ಸ್ಕೂಟಿ -ಜೀಪು ಢಿಕ್ಕಿ : ನಿವೃತ್ತ ಎಎಸ್‌ಐ ಮೃತ್ಯು

Tuesday, August 13th, 2019
scoty

ಸುಳ್ಯ : ಮಾಣಿ ಮೈಸೂರು ರಾಷ್ಟ್ರೀಯ  ಹೆದ್ದಾರಿಯ ಸುಳ್ಯ ನಗರದ ಹೊರವಲಯದ ಅರಂಬೂರಿನಲ್ಲಿ ಸ್ಕೂಟಿ ಹಾಗೂ ಜೀಪು ಪರಸ್ಪರ ಢಿಕ್ಕಿ ಹೊಡೆದು ಸ್ಕೂಟಿ ಸವಾರ ನಿವೃತ್ತ ಎಎಸ್‌ಐ ಪಡ್ಪು ಇಡ್ಯಡ್ಕ ಅಣ್ಣಯ್ಯ ಗೌಡ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಅಣ್ಣಯ್ಯ ಗೌಡರು ತನ್ನ ಮನೆಯಿಂದ ಅರಂತೋಡು ಕಡೆ ತೆರಳುತ್ತಿದ್ದರು. ಅರಂತೋಡಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಚಿಕನ್ ಸೆಂಟರೊಂದಕ್ಕೆ‌ಸೇರಿದ ಜೀಪು, ಸ್ಕೂಟಿಗೆ ಢಿಕ್ಕಿ ಹೊಡೆಯಿತು. ತಲೆ ಹಾಗೂ ಎದೆಯ ಭಾಗಕ್ಕೆ ಗಂಭೀರ ಗಾಯಗೊಂಡ ಅಣ್ಣಯ್ಯ ಗೌಡರನ್ನು ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ […]

ಪ್ರವಾಹ ಪೀಡಿತ ತಾಲ್ಲೂಕು ಎಂದು ಬೆಳ್ತಂಗಡಿಯನ್ನು ಘೋಷಿಸಲು ಯು.ಟಿ.ಖಾದರ್ ಮನವಿ

Tuesday, August 13th, 2019
UT-khader

ಮಂಗಳೂರು:  ಬೆಳ್ತಂಗಡಿಯನ್ನು ಪ್ರವಾಹ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಬೇಕು. ಅಲ್ಲದೆ, ಪರಿಹಾರ ರೂಪವಾಗಿ ಕೊಡಗು ಮಾದರಿ ಪ್ಯಾಕೇಜ್ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು‌. ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಪ್ರವಾಹಕ್ಕೆ ಸಿಲುಕಿದ್ದ ಕೊಡಗಿಗೆ ಸಮ್ಮಿಶ್ರ ಸರ್ಕಾರ ನೀಡಿದ ಯೋಜನೆಗೆ ಇನ್ನಷ್ಟು ಪರಿಹಾರ ಸೇರಿಸಿ ಕೊಡಲಿ. ಮನೆ ಕಳೆದುಕೊಂಡವರು ಈಗಲೂ ನಿರಾಶ್ರಿತರ ಕೇಂದ್ರದಲ್ಲಿದ್ದಾರೆ. ಕೊಡಗಿನಲ್ಲಿ ತಕ್ಷಣದ ಖರ್ಚು ವೆಚ್ಚಕ್ಕಾಗಿ ಸಂತ್ರಸ್ತರಿಗೆ ₹ 3-5 ಸಾವಿರ ನೀಡಿದ್ದೆವು. ವಾರದೊಳಗೆ ಲಕ್ಷ ರೂಪಾಯಿ ನೀಡಿದ್ದೆವು‌ ಎಂದು […]

ಬೆಳ್ತಂಗಡಿ : ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ ಆಟೋ ಚಾಲಕ

Tuesday, August 13th, 2019
Auto driver

ಬೆಳ್ತಂಗಡಿ  : ಆಟೋ ಚಾಲಕರೊಬ್ಬರು ನೆರೆ ಸಂತ್ರಸ್ತರಿಗೆ 1 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಬೆಳ್ತಂಗಡಿಯ ಆಟೋ ಚಾಲಕ ನೆರೆ ಸಂತ್ರಸ್ತರಿಗೆ ಬರೋಬ್ಬರಿ 1 ಲಕ್ಷ ರುಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹೊನ್ನಪ್ಪ ಗೌಡ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದವರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ನೆರ ಸಂತ್ರಸ್ತರಿಗೆ ನೆರವಾಗಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ಮನವಿಗೆ ಸ್ಪಂದಿಸಿದ ಆಟೋ ಚಾಲಕ ಹೊನಪ್ಪ ಗೌಡ ಅವರು […]

ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ನಿಂದ ಅಬಲೆಯ ವಿವಾಹ

Tuesday, August 13th, 2019
Katileshwari trust

ಮಂಜೇಶ್ವರ : ಬದುಕಿನ ವೃತ್ತಾಂತಗಳಲ್ಲಿ ಕಷ್ಟ-ಸುಖಗಳು ಎರಡು ವಿಭಿನ್ನ ಮುಖಗಳು. ವರ್ತಮಾನದಲ್ಲಿ ನಾವು ಈ ಎರಡು ಸಂದರ್ಭದಲ್ಲಿ ಸ್ಪಂದಿಸುವ ಸಹೃದಯಿಗಳಾಗಬೇಕು. ಅಂತಹ ಹೃದಯವಂತಿಕೆ ಆದರಿಂದ ಮಾತ್ರ ಮಹತ್ವವಾದ ಜ್ಯೋತಿ ಬೆಳಗಲು ಸಾಧ್ಯ. ಈ ರೀತಿಯ ಮನೋಭಾವ ಸಂಘಟನೆಯನ್ನು ಕಟ್ಟಿಕೊಂಡು ಉಳ್ಳವರಿಂದ ಸಂಗ್ರಹಿಸಿ ಇಲ್ಲದವರ ಕಡೆ ಸಹಾಯಹಸ್ತ ಚಾಚುವ ಯೋಜನೆ ನಿಜವಾಗಿಯೂ ದೇವಿಯ ಪ್ರೀತಾರ್ಥ್ಯ ಸೇವೆಯೆಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಶ್ರೀ ಬಾಲಕೃಷ್ಣ ಅಸ್ರಣ್ಣರವರು ನುಡಿದರು. ಅವರು ನಿನ್ನೆ ಸಂಜೆ ಕ್ಷೇತ್ರದ ಸಾನಿಧ್ಯದಲ್ಲಿ ಶ್ರೀ ಕಟೀಲೇಶ್ವರೀ […]

ಬೆಳುವಾಯಿಯಲ್ಲಿ ಕಾರು ಡಿಕ್ಕಿ ನಾಲ್ವರಿಗೆ ಗಾಯ ವಿದ್ಯಾರ್ಥಿನಿ ಗಂಭೀರ

Tuesday, August 13th, 2019
belvai

ಮೂಡುಬಿದಿರೆ : ಬೆಳುವಾಯಿಯಲ್ಲಿ ಇನ್ನೋವಾ ಕಾರೊಂದು ಕಾಲೇಜು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಿದ್ಯಾರ್ಥಿನಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳುವಾಯಿ ಮುಡಾಯಿ ಕಾಡು ನಿವಾಸಿ ಜಗನ್ನಾಥ ಮಡಿವಾಳರ ಪುತ್ರಿ , ಉಡುಪಿ ಹಿರಿಯಡ್ಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶುಭಲಕ್ಷ್ಮಿ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿ. ಬೆಳಿಗ್ಗೆ ನಾಲ್ವರು ವಿದ್ಯಾರ್ಥಿಗಳು ಕಾರ್ಕಳ ಕಡೆಗೆ ಹೋಗುವ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದು ಈ ಸಂದರ್ಭದಲ್ಲಿ ಮೂಡುಬಿದಿರೆ ಕಡೆಯಿಂದ ಅತೀ ವೇಗದಿಂದ ಬಂದ ಇನ್ನೋವಾ ಕಾರು ಶುಭಲಕ್ಷ್ಮಿಗೆ ಢಿಕ್ಕಿ ಹೊಡೆದಿದ್ದು […]

ಡಿ ವೇದವ್ಯಾಸ ಕಾಮತ್ : ನೆರೆ ಸಂತ್ರಸ್ತರ ನೆರವಿಗೆ ಸ್ಪಂದಿಸಿ

Tuesday, August 13th, 2019
vedhavyas-kamath

ಮಂಗಳೂರು : ಕರಾವಳಿ ಸೇರಿದಂತೆ ರಾಜ್ಯದ ಜನ ಅತೀವೃಷ್ಠಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಜನತೆ ಅವರ ನೆರವಿಗೆ ಸ್ಪಂದಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ. ವಿಪರೀತ ಮಳೆ ಮತ್ತು ನೆರೆಯಿಂದ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯದ ಬಹುಭಾಗ ಜಲಾವೃತವಾಗಿರುವುದರಿಂದ ಲಕ್ಷಾಂತರ ಜನರು ನಿತ್ಯಸಂಕಟವನ್ನು ಅನುಭವಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಲು ಶಾಸಕ ವೇದವ್ಯಾಸ ಕಾಮತ್ ಹಾಗೂ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ನೆರೆ […]

ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾನೂನಿಗೆ ಅಡ್ಡಿ ಮಾಡಬೇಡಿ ಅಧಿಕಾರಿಗಳಿಗೆ ಮುಖ್ಯಮಂತ್ರಿಸೂಚನೆ

