Blog Archive

ಕೋವಿಡ್ – 19 : ಜ್ವರ ಪತ್ತೆ ಹಚ್ಚಲು 13 ಜ್ವರ ಕ್ಲಿನಿಕ್‌ ತೆರೆದ ಆರೋಗ್ಯ ಇಲಾಖೆ

Wednesday, April 1st, 2020
ಕೋವಿಡ್ - 19 : ಜ್ವರ ಪತ್ತೆ ಹಚ್ಚಲು 13 ಜ್ವರ ಕ್ಲಿನಿಕ್‌ ತೆರೆದ ಆರೋಗ್ಯ ಇಲಾಖೆ

ಮಂಗಳೂರು  : ರಾಷ್ಟ್ರವ್ಯಾಪಿ ಪಸರಿಸುವ ಕೊರೋನ ವೈರಸ್/ ಕೋವಿಡ್ – 19 ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾರ್ಯಕ್ರಮದನ್ವಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸದ್ರಿ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದ್ದು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಜ್ವರ ಕ್ಲಿನಿಕ್‌ಗಳನ್ನು ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ತೆರೆಯಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದ.ಕ ಮಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 13 ಜ್ವರದ ಚಿಕಿತ್ಸಾಲಯಗಳನ್ನು (Fever Clinic) ತೆರೆಯಲಾಗಿದ್ದು ಅವುಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯಲು […]

ಕೋವಿಡ್-19 ಗಾಗಿ ಸಹ್ಯಾದ್ರಿ ಕಾಲೇಜು ವತಿಯಿಂದ ರೂ.5 ಲಕ್ಷ ಸಿಎಂ ಪರಿಹಾರ ನಿಧಿಗೆ ನೆರವು.

Wednesday, April 1st, 2020
Sahyadri-Relief-Fund-2020

ಮಂಗಳೂರು   : ಸಹ್ಯಾದ್ರಿ ಕಾಲೇಜು ಆಫ್‌ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್, ಮಂಗಳೂರಿನ ಮ್ಯಾನೇಜ್ಮೆಂಟ್, ಶಿಕ್ಷರು ಹಾಗು ಸಿಬ್ಬಂದಿ ವರ್ಗದ ಸದಸ್ಯರು ತಮ್ಮಒಂದು ದಿನದ ವೇತನ ಒಟ್ಟು 5 ಲಕ್ಷ ರೂ. ಚೆಕ್‌ ಅನ್ನು ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಅವರು ಜಿಲ್ಲಾಧಿಕಾರಿ ಶ್ರೀಮತಿ ಸಿಂಧು ರೂಪೇಶ್‌ ಐಎಎಸ್‌ ಅವರ ಮೂಲಕ ಸಿಎಂ ಪರಿಹಾರ ನಿಧಿಗೆ ಹಸ್ತಾಂತರಿಸಿದರು. ಸಂಸದ ಶ್ರೀ ನಳಿನ್ ಕುಮಾರ್‌ಕಟೀಲ್, ಶಾಸಕ ಡಾ.ಭರತ್‌ಕುಮಾರ್ ಶೆಟ್ಟಿ, ಜಿಲ್ಲಾಉಸ್ತುವಾರಿ ಕಾರ್ಯದರ್ಶಿ ಶ್ರೀ ಪೊನ್ನುರಾಜ್‌ಐಎಎಸ್, ಡಿಕೆಜಿಲ್ಲಾ ಪಂಚಾಯತ್ ಸಿಇಒ ಶ್ರೀ […]

ಕೇರಳದ ಸೋಂಕಿತರನ್ನು ಗಡಿಯೊಳಗೆ ಬರದಂತೆ ತಡೆಯಿರಿ : ಸಿದ್ದರಾಮಯ್ಯ

Tuesday, March 31st, 2020
Sidhramahia

ಬೆಂಗಳೂರು: ಕೇರಳ ರಾಜ್ಯದವರು ಕೋವಿಡ್-19 ಸೋಂಕು ಇರುವವರನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ. ದಕ್ಷಿಣ ಕನ್ನಡ, ಕೊಡಗು, ಮೈಸೂರು ಗಡಿ ಮೂಲಕ ರಾಜ್ಯಕ್ಕೆ ಕಳುಹಿಸುತ್ತಿದ್ದಾರೆ. ಕೇರಳದವರನ್ನು ರಾಜ್ಯದ ಗಡಿಯೊಳಗೆ ಬರದಂತೆ ತಡೆಯಿರಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರು ಜಿಲ್ಲಾಧಿಕಾರಿಯವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಈ ಸೂಚನೆ ನೀಡಿದರು. ರಾಜ್ಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭೆ ಸೇರಿ ಚರ್ಚೆ ನಡೆಸಿದರು. ಈ ವೇಳೆ […]

