳೂರಿನಿಂದ ನೆರೆ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ಕಳುಹಿಸಿಕೊಟ್ಟ ಪತ್ರಕರ್ತರು

Tuesday, August 13th, 2019
KPSM-Flood Relief

ಮಂಗಳೂರು: ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಹಭಾಗಿತ್ವದಲ್ಲಿ ನೆರೆ ಸಂತ್ರಸ್ತರಿಗೆ ನೀಡಲಾದ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳನ್ನು ಬೆಳ್ತಂಗಡಿ ಹಾಗೂ ಚಾರ್ಮಾಡಿ ಗ್ರಾಮಸ್ಥರಿಗೆ ಕೊಂಡೊಯ್ಯುವ ಲಾರಿಗೆ ಕರ್ನಾಟಕ ರಾಜ್ಯ ಅಖಿಲ ಭಾರತ್ ಕಾಂಗ್ರೆಸ್ ಟ್ರಾನ್ಸ್ ಪೋಟ್೯ ಸುನೀಲ್ ಪಾಯ್ಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪ ಇಂದು ಚಾಲನೆ ನೀಡಿದರು. ಈ […]

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೆರೆಪೀಡಿತ ಪ್ರದೇಶಕ್ಕೆ ಭೇಟಿ

Tuesday, August 13th, 2019
mithunRai

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಲೋಕಸಭಾ ಆಭ್ಯರ್ಥಿಯಾದ ಮಿಥುನ್ ರೈ ಮಂಗಳವಾರ ನೆರೆಯಿಂದ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕಿನ ಲೈಲಾ, ಇಂದಬೆಟ್ಟು, ಕಿಲ್ಲೂರು ಶಾಲೆ , ಮಕ್ಕಿ ಹಾಗೂ ಗಂಜಿ ಕೇಂದ್ರಗಳಿಗೆ  ಭೇಟಿ ನೀಡಿ ಸಂತ್ರಸ್ತರನ್ನು ಸಂತೈಸಿದರು. ಜೊತೆಗೆ ತನ್ನ ಸ್ವಂತ ಖರ್ಚಿನಲ್ಲಿ ದಿನ ನೀತ್ಯ ಅಗತ್ಯ ವಸ್ತುಗಳನ್ನು ಎರಡು ದಿನಗಳಲ್ಲಿ ಪೂರೈಸುವುದಾಗಿ ಭರವಸೆಗಳನ್ನು ನೀಡಿ ಅಧಿಕಾರಿಗಳಿಂದ ಅಗತ್ಯವಸ್ತುಗಳ ಪಟ್ಟಿಯನ್ನು ಪಡೆದುಕೊಂಡರು.

ಜಿಪಿಎಲ್ ಉತ್ಸವದ ಕ್ರಿಕೆಟ್ ಸರಣಿಯ ಆಟಗಾರರ ಹರಾಜು

Tuesday, August 13th, 2019
GPL

ಮಂಗಳೂರು   :  ಫುಜ್ಲಾನಾ ಜಿಎಸ್ ಬಿ ಪ್ರೀಮಿಯರ್ ಲೀಗ್ (ಜಿಪಿಎಲ್) ಹರಾಜು ಪ್ರಕ್ರಿಯೆ 2020 ಮಂಗಳೂರಿನ ಟಿವಿ ರಮಣ್ ಪೈ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು. ಒಟ್ಟು ನೋಂದಾಯಿತ 366 ಆಟಗಾರರಲ್ಲಿ 272 ಮಂದಿ ಆಟಗಾರರನ್ನು ಒಟ್ಟು 16 ತಂಡಗಳ ಮಾಲೀಕರು ಹರಾಜು ಪ್ರಕ್ರಿಯೆಯಲ್ಲಿ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡರು. ಒಟ್ಟು 5 ಲಕ್ಷದ 18 ಸಾವಿರ ರೂಪಾಯಿ ಮೊತ್ತವನ್ನು 16 ತಂಡಗಳ ಮಾಲೀಕರು ವಿನಿಯೋಗಿಸಿದ್ದಾರೆ. ರಾಕೇಶ್ ಕಾಮತ್ ಎನ್ನುವ ಆಟಗಾರ ಅತೀ ಹೆಚ್ಚು ಮೊತ್ತ […]

ಸ್ಕೂಟಿ -ಜೀಪು ಢಿಕ್ಕಿ : ನಿವೃತ್ತ ಎಎಸ್‌ಐ ಮೃತ್ಯು

Tuesday, August 13th, 2019
scoty

ಸುಳ್ಯ : ಮಾಣಿ ಮೈಸೂರು ರಾಷ್ಟ್ರೀಯ  ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಢಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ‌ಸೇರಿದ ಜೀಪು, ಸ್ಕೂಟಿಗೆ ಢಿಕ್ಕಿ ಹೊಡೆಯಿತು. ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅಣ್ಣಯ್ಯ ಗೌಡರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ […]

ಪ್ರವಾಹ ಪೀಡಿತ ತಾಲ್ಲೂಕು ಎಂದು ಬೆಳ್ತಂಗಡಿಯನ್ನು ಘೋಷಿಸಲು ಯು.ಟಿ.ಖಾದರ್ ಮನವಿ

Tuesday, August 13th, 2019
UT-khader

ಮಂಗಳೂರು:  ಬೆಳ್ತಂಗಡಿಯನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ಅಲ್ಲದೆ, ಪರಿಹಾರ ರೂಪವಾಗಿ ಕೊಡಗು ಮಾದರಿ ಪ್ಯಾಕೇಜ್ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು‌. ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿದ್ದ ಕೊಡಗಿಗೆ ಸಮ್ಮಿಶ್ರ ಸರ್ಕಾರ ನೀಡಿದ ಯೋಜನೆಗೆ ಇನ್ನಷ್ಟು ಪರಿಹಾರ ಸೇರಿಸಿ ಕೊಡಲಿ. ಮನೆ ಕಳೆದುಕೊಂಡವರು ಈಗಲೂ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕೊಡಗಿನಲ್ಲಿ ತಕ್ಷಣದ ಖರ್ಚು ವೆಚ್ಚಕ್ಕಾಗಿ ಸಂತ್ರಸ್ತರಿಗೆ ₹ 3-5 ಸಾವಿರ ನೀಡಿದ್ದೆವು. ವಾರದೊಳಗೆ ಲಕ್ಷ ರೂಪಾಯಿ ನೀಡಿದ್ದೆವು‌ ಎಂದು […]