ಒಂದು ಲಕ್ಷ ಕುಟುಂಬಗಳಿಗೆ ಸಿಲಿಂಡರ್​, ಸ್ಟವ್​​ ವಿತರಣೆ: ಸಚಿವ ಜಮೀರ್ ಅಹ್ಮದ್

Thursday, November 29th, 2018
zameer-ahmed

ಬೆಂಗಳೂರು: ಬಡತನದ ರೇಖೆಗಿಂತ ಕೆಳಗಿರುವ ಒಂದು ಲಕ್ಷ ಕುಟುಂಬಗಳಿಗೆ ಡಿಸೆಂಬರ್ 15 ರೊಳಗೆ ಸಿಲಿಂಡರ್ ಮತ್ತು ಸ್ಟವ್ಗಳನ್ನು ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರತಿ ಕುಟುಂಬಕ್ಕೆ 4,450 ರೂ. ವೆಚ್ಚದಲ್ಲಿ ಎರಡು ಸಿಲಿಂಡರ್, ಒಂದು ಸ್ಟವ್ ಮತ್ತು ರೆಗ್ಯುಲೇಟರ್‌ಗಳನ್ನು ನೀಡಲಾಗುವುದು. ಈಗಾಗಲೇ 4 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ […]

ಮಂಗಳೂರಲ್ಲಿ ಎಂಎಲ್​ಸಿ ಮಗಳ ಮದುವೆಯಲ್ಲಿ ಪಾಲ್ಗೊಂಡ ಹೆಚ್​ಡಿಕೆ ಕುಟುಂಬ..!

Saturday, November 17th, 2018
marriege

ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ಉಳ್ಳಾಲದ ಸೋಮೇಶ್ವರದಲ್ಲಿ ನಡೆದ ಎಂಎಲ್ಸಿ ಬಿ.ಎಂ.ಫಾರೂಕ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಿಗಿ ಬಂದೋಬಸ್ತ್ನಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಕಾರಿನಲ್ಲಿ‌ ಬಂದಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಹೆಚ್.ಡಿ.ದೇವೇಗೌಡ, ಅನಿತಾ ಕುಮಾರಸ್ವಾಮಿ, ದೇವೇಗೌಡರ ಪತ್ನಿ ಚೆನ್ನಮ್ಮ ಹಾಗೂ ಕುಟುಂದವರನ್ನು ಬಿ.ಎಂ.ಫಾರೂಕ್ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಸ್ವಾಗತಿಸಿದರು. ಈ ಸಂದರ್ಭ ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿ.ಎಂ.ಫಾರೂಕ್ ಅವರ ಆತಿಥ್ಯ ಸ್ವೀಕರಿಸಿದರು

ಸಂತ್ರಸ್ತರಿಗೆ ಬಿಸ್ಕೆಟ್​ ಎಸೆದ ಸಚಿವ ರೇವಣ್ಣ ವರ್ತನೆಗೆ ನೆಟಿಜನ್ಸ್​ ಆಕ್ರೋಶ

Monday, August 20th, 2018
hd-revanna

ಹಾಸನ: ನೆರೆ ಸಂತ್ರಸ್ತರ ಶಿಬಿರದಲ್ಲಿ ಅಮಾನವೀಯ ನಡೆ ತೋರಿದ್ದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ವರ್ತನೆಗೆ ನೆಟಿಜನ್ಸ್ಗಳಿಂದ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಹಾಸನದ ರಾಮನಾಥಪುರ ಸಂತ್ರಸ್ತರ ಶಿಬಿರಕ್ಕೆ ಸಚಿವ ಹೆಚ್ ಡಿ ರೇವಣ್ಣ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಶಿಬಿರದಲ್ಲಿ ಸಂತ್ರಸ್ತರ ಕೈಗೆ ಬಿಸ್ಕೇಟ್ ಪ್ಯಾಕ್ ಕೊಡುವ ಬದಲು ಮೈಮೇಲೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿರುವ ನೆಟಿಜೆನ್ಸ್ ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಅವರ […]

ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆ: ಹೆಚ್.ಡಿ.ರೇವಣ್ಣ

Thursday, June 21st, 2018
H-D-Revanna

ಬೆಂಗಳೂರು: ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಜಲ್ಲಿ ಹಾಕಿ ಮುಚ್ಚಲಾಗುವುದು. ಮಳೆಗಾಲ ಬಳಿಕ ಅದಕ್ಕೆ ಟಾರ್ ಹಾಕಲಾಗುವುದು. ಈ ನಿಟ್ಟಿನಿಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು. ರಸ್ತೆ ಗುಂಡಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಪ್ರದಾನ ಕಾರ್ಯದರ್ಶಿ, ಚೀಫ್ ಇಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದೇನೆ. […]

ಹಾಸನ ಜಿಲ್ಲೆಯನ್ನು ನಂ.1 ಮಾಡಿದವರಿಗೆ ಅವಾರ್ಡ್‌ : ಸಚಿವ ಹೆಚ್.ಡಿ.ರೇವಣ್ಣ

Thursday, June 14th, 2018
h-d-revanna

ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯೂ ಎಲ್ಲಾ ಕ್ಷೇತ್ರದಲ್ಲಿಯೂ ನಂ.1 ಮಾಡಬೇಕು. ಉತ್ತಮ ಕಾರ್ಯ ಮಾಡುವ ಪಿಡಿಓ ಮತ್ತು ಕಾರ್ಯದರ್ಶಿಗಳಿಗೆ ಅವಾರ್ಡ್ ನೀಡುವುದಾಗಿ ಸಚಿವರು ಘೋಷಿದರು. 25 ರಿಂದ 50 ಸಾವಿರ ರೂ. ವರೆಗೂ ಬಹುಮಾನದೊಂದಿಗೆ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದರು. 600ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರಿಂದ ಹೇಮಾವತಿ ಸಂಭಾಗಣ ತುಂಬಿ ತುಳುಕುತ್ತಿತ್ತು. ಸಂಭಾಗಣದಲ್ಲಿ ಕೂರಲು ಸ್ಥಳವಿಲ್ಲದೇ ಹೊರಾಂಗಣದಲ್ಲಿ, ಮೀಟಿಂಗ್ […]