Monday, August 12th, 2019
Yedyurappa Dharmasthala

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿ ವೀಕ್ಷಣೆ ಮಾಡಿದ ಬಳಿಕ ಧರ್ಮಸ್ಥಳದಲ್ಲಿ ಅಧಿಕಾರಿಗಳು, ಶಾಸಕರು ಮತ್ತು ಸಂಸದರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆ ಕಳೆದುಕೊಂಡವರಿಗೆ‌ 1 ಲಕ್ಷ, ಮತ್ತು ಮನೆ ಕಟ್ಟುವ ಇನ್ನೂ ಏಳೆಂಟು ತಿಂಗಳ ತನಕ ಪ್ರತಿ ತಿಂಗಳಿಗೆ 5 ಸಾವಿರ ಬಾಡಿಗೆ ಮತ್ತು ತಕ್ಷಣದ ಪರಿಹಾರ 10 ಸಾವಿರ ಇವತ್ತೆ ನೀಡುವಂತೆ ಘೋಷಿಸಿದ್ದೇನೆ. ಇದನ್ನು ಸಂತ್ರಸ್ತರಿಗೆ ನೀಡುವಲ್ಲಿ […]

ಮೃತ ಜರ್ನಲಿಸ್ಟ್ ನಾಗೇಶ್ ಪಡು ಕುಟುಂಬಕ್ಕೆ 5 ಲಕ್ಷ ರುಪಾಯೀ ಆರ್ಥಿಕ ನೆರವು ಘೋಷಿಸಿದ ಸಿಎಂ

Monday, August 12th, 2019
Nagesh padu

ಮಂಗಳೂರು  : ಡೆಂಗೀ ಜ್ವರದಿಂದ ಸಾವನ್ನಪ್ಪಿರುವ ಖಾಸಗಿ ವಾಹಿನಿ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ರಾಜ್ಯದ ಮುಖ್ಯಮಂತ್ರಿ ಬಿ ಯಸ್ ಯೆಡಿಯೂರಪ್ಪ ನವರಿಗೆ ಧರ್ಮಸ್ಥಳದಲ್ಲಿ ಮನವಿ ಸಲ್ಲಿಸಿದ್ದರು . ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಬಿ ಯಸ್ ಯೆಡಿಯೂರಪ್ಪ ನವರು ರಾಜ್ಯ ಸರಕಾರದ ವತಿಯಿಂದ ನಾಗೇಶ್ ಪಡು ಕುಟುಂಬಕ್ಕೆ 5 ಲಕ್ಷ ರುಪಾಯೀ ಆರ್ಥಿಕ […]

ಪುತ್ತೂರು : ಕಾರು ಚಾಲಕ ಮೃತ್ಯು ; ಬಸ್ ಪುಡಿಗೈದ ಆಕ್ರೋಶಿತರು

Monday, August 12th, 2019
Puttur-Accident

ಪುತ್ತೂರು : ಪುತ್ತೂರಿನ ಕಬಕದ ಸಮೀಪ ಖಾಸಗಿ ಬಸ್ ಕಾರೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಆ. 12 ರ ಸೋಮವಾರ  ಪೊಲ್ಯದಲ್ಲಿ ನಡೆದಿದೆ. ಮಂಗಳೂರು – ಪುತ್ತೂರು ನಡುವೆ ಸಂಚರಿಸುವ ಧರಿತ್ರಿ ಬಸ್ ಕಾರಿಗೆ ಢಿಕ್ಕಿ ಹೊಡೆದಿದ್ದು ಘಟನೆಯಲ್ಲಿ ಕಾರು ಚಾಲಕ ಹಕೀಮ್ ಸಾವನ್ನಪ್ಪಿದ್ದಾರೆ. ಹಕೀಮ್ ಪುತ್ತೂರಿನ ಈಶ್ವರಮಂಗಲದ ನಿವಾಸಿಯಾಗಿದ್ದಾರೆ. ಘಟನೆ ನಡೆದ ತಕ್ಷಣ ಆಕ್ರೋಶಗೊಂಡ ಸ್ಥಳೀಯರೂ ಬಸ್ ಪುಡಿಗೈದಿದ್ದಾರೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ದರೋಡೆ ; ಇಬ್ಬರು ಆರೋಪಿಗಳ ಬಂಧನ

Monday, August 12th, 2019
Bengre-accused

ಮಂಗಳೂರು: ನಗರದ ಹೊರವಲಯದ ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿರುವ ವ್ಯಕ್ತಿಯನ್ನು ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಕಸಬ ಬೆಂಗ್ರೆ ತೌಹೀದ್ ಮಂಜಿಲ್ ನಿವಾಸಿ ಸರ್ಫರಾಜ್ (28) ಹಾಗೂ ಕಸಬ ಬೆಂಗ್ರೆಯ ಸೈಯದ್ ಅಫ್ರಿದ್ ಯಾನೆ ಕುಡಿಯ ಅಪ್ಪಿ (21) ಬಂಧಿತರು ಆರೋಪಿಗಳು. ಆಗಸ್ಟ್ 6 ರಂದು ಆರೋಪಿಗಳು ಬೈಕಂಪಾಡಿಯ ಕಾವೇರಿ ಫೋರ್ಡ್ ಕಂಪೆನಿಯ ರಸ್ತೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರ ಮೊಬೈಲ್ ಹಾಗೂ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. […]