ದಕ್ಷಿಣ ಕನ್ನಡ ಜಿಲ್ಲೆ ರವಿವಾರವೂ ಸಂಪೂರ್ಣ ಬಂದ್

Saturday, March 28th, 2020
Kota Srinivas

ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಬಂದ್ ಅನಿವಾರ್ಯವಾಗಿದ್ದು, ಶನಿವಾರದಂತೆ ರವಿವಾರವೂ ಸಂಪೂರ್ಣ ಬಂದ್ ಆಗಿರಲಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ  ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರವೂ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಹಾಲು ವಿತರಣೆಗೆ ಸಂಪೂರ್ಣ ರಿಯಾಯಿತಿ ಇದೆ. ಮನೆ ಮನೆಗೂ ವಿತರಕರು ಹಾಲು ಹಾಕುತ್ತಾರೆ. ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಔಷಧಾಲಯ ಎಂದಿನಂತೆ ತೆರೆಯಲಿದೆ. ಔಷಧ ಖರೀದಿಗೆ ನಿಗದಿತ ಕಾರಣ ಇದ್ರೆ ಮಾತ್ರ ಅನುಮತಿಯಿದೆ. ಸಿಲಿಂಡರ್ ಪೂರೈಕೆ, ಪೆಟ್ರೋಲ್ ಬಂಕ್ ಗಳು ತೆರೆದಿರಲಿದೆ. […]

ಕೋವಿಡ್ 19: ಮನೆ ದಿಗ್ಬಂದನದಲ್ಲಿರುವ ವ್ಯಕ್ತಿಗಳು ಹೊರ ಬಂದಲ್ಲಿ ಕಠಿಣ ಕ್ರಮ

Thursday, March 26th, 2020
Jagadeesha

ಉಡುಪಿ: ಹೋಮ್ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿಗಳು ತಮ್ಮ ಮನೆಗಳಿಂದ ಯಾವುದೇ ಕಾರಣಕ್ಕೆ ಹೊರಗೆ ಬರಬಾರದು ಹಾಗೆ ಹೊರಗೆ ಬಂದ ಮಾಹಿತಿ ಸಿಕ್ಕಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ. ಹೋಮ್ ಕ್ವಾರೆಂಟೈನ್ ಆಗಿರುವ ವ್ಯಕ್ತಿಗಳಿಗೆ ಜಿಲ್ಲಾಧಿಕಾರಿ ಕಛೇರಿಯಿಂದಲೇ ಫೋನ್ ಕರೆ ಮಾಡಿ ವಿಚಾರಿಸುವ ಕೆಲಸವೂ ನಡೆಯುತ್ತಿದೆ. ಕೋವಿಡ್ 19 ವೈರಸ್ ಹರಡುವುದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಾಕ್ ಡೌನ್ ಸಹಿತ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ […]

ಕೋವಿಡ್-19 : ವೈದ್ಯಕೀಯ ಸೇವೆ, ಆಹಾರ ವ್ಯವಸ್ಥೆ, ಸರಕಾರಿ ಸೇವೆಗಳಿಗೆ ಕಂಟ್ರೋಲ್‌ ರೂಂ: 1077 ಗೆ ಕರೆಮಾಡಿ

Wednesday, March 25th, 2020
DC Control Room

ಮಂಗಳೂರು: ಕೋವಿಡ್-19 ಸೋಂಕು ಶಂಕಿತರು ಮತ್ತು ಬಾಧಿತರ ಸಮಗ್ರ ಮಾಹಿತಿ ಸಂಗ್ರಹ ಹಾಗೂ ಸಮನ್ವಯ ಕಾಪಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುಸಜ್ಜಿತ ಕಂಟ್ರೋಲ್‌ ರೂಂ ತೆರೆಯಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿ, ಬೇರೆ ವಿಮಾನ ನಿಲ್ದಾಣಗಳಿಂದ ಜಿಲ್ಲೆಗೆ ಬಂದವರ ಮಾಹಿತಿ, ಅವರು ಸಂಪರ್ಕ ಹೊಂದಿದ ಪ್ರದೇಶಗಳು, ವ್ಯಕ್ತಿಗಳ ಮಾಹಿತಿಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತಿದೆ. ಶಂಕಿತ ರೋಗಿಗಳ ವಿವರ, ವಿಮಾನದಲ್ಲಿ ಅವರ ಸಹಪ್ರಯಾಣಿಕರ ವಿವರಗಳನ್ನು ವಿಮಾನ ನಿಲ್ದಾಣದಿಂದ, ಸಂಬಂಧಪಟ್ಟ ವಿಮಾನ ಸಂಸ್ಥೆಗ ಳಿಂದ ಪಡೆದು ಅವರೊಂದಿಗೆ ನಿರಂತರ ಸಂಪರ್ಕ ಇಡಲಾಗುತ್ತಿದೆ. ವಿದೇಶದಿಂದ […]

ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಬಗ್ಗೆ ಮಾಹಿತಿ ನೀಡಲು ಅಲ್ಲಲ್ಲಿ ಹೆಲ್ಪ್ ಡೆಸ್ಕ್

