ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯ..ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ!

Friday, July 13th, 2018
india

ನ್ಯಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಈಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದೆ. ಇಲ್ಲಿನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಇಂಗ್ಲೆಂಡ್ ನೀಡಿದ 268 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ 40.1 ಓವರ್ಗಳಲ್ಲಿ 2 ವಿಕೆಟ್ಕಳೆದುಕೊಂಡು 269 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಹಿಟ್ಮ್ಯಾನ್ ರೋಹಿತ್ […]

ಇಂಗ್ಲೆಂಡಿಗೆ ಸೋಲು..ಮೊದಲ ಬಾರಿ ಕ್ರೊವೇಷಿಯಾ ಫೈನಲ್​ಗೆ ಎಂಟ್ರಿ!

Thursday, July 12th, 2018
croatia

ಮಾಸ್ಕೋ: ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಕ್ರೊವೇಷಿಯಾ ತಂಡ ಫೈನಲ್ಗೆ ಎಂಟ್ರಿ ನೀಡಿದೆ. ಈ ಮೂಲಕ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಫೈನಲ್ಗೇರಿ ಇತಿಹಾಸ ನಿರ್ಮಿಸಿದೆ. ರಷ್ಯಾದ ಲುಜ್ನಿಕ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಕ್ರೊವೇಷಿಯಾ 2-1 ಗೋಲುಗಳ ಅಂತರದಿಂದ ಸೋಲಿಸಿತು. ಎರಡೂ ತಂಡಗಳು ಬಲಿಷ್ಠವಾಗಿದ್ದರಿಂದ ಪಂದ್ಯ ತೀವ್ರ ಹಣಾಹಣೆಗೆ ಸಾಕ್ಷಿಯಾಯಿತು. ಪಂದ್ಯದ ಮೊದಲಾರ್ಧದಲ್ಲೇ ಫ್ರೀಕಿಕ್ನಲ್ಲಿ ಕೀರನ್ ಟ್ರಿಪ್ಪಿರ್ ಗೋಲು ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದಿದ್ದರು. ಬಳಿಕ 68ನೇ […]

ಫಿಫಾ ವಿಶ್ವಕಪ್​ 2ನೇ ಸೆಮೀಸ್..ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ನಡುವೆ ಹಣಾಹಣಿ!

Wednesday, July 11th, 2018
england

ಮಾಸ್ಕೋ: ಒಂದು ತಂಡ 28 ವರ್ಷಗಳ ಬಳಿಕ ಮತ್ತೊಂದು ತಂಡ ಅರ್ಧಶತಕ ವರ್ಷಗಳ ಬಳಿಕ ಫೈನಲ್ಗೇರುವ ಕನಸು ಕಾಣುತ್ತಿವೆ. ಅವು ಬೇರಾರು ಅಲ್ಲ ಇಂಗ್ಲೆಂಡ್ ಮತ್ತು ಕ್ರೊವೇಷಿಯಾ ತಂಡಗಳು. ಅದರಲ್ಲೂ 21 ನೇ ವಿಶ್ವಕಪ್ ಪಂದ್ಯಾವಳಿಯಲ್ಲಂತೂ ಅತಿರಥ ಮಹಾರಥರೇ ಮಣ್ಣುಮುಕ್ಕಿದ್ದಾರೆ. ಅಂದುಕೊಂಡ ಎಲ್ಲ ತಂಡಗಳು ಮನೆಗೆ ಹೋಗಿವೆ. ಅಂತಹದ್ದರಲ್ಲಿ ಇವತ್ತಿನ ಮತ್ತೊಂದು ಸೆಮಿಫೈನಲ್ ಹಣಾಹಣಿ ತೀವ್ರ ಕುತೂಹಲಕ್ಕೆ ಕಾರಣವಾಗಿವೆ. 1966ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಇಂಗ್ಲೆಂಡ್ ಆ ಬಳಿಕ ಪ್ರಶಸ್ತಿಯ ಸನಿಹಕ್ಕೂ ಸುಳಿದಿಲ್ಲ. ಈ ವಿಶ್ವಕಪ್ನಲ್ಲಿ ಗೆದ್ದು […]