Tuesday, March 24th, 2020
helpdesk

ಮಂಗಳೂರು : ವೆನ್‍ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಸಂಶಾಯಾಸ್ಪದ ಪ್ರಕರಣಗಳಿಗೆ 8 ವಿಶೇಷ ಪ್ರತ್ಯೇಕ ಕೊಠಡಿಗಳನ್ನು ಕಾದಿರಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳು ಬಂದರೆ, ಅಂತಹ ರೋಗಿಗಳನ್ನು ಈ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬೊಬ್ಬರನ್ನು ಒಂದೊಂದು ಕೊಠಡಿಗೆ ಕಾದಿರಿಸಿ ದಾಖಲಿಸಲಾಗುತ್ತಿದೆ. ಅವರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪರೀಕ್ಷೆ ನೆಗೆಟಿವ್ ಬಂದರೆ ಅವರಿಗೆ 14 ದಿನಗಳ ನಿಗಾವಣೆಯಲ್ಲಿರಲು ಸೂಚನೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಪೊಸಿಟಿವ್ ಬಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿಯಂತೆ ಚಿಕಿತ್ಸೆ ಕೊಡಲಾಗುತ್ತದೆ. ಇದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ, […]

ಕೋವಿಡ್-19 ನಿಯಂತ್ರಣ ಕರೆಗೆ ಜನ ಸಹಕಾರ ನೀಡಿದ್ದಾರೆ : ಶ್ರೀನಿವಾಸ ಪೂಜಾರಿ

Monday, March 23rd, 2020
Kota-srinivasa-poojary

ಮಂಗಳೂರು: ಪ್ರಧಾನ ಮಂತ್ರಿ ಕೋವಿಡ್-19 ನಿಯಂತ್ರಣ ಕರೆಗೆ ಜನ  ಸಹಕಾರ ನೀಡಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಜಿಲ್ಲೆಯಲ್ಲಿ 1 ಪ್ರಕರಣ ಪಾಸಿಟಿವ್ ದೃಢವಾಗಿದೆ. ಪಾಸಿಟಿವ್ ಬಂದ ಯುವಕನಿಗೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತೇಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿ 104 ಸ್ಯಾಂಪಲ್ ನಲ್ಲಿ 1 ಮಾತ್ರ ದೃಡವಾಗಿದೆ. 31 ತಾರೀಕಿನವರೆಗೆ ಮತ್ತೆ ಇಂದಿನಂತೆ ಬಂದ್ ಮುಂದುವರಿಯಯತ್ತದೆ. ಆದರೆ ಹಾಲು ತರಕಾರಿ ದಿನಸಿ ಸಾಮಾನುಗಳು ಸಹಿತ ತುರ್ತು ಸೇವೆ ಮುಂದುವರಿಯುತ್ತದೆ. ವಿಮಾನದಲ್ಲಿದ್ದ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕೋವಿಡ್ 19 ಪ್ರಕರಣ ಪತ್ತೆ

Sunday, March 22nd, 2020
wenlock

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕೋವಿಡ್ 19 ಪ್ರಕರಣ ಪತ್ತೆಯಾಗಿದ್ದು, ಮಾರ್ಚ್ 19ರಂದು ದುಬಾಯಿಯಿಂದ ಬಂದ ವಿಮಾನದಲ್ಲಿದ್ದ 22 ವರ್ಷದ ಯುವಕನಲ್ಲಿ ಕೋವಿಡ್ 19 ಪ್ರಕರಣ ದೃಢಪಟ್ಟ ವರದಿ ಲಭಿಸಿದೆ. ದುಬಾಯಿಯಿಂದ ಮಾರ್ಚ್ 19ರಂದು ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ 22 ವರ್ಷದ ಭಟ್ಕಳ ಮೂಲದ ಯುವಕನನ್ನು ಅಂದು ತಪಾಸಣೆ ನಡೆಸಿ ಆತನ ಗಂಟಲ ಸ್ರಾವದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಮತ್ತು ಆ ದಿನವೇ ಈತನನ್ನು ನಗರದ ವೆನ್ಲಾಕ್ ಆಸ್ಪತ್ರೆಯ ಐಸೊಲೇಷನ್ ವಾರ್ಡ್ನಲ್ಲಿ ದಾಖಲಿಸಲಾಗಿತ್ತು. ಆ […]

ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಸೇವೆಗಳು ಬಂದ್

Friday, March 20th, 2020
dc office Mangalore

ಮಂಗಳೂರು: ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಸರಕಾರಿ ಸೇವೆಗಳನ್ನು ಮಾ. 31ರ ವರೆಗೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಆದೇಶಿಸಿದ್ದಾರೆ. ಸಾರ್ವಜನಿಕರು ಸರಕಾರದ ವಿವಿಧ ಸೇವೆಗಳನ್ನು ಪಡೆಯುವ ಉದ್ದೇಶದಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಕಚೇರಿಗಳಿಗೆ ಭೇಟಿ ನೀಡುವುದರಿಂದ ಜನದಟ್ಟಣೆ ಉಂಟಾಗುತ್ತಿದ್ದು, ಇದು ವೈರಾಣು ಹರಡಲು ಅನುಕೂಲ ವಾತಾವರಣ ಮಾಡಿಕೊಟ್ಟಂತಾಗು ತ್ತದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಹೊರಡಿಸಿರುವ ಆದೇಶ ದಲ್ಲಿ […]